ಒಂದಲ್ಲ ಎರಡಲ್ಲ 85 ಹುಡುಗಿಯರೊಂದಿಗೆ ಈ ಕೆಲಸ ಮಾಡುತ್ತಿರುವ ಭೂಪ!

ತನ್ನ ಗೆಳೆಯ 85 ಹುಡುಗಿಯರಿಗೆ ಡೇಟಿಂಗ್ ಆ್ಯಪ್(Dating Apps) ಮೂಲಕ ಒಂದೇ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದ ಅಂತಾ ಮಹಿಳೆ ಹೇಳಿದ್ದಾಳೆ.

Written by - Puttaraj K Alur | Last Updated : Feb 21, 2022, 05:43 PM IST
  • 85 ಹುಡುಗಿಯರಿಗೆ ಡೇಟಿಂಗ್ ಆಪ್ ಮೂಲಕ ಒಂದೇ ರೀತಿಯ ಸಂದೇಶ ಕಳುಹಿಸುತ್ತಿದ್ದ ವ್ಯಕ್ತಿ
  • ಗೆಳೆಯನ ಬಣ್ಣ ಬಯಲು ಮಾಡಿದ ಮಹಿಳೆ ಟಿಕ್‌ಟಾಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ
  • ನನ್ನ ಬಾಯ್‌ಫ್ರೆಂಡ್ ನನಗೆ ಮೋಸ ಮಾಡಲು ಸಾಧ್ಯವಿಲ್ಲವೆಂದು ಹೇಳಿರುವ ಮಹಿಳೆ
ಒಂದಲ್ಲ ಎರಡಲ್ಲ 85 ಹುಡುಗಿಯರೊಂದಿಗೆ ಈ ಕೆಲಸ ಮಾಡುತ್ತಿರುವ ಭೂಪ! title=
ಡೇಟಿಂಗ್ ಆ್ಯಪ್ ನಲ್ಲಿ 85 ಹುಡುಗಿಯರೊಂದಿಗೆ ಡೇಟಿಂಗ್

ವಾಷಿಂಗ್ಟನ್: ಒಬ್ಬ ವ್ಯಕ್ತಿ ಒಬ್ಬಳು ಅಥವಾ ಇಬ್ಬರು ಹುಡುಗಿಯರೊಂದಿಗೆ ಡೇಟಿಂಗ್(Dating) ಮಾಡುವುದನ್ನು ನೀವು ನಿಮ್ಮ ಸುತ್ತಮುತ್ತ ನೋಡಿರುತ್ತೀರಿ. ಆದರೆ ಅಮೆರಿಕದಲ್ಲಿ ಒಬ್ಬ ವ್ಯಕ್ತಿ ಏಕಕಾಲದಲ್ಲಿಯೇ 85 ಮಹಿಳೆಯರೊಂದಿಗೆ ಡೇಟಿಂಗ್ ಮಾಡಿದ್ದಾನೆಂದು ತಿಳಿದರೆ ನೀವು ನಿಜಕ್ಕೂ ಆಶ್ಚರ್ಯಪಡುತ್ತೀರಿ. ಹೌದು, ಅಚ್ಚರಿಯಾದರೂ ಇದು ನಿಜ.

ಈ ವ್ಯಕ್ತಿಗೆ ಈಗಾಗಲೇ ಗೆಳತಿಯೊಬ್ಬಳು ಇದ್ದಳಂತೆ. ಆಕೆ ಇದ್ದರೂ ಈ ಚಪಲ ಚೆನ್ನಿಗರಾಯ ಇತರ ಹುಡುಗಿಯರೊಂದಿಗೆ ಡೇಟಿಂಗ್ ಮಾಡುತ್ತಿದ್ದನಂತೆ. ಇದನ್ನು ಸ್ವತಃ ಆತನ ಗೆಳತಿಯೇ ಬಹಿರಂಗಪಡಿಸಿದ್ದಾಳೆ. ಈ ಮಹಿಳೆ ಟಿಕ್‌ಟಾಕ್‌(TikTok)ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ತನ್ನ ಗೆಳೆಯ 85 ಹುಡುಗಿಯರಿಗೆ ಡೇಟಿಂಗ್ ಆ್ಯಪ್(Dating Apps) ಮೂಲಕ ಒಂದೇ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದ ಅಂತಾ ಹೇಳಿದ್ದಾಳೆ. ಆದರೆ, ಆ ಯುವತಿಯರಿಂದ ಯಾವುದೇ ರೀತಿ ಉತ್ತರ ಬಂದಿಲ್ಲವಂತೆ.

