ಅಫ್ಘಾನಿಸ್ತಾನ: ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ, 60 ಮಂದಿಗೆ ಗಾಯ

ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನದಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸೋಮವಾರ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. 

Last Updated : Aug 19, 2019, 06:14 PM IST
ಅಫ್ಘಾನಿಸ್ತಾನ: ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ, 60 ಮಂದಿಗೆ ಗಾಯ title=
Pic Courtesy: ANI

ಕಾಬೂಲ್: ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನದಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸೋಮವಾರ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. 

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ಸರಣಿ ಸ್ಫೋಟಗಳಲ್ಲಿ 66 ಜನರು ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಭಾನುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬಾಂಬ್ ಸ್ಫೋಟ ನಡೆದಿದೆ. ಆ ದಾಳಿಯಲ್ಲಿ ಕನಿಷ್ಠ 63 ಜನರು ಸಾವನ್ನಪ್ಪಿದ್ದಾರೆ. 180 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಶನಿವಾರ ರಾತ್ರಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಇನ್ನೂ 180 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆಂತರಿಕ ಭದ್ರತಾ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ತಿಳಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಭಾನುವಾರದ ಅಪಘಾತದಿಂದಾಗಿ, ಐತಿಹಾಸಿಕ ದಾರ್-ಉಲ್-ಅಮನ್ ಅರಮನೆಯಲ್ಲಿ ದೇಶದ 100ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಅಫ್ಘಾನಿಸ್ತಾನ ಸರ್ಕಾರ ಮುಂದೂಡಿದೆ. ಅಧ್ಯಕ್ಷ ಮುಹಮ್ಮದ್ ಅಶ್ರಫ್ ಘನಿ ಅವರ ಸೂಚನೆಯ ಮೇರೆಗೆ ಅಫ್ಘಾನಿಸ್ತಾನದ 100ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಆಯೋಜನೆಯನ್ನು ಕಾರ್ಯದರ್ಶಿಗಳು ಮುಂದೂಡಿದ್ದಾರೆ ಎಂದು ಅಧ್ಯಕ್ಷೀಯ ವಕ್ತಾರ ಸೆಡಿಕ್ ಸೆಡಿಕ್ಕಿ ಹೇಳಿದ್ದಾರೆ.

ಟೋಲೊ ನ್ಯೂಸ್ ಪ್ರಕಾರ,"ವಿವಾಹ ಮಂಟಪದಲ್ಲಿ ನಡೆದ ಅಮಾನವೀಯ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಅನಾಗರಿಕ ದಾಳಿಗೆ ಬಲಿಯಾದ ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ" ಎಂದಿರುವ  ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಈ ದಾಳಿಯಲ್ಲಿ ತಾಲಿಬಾನ್ ಕೈ ಇರುವುದನ್ನು ನಿರಾಕರಿಸಿದ್ದಾರೆ.
 

Trending News