ಭಾರತದ ನಿರ್ಧಾರದಿಂದ ವಿಶ್ವದಾದ್ಯಂತ ಗುರಿಯಿಟ್ಟಿದ್ದ ಚೀನಾದ ಟಿಕ್‌ಟಾಕ್‌ಗೆ ಸಂಕಷ್ಟ

ಕರೋನಾವೈರಸ್‌ನಿಂದಾಗಿ ಚೀನಾದ ಆರ್ಥಿಕತೆಯು ಈಗಾಗಲೇ ದಿಗ್ಭ್ರಮೆಗೊಂಡಿದೆ, ಅಂತಹ ಪರಿಸ್ಥಿತಿಯಲ್ಲಿ ಅದರ ಕಂಪನಿಗಳ ಮೇಲಿನ ನಿಷೇಧವು ಅದರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. 

Last Updated : Jul 18, 2020, 08:23 AM IST
ಭಾರತದ ನಿರ್ಧಾರದಿಂದ ವಿಶ್ವದಾದ್ಯಂತ ಗುರಿಯಿಟ್ಟಿದ್ದ ಚೀನಾದ ಟಿಕ್‌ಟಾಕ್‌ಗೆ ಸಂಕಷ್ಟ title=

ನವದೆಹಲಿ: ಕರೋನಾವೈರಸ್ ಹರಡಿದಾಗಿನಿಂದ ಮತ್ತು ಭಾರತದೊಂದಿಗಿನ ವಿವಾದದಿಂದಾಗಿ ಚೀನಾದ ಕಂಪನಿಗಳು ವಿಶ್ವದ ಕೆಂಗಣ್ಣಿಗೆ ಗುರಿಯಾಗಿವೆ. ಅದರಲ್ಲೂ ವಿಶೇಷವಾಗಿ ಟಿಕ್‌ಟಾಕ್ (Tiktok) ಹೆಚ್ಚು ನಷ್ಟ ಅನುಭವಿಸಿದೆ. ಲಡಾಖ್ ಹಿಂಸಾಚಾರದ ನಂತರ  ಟಿಕ್‌ಟಾಕ್‌ ಸೇರಿದಂತೆ 59 ಚೀನೀ ಆ್ಯಪ್‌ಗಳನ್ನು ಭಾರತ ನಿಷೇಧಿಸಿತು ಮತ್ತು ಈಗ ಯುಎಸ್ (US) ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಇದಲ್ಲದೆ ಪಾಕಿಸ್ತಾನದಲ್ಲೂ ಟಿಕ್‌ಟಾಕ್ ನಿಷೇಧ ಹೇರುವ ಬೇಡಿಕೆ ಇದೆ.

ಜಗತ್ತಿನಾದ್ಯಂತ ಚೀನಾ (China) ವಿರುದ್ಧ ತಲೆದೋರಿರುವ ಈ ಬಿಕ್ಕಟ್ಟಿನಿಂದಾಗಿ ಚೀನಾದ ಕಂಪನಿಯು ಬೈಟ್ ಡಾನ್ಸ್, ಟಿಕ್‌ಟಾಕ್‌ ಅನ್ನು ಮಾರಾಟ ಮಾಡುವತ್ತ ಮುಖಮಾಡಿದೆ. ಪ್ರಸ್ತುತ ಸಮಯದಲ್ಲಿ ಇದರ ಸಾಧ್ಯತೆ ಹೆಚ್ಚು ಎಂದು ಶ್ವೇತಭವನ ಕೂಡ ಅಭಿಪ್ರಾಯಪಟ್ಟಿದೆ.  ತನ್ನನ್ನು ರಕ್ಷಿಸಿಕೊಳ್ಳಲು ಬೈಟ್ ಡಾನ್ಸ್ ವಿವಾದಿತ ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು ಮಾರಾಟ ಮಾಡಬಹುದು ಎಂದು ಯುಎಸ್ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಳಕೆದಾರರಲ್ಲಿ ಮ್ಯಾಜಿಕ್ ಹುಟ್ಟುಹಾಕಿವೆ 'ಮೇಡ್ ಇನ್ ಇಂಡಿಯಾ'ದ ಈ 2 ಆ್ಯಪ್‌ಗಳು

ನಾವು ಚೀನೀ ಅಪ್ಲಿಕೇಶನ್ ಅನ್ನು ನಿಷೇಧಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ, ಆದರೆ ಟಿಕ್‌ಟಾಕ್ ವಿರುದ್ಧದ ವಾತಾವರಣವನ್ನು ನಿರ್ಮಿಸುವ ವಿಧಾನ, ಬೈಟ್ ಡಾನ್ಸ್ ಅದರಿಂದ ಹೊರಬರಬಹುದು. ಬೈಟ್ ಡಾನ್ಸ್ ಈ ರೀತಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ನಾವೂ ಭಾವಿಸುತ್ತೇವೆ. ಬೈಟ್ ಡಾನ್ಸ್‌ನ ಜೊತೆಗೆ ಟಿಕ್‌ಟಾಕ್ ನಿಷೇಧದಿಂದಾಗಿ ಚೀನಾ ಕೂಡ ಗಮನಾರ್ಹ ಆರ್ಥಿಕ ನಷ್ಟವನ್ನು ಅನುಭವಿಸಿದೆ ಎಂದು ಕುಡ್ಲೋ ಹೇಳಿದರು.

