ಸಿಂಗಾಪುರ: Book On Prophet Mohammed - ಪ್ರವಾದಿ ಮೊಹಮ್ಮದ್ (Prophet Mohammed) ಅವರ ಕುರಿತಾದ ವ್ಯಂಗ್ಯಚಿತ್ರಗಳು ಮತ್ತು ವಿವಾದಾತ್ಮಕ ಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಸಿಂಗಾಪುರದಲ್ಲಿ (Singapore) ಪುಸ್ತಕವೊಂದನ್ನು ನಿಷೇಧಿಸಲಾಗಿದೆ. ಸಿಂಗಾಪುರದಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿಡಂಬನಾತ್ಮಕ ಮತ್ತು ಅವಹೇಳನಕಾರಿ ಚಿತ್ರಗಳನ್ನು ಪ್ರಕಟಿಸುವುದನ್ನು ಒಪ್ಪಿಕೊಳ್ಳಲಾಗದ ಕಾರಣ ರಾಜಕೀಯ ವ್ಯಂಗ್ಯಚಿತ್ರಗಳನ್ನು (Political Cartoon) ಒಳಗೊಂಡಿರುವ ಪುಸ್ತಕವನ್ನು ನಿಷೇಧಿಸಲಾಗಿದೆ ಎಂದು ಮುಸ್ಲಿಂ ವ್ಯವಹಾರಗಳ ಸಚಿವ (Muslim Affairs Minister Masagos Zulkiphali) ಮಸಾಗೋಸ್ ಜುಲ್ಕಿಫಾಲಿ ಹೇಳಿದ್ದಾರೆ.
ಇತರ ಧರ್ಮಗಳನ್ನೂ ಅವಮಾನಿಸಲಾಗಿದೆ
ಸಿಂಗಾಪುರದ ಸಂಸತ್ತಿನಲ್ಲಿ ಮಾತನಾಡಿದ ಮಸಾಗೋಸ್, ರೆಡ್ ಲೈನ್ಸ್: ಪೊಲಿಟಿಕಲ್ ಕಾರ್ಟೂನ್ಸ್ ಅಂಡ್ ದಿ ಸ್ಟ್ರಗಲ್ ಎಗೇನ್ಸ್ಟ್ ಸೆನ್ಸಾರ್‌ಶಿಪ್ (Red Lines: Political Cartoons And The Struggle Against Censorship) ಎಂಬ ಪುಸ್ತಕದಲ್ಲಿನ ಚಿತ್ರಗಳು ಫ್ರೀ ಸ್ಪೀಚ್, ಶಿಕ್ಷಣ ಅಥವಾ ಇನ್ನಾವುದೇ ಹೆಸರಿನಲ್ಲಿ ಪ್ರಕಟವಾಗಿದ್ದರೂ ಮುಸ್ಲಿಮರಿಗೆ ಆಕ್ಷೇಪಾರ್ಹವಾಗಿವೆ ಎಂದು ಹೇಳಿದ್ದಾರೆ. ಪುಸ್ತಕದಲ್ಲಿ ಪ್ರವಾದಿ ಮತ್ತು ಇಸ್ಲಾಂ ಅವರ ವ್ಯಂಗ್ಯಚಿತ್ರಗಳಲ್ಲದೆ ಇತರ ಧರ್ಮಗಳನ್ನು ಅವಮಾನಿಸುವ ಚಿತ್ರಗಳೂ ಇವೆ ಎಂದು ಅವರು ಹೇಳಿದ್ದಾರೆ.
ಲೇಖಕರ ಚಿಂತನೆಯನ್ನು ಸರ್ಕಾರ ಒಪ್ಪುವುದಿಲ್ಲ
ಈ ಕುರಿತು ಮಾತನಾಡಿರುವ ಮುಸ್ಲಿಂ ವ್ಯವಹಾರಗಳ ಸಚಿವ ಮಸಾಗೋಸ್ ಝುಲ್ಕಿಫ್ಲಿ, 'ಲೇಖಕರು ಪುಸ್ತಕದ ಮಾಧ್ಯಮದ ಮೂಲಕ ಯಾರನ್ನೂ ಅವಮಾನಿಸುವ ಅಥವಾ ಕೀಳಾಗಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಬಹುದು, ಅವರ ಉದ್ದೇಶ ಶಿಕ್ಷಣವಾಗಿದೆ, ಆದರೆ ಸರ್ಕಾರ ಅದನ್ನು ತಿರಸ್ಕರಿಸುತ್ತದೆ' ಎಂದು ಹೇಳಿದ್ದಾರೆ. ವರದಿಯ ಪ್ರಕಾರ, ಸಿಂಗಾಪುರದ ಸರ್ಕಾರಿ ಸಂಸ್ಥೆ ಇನ್ಫೋಕಾಮ್ ಮೀಡಿಯಾ ಡೆವಲಪ್‌ಮೆಂಟ್ ಅಥಾರಿಟಿ (IMDA) ಕಳೆದ ನವೆಂಬರ್‌ನಲ್ಲಿ ಆಗಸ್ಟ್‌ನಲ್ಲಿ ಪ್ರಕಟವಾದ ಪುಸ್ತಕವನ್ನು ಸಿಂಗಾಪುರದಲ್ಲಿ ಮಾರಾಟ ಮಾಡಲು ಅಥವಾ ವಿತರಿಸಲು ಅನುಮತಿಸುವುದಿಲ್ಲ ಎಂದು ಹೇಳಿದೆ. ಏಕೆಂದರೆ ಈ ಪುಸ್ತಕವನ್ನು Undesirable Publication Act ಅಡಿಯಲ್ಲಿ 'ಆಕ್ಷೇಪಾರ್ಹ' ವರ್ಗದಲ್ಲಿ ಇರಿಸಲಾಗಿದೆ ಮತ್ತು ವಿಷಯ ಧರ್ಮಗಳನ್ನು ದೂಷಿಸುವ ವಿಷಯವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ-US Embassy: ಯುಎಸ್ ರಾಯಭಾರ ಕಚೇರಿಯ ಮೇಲೆ ರಾಕೆಟ್ ದಾಳಿ
