ಏನಿದು ಸೌರವ್ಯೂಹದಲ್ಲಿನ ಸೂಪರ್ ಅರ್ಥ್ ?

ಸೌರ ಮಂಡಲದಲ್ಲಿ ಸುತ್ತುತ್ತಿರುವ ಮತ್ತು ಸೂರ್ಯನ ಹತ್ತಿರವಿರುವ ಮತ್ತೊಂದು ನಕ್ಷತ್ರವನ್ನು ಸೂಪರ್ ಅರ್ಥ ನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ.ವಿಜ್ಞಾನಿಗಳು ಹೇಳುವಂತೆ ಈ ನಕ್ಷತ್ರವು ಭೂಮಿಗಿಂತ ದೊಡ್ಡದು ಹಾಗೂ ನೆಪ್ಚೂನ್ ಗಿಂತ ಚಿಕ್ಕದಾಗಿದೆ ಎಂದು ಅವರು ತಿಳಿಸಿದ್ದಾರೆ.  

Last Updated : Nov 15, 2018, 06:52 PM IST
ಏನಿದು ಸೌರವ್ಯೂಹದಲ್ಲಿನ ಸೂಪರ್ ಅರ್ಥ್ ? title=

ನವದೆಹಲಿ: ಸೌರ ಮಂಡಲದಲ್ಲಿ ಸುತ್ತುತ್ತಿರುವ ಮತ್ತು ಸೂರ್ಯನ ಹತ್ತಿರವಿರುವ ಮತ್ತೊಂದು ನಕ್ಷತ್ರವನ್ನು ಸೂಪರ್ ಅರ್ಥ ನ್ನು ವಿಜ್ಞಾನಿಗಳು ಕಂಡುಹಿಡಿದ್ದಾರೆ.ವಿಜ್ಞಾನಿಗಳು ಹೇಳುವಂತೆ ಈ ನಕ್ಷತ್ರವು ಭೂಮಿಗಿಂತ ದೊಡ್ಡದು ಹಾಗೂ ನೆಪ್ಚೂನ್ ಗಿಂತ ಚಿಕ್ಕದಾಗಿದೆ ಎಂದು ಅವರು ತಿಳಿಸಿದ್ದಾರೆ.  

ಈಗ ಈ ಸೂಪರ್ ಅರ್ಥ ಬಗ್ಗೆ ಪ್ರತಿಕ್ರಿಯಿಸಿರುವ  ಕಾರ್ನೆಗೆ ಖಗೋಳಶಾಸ್ತ್ರಜ್ಞ ಜೋಹನ್ನ ತೆಸ್ಕೆ " ನಾವು ಈಗ ಕಲ್ಪನೆಯಿಂದ ವಾಸ್ತವಕ್ಕೆ ಕಾಲಿಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಸೂಪರ್ ಅರ್ಥ್'ನ ಮೂಲ ನಕ್ಷತ್ರ ಬರ್ನಾಡ್ ಸ್ಟಾರ್‌ ಕೆಂಪು ಕುಬ್ಜ ನಕ್ಷತ್ರ ಎನ್ನಲಾಗಿದೆ.ಇದು ಸೂರ್ಯನಿಗಿಂತ ಎರಡು ಪಟ್ಟು ಹೆಚ್ಚು ವಯಸ್ಸಾಗಿರಬಹುದು ಎಂದು ತಿಳಿದುಬಂದಿದೆ ಆದ್ದರಿಂದ ಇದು ಅಧಿಕ ಬೆಳಕನ್ನು ಹೊರಸೂಸುವುದಿಲ್ಲ.ಈಗಾಗಿ ಸೌರಮಂಡಲದ ಕಕ್ಷೆಗಳಲ್ಲಿರುವ ಗ್ರಹಗಳನ್ನು ಪತ್ತೆ ಹಚ್ಚಲು ಆಗುದಿಲ್ಲ. ಈ ಬರ್ನಾಡ್ ಸ್ಟಾರ್‌ ಬಿ 'ಸೂಪರ್ ಅರ್ಥ್ ನ್ನು ಕಂಡು ಹಿಡಿಯಲು 20 ವರ್ಷಗಳಿಗೂ ಅಧಿಕ ಕಾಲ ಅಧ್ಯಯನ ಮಾಡಲಾಗಿದೆ 

ಕೇವಲ 6 ಜ್ಯೋತಿರ್‌ವರ್ಷಗಳಷ್ಟು ದೂರದಲ್ಲಿರುವ ಕೆಂಪು ಕುಬ್ಜ ನಕ್ಷತ್ರವಾಗಿರುವ ಬರ್ನಾಡ್‌ ನಕ್ಷತ್ರದಲ್ಲಿ ಈ 'ಸೂಪರ್ ಅರ್ಥ್' ಪತ್ತೆಯಾಗಿದೇ ಎಂದು ತಿಳಿದು ಬಂದಿದೆ.ಇನ್ನೊಂದು ವಿಶೇಷವೆಂದರೆ ಇದು ನಮ್ಮ ಸೌರ ಮಂಡಲಕ್ಕೆ ಹತ್ತಿರುವ ನಕ್ಷತ್ರವಾಗಿದೆ ಎಂದು ಹೇಳಲಾಗಿದೆ.ಅಲ್ಲದೇ ಇದನ್ನು ಅಲ್ಪಾ ಸೆಂಚುರಿ ವ್ಯವಸ್ಥೆಗೆ ಹತ್ತಿರವಿದೆ ಎಂದು ಹೇಳಲಾಗುತ್ತಿದೆ. 

 

 

Trending News