ನವದೆಹಲಿ : ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿದ್ದು ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷವನ್ನು (Congress) ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸುವ ಎಲ್ಲಾ ಸಾಧ್ಯತೆಗಳಿವೆ. ನವಜೋತ್ ಸಿಂಗ್ ಸಿಧು ಅವರು ಇಂದು (ಶನಿವಾರ) ಪಾಕಿಸ್ತಾನದ ಕರ್ತಾರ್ಪುರ ಸಾಹಿಬ್ ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಧು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ತನ್ನ ಹಿರಿಯ ಸಹೋದರ ಎಂದು ಹೇಳಿದ್ದಾರೆ.
#KartarpurCorridor: #ImranKhan is like my big brother, says @INCPunjab
chief #NavjotSinghSidhu whole interacting with Muhammad Latif CEO, PMU, #Kartarpur project. pic.twitter.com/JTlgGy7xAy— Ravinder Singh Robin ਰਵਿੰਦਰ ਸਿੰਘ رویندرسنگھ روبن (@rsrobin1) November 20, 2021
ನವಜೋತ್ ಸಿಂಗ್ ಸಿಧು (Navjot Singh Sidhu)ಪಾಕಿಸ್ತಾನಕ್ಕೆ ಬೇಟಿ ನೀಡಿದ ವೇಳೆ ಅವರಿಗೆ ಅಲ್ಲಿ ಭವ್ಯ ಸ್ವಾಗತವನ್ನೇ ನೀಡಲಾಯಿತು. ಈ ಸಂದರ್ಭದಲ್ಲಿ, ಪಿಎಂಯು ಸಿಇಒ ಮುಹಮ್ಮದ್ ಲತೀಫ್ ಅವರೊಂದಿಗೆ ಮಾತನಾಡಿದ ಸಿಧು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ತಮ್ಮ ಹಿರಿಯ ಸಹೋದರ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ : Taliban: ಅಫ್ಘಾನ್ ಹುಡುಗಿಯರಿಗೆ ಸಿಹಿ ಸುದ್ದಿ, ಭೀಕರ ದೌರ್ಜನ್ಯದ ನಡುವೆ ಉತ್ತಮ ಕೆಲಸ ಮಾಡಿದ ತಾಲಿಬಾನ್
ಈ ಹಿಂದೆ ಕೂಡಾ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ಪರ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಪಾಕ್ ಪ್ರಧಾನಿ (Pakistan PM) ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಸಿಧು ಪಾಲ್ಗೊಂಡಿದ್ದರು. ಸಿಧು ಅವರ ಪಾಕಿಸ್ತಾನ (pakistan) ಪರ ಧೋರಣೆಯನ್ನು ವಿರೋಧ ಪಕ್ಷಗಳು ಕೂಡ ಖಂಡಿಸುತ್ತಲೇ. ಇದೀಗ ಮತ್ತೊಮ್ಮೆ ಪಾಕ್ ಪ್ರಧಾನಿ ಬಗ್ಗೆ ನೀಡಿರುವ ಹೇಳಿಕೆ, ಪ್ರತಿಪಕ್ಷಗಳಿಗೆ ವಾಗ್ದಾಳಿ ನಡೆಸಲು ಅವಕಾಶ ಮಾಡಿಕೊಟ್ಟಂತಾಗಿದೆ.
ಈ ಹಿಂದೆ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಮುಖ್ಯಮಂತ್ರಿಯನ್ನಾಗಿ ಮಾಡಬಹುದೆಂಬ ವರದಿಗಳು ಕೇಳಿ ಬಂದಾಗ, ಇಮ್ರಾನ್ ಖಾನ್ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಸ್ನೇಹಿತ ಸಿಧು ಮುಖ್ಯಮಂತ್ರಿಯಾಗುವುದಾದರೆ, ಇದೊಂದು ವಿನಾಶಕಾರಿ ಬೆಳವಣಿಗೆ ಎಂದು ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ (Amarinder Singh) ಹೇಳಿದ್ದರು. ನವಜೋತ್ ಸಿಂಗ್ ಸಿಧು ನವೆಂಬರ್ 18 ರಂದು ಪಾಕಿಸ್ತಾನದ ಕರ್ತಾರ್ಪುರಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಭದ್ರತೆಯ ದೃಷ್ಟಿಯಿಂದ ಗೃಹ ಸಚಿವಾಲಯ ಅವರಿಗೆ ಅವಕಾಶ ನೀಡಿರಲಿಲ್ಲ. ಸಿಧು ಅವರ ಹೆಸರನ್ನು ಮೂರನೇ ಬ್ಯಾಚ್ನ ಯಾತ್ರಿಕರ ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಇದನ್ನೂ ಓದಿ : OMG: ಈ ಕುರ್ಚಿ ಮೇಲೆ ಕುಳಿತ ತಕ್ಷಣ ಸಾವು ಸಂಭವಿಸುತ್ತದೆ, ಅದಕ್ಕೆ ಗೋಡೆಗೆ ನೇತುಹಾಕಲಾಗಿದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.