US ಸೇರಿದಂತೆ ಹಲವು ದೇಶಗಳಲ್ಲಿ ಮಾರಾಟ
ಫ್ರೆಂಚ್ ನಿಯತಕಾಲಿಕೆ ಚಾರ್ಲಿ ಹೆಬ್ಡೊದಿಂದ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ಸಹ ಈ ಪುಸ್ತಕ ಒಳಗೊಂಡಿದೆ ಎಂದು IMDA ಹೇಳಿದೆ, ಇದು ವಿದೇಶದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ. ಇದು ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮದ ಅವಹೇಳನಕಾರಿ ಉಲ್ಲೇಖಗಳನ್ನು ಸಹ ಒಳಗೊಂಡಿದೆ. ಪುಸ್ತಕವನ್ನು ಹಾಂಗ್ ಕಾಂಗ್ ಬ್ಯಾಪ್ಟಿಸ್ಟ್ ವಿಶ್ವವಿದ್ಯಾನಿಲಯದ ಮಾಧ್ಯಮ ಅಧ್ಯಯನದ ಪ್ರಾಧ್ಯಾಪಕರಾದ ಚೆರಿಯನ್ ಜಾರ್ಜ್ ಮತ್ತು ಗ್ರಾಫಿಕ್ ಕಾದಂಬರಿಕಾರ ಸನ್ನಿ ಲಿಯು ಬರೆದಿದ್ದಾರೆ. ಈಗಾಗಲೇ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪುಸ್ತಕ ವಿತರಿಸಲಾಗಿದೆ. ಪುಸ್ತಕವು ವಿಶ್ವಾದ್ಯಂತದ ರಾಜಕೀಯ ಕಾರ್ಟೂನ್‌ಗಳನ್ನು ಪರಿಶೀಲಿಸುತ್ತದೆ ಮತ್ತು ಕಾರ್ಟೂನ್ ಸೆನ್ಸಾರ್‌ಶಿಪ್‌ಗೆ ವಿವಿಧ ಪ್ರೇರಣೆಗಳು ಮತ್ತು ವಿಧಾನಗಳನ್ನು ವಿವರಿಸುತ್ತದೆ.
ಇದನ್ನೂ ಓದಿ-Zero Covid ನಿಯಮ, ಜನರನ್ನು ಲೋಹದ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ವಿಡಿಯೋ ವೈರಲ್.. ಎಲ್ಲಿ ಗೊತ್ತಾ?
'ನಾವು ಅಪಾಯಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ'
ಪ್ರವಾದಿಯವರ ಅವಹೇಳನಕಾರಿ ಚಿತ್ರಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಗಿವೆ ಮತ್ತು ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ನಾವು ಬಯಸುವುದಿಲ್ಲ ಎಂದು ಸಿಂಗಾಪುರ ಸಚಿವರು ಹೇಳಿದ್ದಾರೆ. ನಮ್ಮ ಜನಾಂಗೀಯ ಮತ್ತು ಧಾರ್ಮಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮತ್ತು ಬಲಪಡಿಸಲು ನಮ್ಮ ಎಲ್ಲಾ ಧಾರ್ಮಿಕ ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ, ಅದು ನಮ್ಮ ಐಕ್ಯ ಸಮಾಜದ ಆಧಾರವಾಗಿದೆ. ಯಾವುದೇ ಧಾರ್ಮಿಕ ಗುಂಪನ್ನು ಅವಮಾನಿಸಲು ಅಥವಾ ದಾಳಿ ಮಾಡಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. 2020 ರ ಜನಗಣತಿಯ ಪ್ರಕಾರ, ಸಿಂಗಾಪುರದಲ್ಲಿ 31% ಬೌದ್ಧರು, 18% ಕ್ರಿಶ್ಚಿಯನ್ನರು ಮತ್ತು 15.6% ರಷ್ಟು ಜನ ಮುಸ್ಲಿಂ ಸಮುದಾಯಕ್ಕೆ ಸೇರಿದ ಜನರಿದ್ದಾರೆ ಎಂಬುದು ಉಲ್ಲಿ ಉಲ್ಲೇಖನೀಯ. ಇನ್ನೊಂದೆಡೆ ಅಲ್ಲಿ ಹಿಂದೂಗಳ ಜನಸಂಖ್ಯೆಯು ಕೂಡ ಶೇಕಡಾ 5 ರಷ್ಟಿದೆ.
ಇದನ್ನೂ ಓದಿ-COVID-19 ಏಕಾಏಕಿ ಏರಿಕೆ ಕುರಿತು ಎಚ್ಚರಿಕೆ ನೀಡಿದ WHO!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.