ಇದನ್ನೂ ಓದಿ: ಸೈನ್ಸ್ ಲ್ಯಾಬ್ ನಲ್ಲಿತ್ತು ಭಾರೀ ಗಾತ್ರದ ಹೆಬ್ಬಾವು.. ಬೆಚ್ಚಿಬಿದ್ದ ಪ್ರಯೋಗಾಲಯದ ಒಳಗೆ ಬಂದ ಟೀಚರ್!

ಗೆಳೆಯನ ಫೋನ್‌ನಲ್ಲಿ ಡೇಟಿಂಗ್ ಆ್ಯಪ್ ಪತ್ತೆ!

ವರದಿಗಳ ಪ್ರಕಾರ, ತನ್ನ ಗೆಳೆಯನ ಈ ಘನಂದಾರಿ ಕೆಲಸವನ್ನು ಪತ್ತೆ ಹಚ್ಚಿರುವ ಈ ಮಹಿಳೆಯ ಹೆಸರು ಟೋರಿ ಅಂತಾ. ಈಕೆ ತನ್ನ ಟಿಕ್‌ಟಾಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾಳೆ. ಪ್ರಿಯಕರನ ಮೊಬೈಲ್‌ನಲ್ಲಿ ಡೇಟಿಂಗ್ ಆ್ಯಪ್(Dating Apps)  ನೋಡಿದ್ದು, ಆ ಬಳಿಕ ಗೆಳೆಯನ ಬಣ್ಣವನ್ನು ಬಯಲು ಮಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾಳೆ.

ಎಲ್ಲಾ ಹುಡುಗಿಯರಿಗೂ ಒಂದೇ ರೀತಿಯ ಸಂದೇಶ!

ತನ್ನ ಬಾಯ್‌ಫ್ರೆಂಡ್‌ನ ಮೊಬೈಲ್‌ನಲ್ಲಿ ಡೇಟಿಂಗ್ ಆ್ಯಪ್ ಡೌನ್‌ಲೋಡ್(Dating Apps Download)ಆಗಿರುವುದನ್ನು ಮಹಿಳೆ ನೋಡಿದ್ದಾಳೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತ ಬರೋಬ್ಬರಿ 85 ಹುಡುಗಿಯರಿಗೆ ಒಂದೇ ರೀತಿಯ ಸಂದೇಶ ಕಳುಹಿಸಿರುವುದು ಗೊತ್ತಾಗಿದೆ. ಅನೇಕ ಹುಡುಗಿಯರೊಂದಿಗೆ ಏಕಕಾಲಕ್ಕೆ ಡೇಟಿಂಗ್ ನಡೆಸಲು ಆತ ಒಂದೇ ರೀತಿಯ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ. ಆದರೆ ಈತ ಕಳುಹಿಸುತ್ತಿದ್ದ ಸಂದೇಶಗಳಿಗೆ ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರುತ್ತಿದ್ದಿಲ್ಲವಂತೆ.  

ಇದನ್ನೂ ಓದಿ: ದೊಡ್ಡ ಕಿವಿಗಳು, ಕೂದಲಿಲ್ಲದ ದೇಹ.. ವಿಚಿತ್ರ ಪ್ರಾಣಿಯ ಜನನದಿಂದ ಆಶ್ಚರ್ಯಚಕಿತರಾದ ಜನರು

ನನ್ನ ಬಾಯ್‌ಫ್ರೆಂಡ್ ನನಗೆ ಮೋಸ ಮಾಡಲು ಸಾಧ್ಯವಿಲ್ಲ!

ನನ್ನ ಬಾಯ್‌ಫ್ರೆಂಡ್(BoyFriend) ಏಕಕಾಲಕ್ಕೆ ಒಂದೇ ರೀತಿಯ ಸಂದೇಶಗಳನ್ನು ಅನೇಕ ಹುಡುಗಿಯರಿಗೆ ಕಳುಹಿಸಿದರೂ ಅವರ್ಯಾರು ಆತನಿಗೆ ಮರುಸಂದೇಶ ಕಳುಹಿಸಿಲ್ಲ. ಇದೇ ನನಗೆ ತುಂಬಾ ಆಶ್ಚರ್ಯವಾಗಿದೆ. ಇತರ ಹುಡುಗಿಯರೊಂದಿಗೆ ಮಾತನಾಡಲು ಹತಾಶನಾಗಿರುವ ತನ್ನ ಗೆಳೆಯನನ್ನು ನೋಡಿದಾಗ ನನ್ನ ಹೃದಯ ಒಡೆದುಹೋಯಿತು ಎಂದು ಮಹಿಳೆ ಹೇಳಿದ್ದಾಳೆ. ನನ್ನ ಬಾಯ್‌ಫ್ರೆಂಡ್ ನನಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಆಕೆ ತಿಳಿಸಿದ್ದಾಳೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News