ಕರೋನಾವೈರಸ್‌ನಿಂದಾಗಿ ಚೀನಾದ ಆರ್ಥಿಕತೆಯು ಈಗಾಗಲೇ ದಿಗ್ಭ್ರಮೆಗೊಂಡಿದೆ, ಅಂತಹ ಪರಿಸ್ಥಿತಿಯಲ್ಲಿ ಅದರ ಕಂಪನಿಗಳ ಮೇಲಿನ ನಿಷೇಧವು ಅದರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಚೀನಾದಲ್ಲಿ ಉದ್ಯೋಗ ಬಿಕ್ಕಟ್ಟು ಉದ್ಭವಿಸಿದೆ. ಎಂಟು ದಶಲಕ್ಷಕ್ಕೂ ಹೆಚ್ಚು ಚೀನೀ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ ಮತ್ತು ಉದ್ಯೋಗವನ್ನು ಹುಡುಕುತ್ತಿದ್ದಾರೆ. ಆದರೆ ಚೀನಾದಲ್ಲಿ ಉದ್ಯೋಗದ ಅಭಾವ ಎದುರಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಜೂನ್‌ನಲ್ಲಿ ನಗರ ನಿರುದ್ಯೋಗ ದರವು ಶೇಕಡಾ 5.7 ರಷ್ಟಿತ್ತು. ಆದಾಗ್ಯೂ ನಿಜವಾದ ಅಂಕಿ ಅಂಶವು ಇದಕ್ಕಿಂತ ಹೆಚ್ಚು ಎಂದು ನಂಬಲಾಗಿದೆ.

ಟಿಕ್‌ಟಾಕ್ ಡಿಲೀಟ್ ಮಾಡುವಂತೆ ತನ್ನ ನೌಕರರಿಗೆ ಸೂಚಿಸಿದ ಅಮೆಜಾನ್

ವರದಿಯ ಪ್ರಕಾರ 80 ದಶಲಕ್ಷ ಸೇವಾ ವಲಯ ಮತ್ತು 20 ದಶಲಕ್ಷ ಉತ್ಪಾದನಾ ವಲಯದ ನೌಕರರು ಕರೋನಾವೈರಸ್‌ (Coronavirus) ನಿಂದ ಪ್ರಭಾವಿತರಾಗಿದ್ದಾರೆ. ಇದಲ್ಲದೆ ವಿದೇಶಿ ಕಂಪನಿಗಳು ಚೀನಾವನ್ನು ಬಿಡಲು ಪ್ರಾರಂಭಿಸಿವೆ. ಆಪಲ್‌ನ ಪೂರೈಕೆದಾರ ಫಾಕ್ಸ್‌ಕಾನ್ ಭಾರತಕ್ಕಾಗಿ ತನ್ನ ಯೋಜನೆಗಳನ್ನು ಪ್ರಕಟಿಸಿದೆ. ಐಫೋನ್‌ಗಳು ಮತ್ತು ಐಪ್ಯಾಡ್‌ಗಳ ತಯಾರಕರು ಮುಂದಿನ ಮೂರು ವರ್ಷಗಳಲ್ಲಿ ಒಂದು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುತ್ತಾರೆ ಮತ್ತು ಈ ಹಣವು ತಮಿಳುನಾಡಿನ ಫಾಕ್ಸ್‌ಕಾನ್ ಘಟಕಕ್ಕೆ ಹೋಗುತ್ತದೆ. ಪ್ರಸ್ತುತ ಐಫೋನ್‌ನ ಲೋವರ್ ಎಂಡ್ ರೂಪಾಂತರಗಳನ್ನು ಈ ಸ್ಥಾವರದಲ್ಲಿ ಉತ್ಪಾದಿಸಲಾಗುತ್ತದೆ, ಆದರೆ ಹೂಡಿಕೆಯ ನಂತರ ಚೀನಾದಲ್ಲಿ ಉತ್ಪಾದನೆಯಾಗುವ ಇತರ ಐಫೋನ್ ಮಾದರಿಗಳನ್ನು ಇಲ್ಲಿ ತಯಾರಿಸಲಾಗುತ್ತದೆ.

Trending News