ಇತ್ತೀಚೆಗಷ್ಟೇ ನೈಜಿರಿಯಾದಲ್ಲಿ ನಡೆದ ಮಿಸ್ ಆಫ್ರಿಕಾ 2018 ಸ್ಪರ್ಧೆಯಲ್ಲಿ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ನೈಜಿರಿಯಾದ ಕ್ರಾಸ್ ರಿವರ್ ಸ್ಟಾರ್'ನಲ್ಲಿ ಗುರುವಾರ ರಾತ್ರಿ ಮಿಸ್ ಆಫ್ರಿಕಾ 2018 ಫೈನಲ್ ಸ್ಪರ್ಧೆ ನಡೆಯಿತು. ಈ ಸಂದರ್ಭದಲ್ಲಿ ಮಿಸ್ ಕಾಂಗೋ ಡೋರ್ಕಾಸ್ ಕ್ಯಾಸಿಂಡೆ ಅವರನ್ನು ಮಿಸ್ ಆಫ್ರಿಕಾ 2018 ಎಂದು ಘೋಷಿಸುತ್ತಿದ್ದಂತೆಯೇ ವೇದಿಕೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಆದರೆ ಪಟಾಕಿಯ ಕಿಡಿ ಮಿಸ್ ಆಫ್ರಿಕಾ ವಿಜೇತೆ ಡೋರ್ಕಾಸ್ ಕ್ಯಾಸಿಂಡೆ ಅವರ ಕೂದಲಿಗೆ ತಗುಲಿದ್ದರಿಂದ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡ ಘಟನೆ ನಡೆಯಿತು.
ಸ್ಪರ್ಧೆಯಲ್ಲಿ ವಿಜೇತರಾಗಿ ಸಂಭ್ರಮಾಚರಣೆಯಲ್ಲಿದ್ದ ಡೋರ್ಕಾಸ್ ಕ್ಯಾಸಿಂಡೆ ಅವರು ಇದ್ದಕ್ಕಿದಂತೆ ತಮ್ಮ ಕೂದಲಿಗೆ ಬೆಂಕಿ ಹತ್ತಿಕೊಂಡಿದ್ದು ಕಂಡು ಆತಂಕಗೊಂದರು. ಅದೃಷ್ಟವಶಾತ್ ಕೂಡಲೇ ವೇದಿಕೆ ಬಳಿ ಬಂದ ವ್ಯಕ್ತಿಯೊಬ್ಬರು ಆಕೆಯ ತಲೆಗೆ ಹತ್ತಿಕೊಂಡ ಬೆಂಕಿ ಆರಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Miss Congo, Kasinde's hair caught on fire after she was crowned Miss Africa 2018 on stage. pic.twitter.com/6VxXGD58S5
— Africa Facts Zone (@AfricaFactsZone) December 28, 2018
A message from the new #MissAfrica2018Calabar Queen👑! She's fine guys. Happy for her new chapter in life. pic.twitter.com/BQeb93m2mV
— Miss Africa (@MissAfrica_2018) December 28, 2018
ಈ ಘಟನೆ ಬಳಿಕ ಡೋರ್ಕಾಸ್ ಕ್ಯಾಸಿಂಡೆ ಮಿಸ್ ಆಫ್ರಿಕಾ 2018 ಕಿರೀಟ ತೊಟ್ಟು ಸಂಭ್ರಮಿಸಿದರು. ಈ ಘಟನೆ ಹಾಸ್ಯದಂತೆ ಕಂಡರೂ, ಬಹಳ ಗಂಭೀರವಾದ ವಿಚಾರ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವೇದಿಕೆಯ ಮೇಲೆ ಪಟಾಕಿಗಳನ್ನು ಬಳಸಿದ ಆಯೋಜಕರ ವಿರುದ್ಧವೂ ನೆಟ್ಟಿಗರು ಕಿಡಿಕಾರಿದ್ದಾರೆ.