ಚಂದ್ರನ ಮೇಲೆ ಅಮೆರಿಕರನ್ನು ಕಳುಹಿಸಿ -ಡೊನಾಲ್ಡ್ ಟ್ರಂಪ್ ರಿಂದ ನಾಸಾಗೆ ಸಲಹೆ

"ಈ ಬಾರಿಯ ಚಂದ್ರನ ಮೇಲೆ  ಕೇವಲ ನಮ್ಮ ಧ್ವಜವನ್ನಷ್ಟೇ ನೆಡುವುದಿಲ್ಲ ಬದಲಾಗಿ ನಮ್ಮ ಹೆಜ್ಜೆಗುರುತುಗಳನ್ನು ಸಹಿತ ಮೂಡಿಸುತ್ತೇವೆ. ನಾವು  ಮಂಗಳಗ್ರಹಕ್ಕಾಗಿ ಹಾಕುತ್ತಿರುವ ತಳಹದಿ ಮುಂದೆ ಅದು ಇನ್ನು ಬೇರೆ ಗ್ರಹಗಳನ್ನು ಕೂಡ ತಿಳಿಯುವುದಕ್ಕೆ ನಾಂದಿ ಹಾಡುತ್ತದೆ." ಎಂದು ಟ್ರಂಪ್ ತಿಳಿಸಿದರು

Last Updated : Dec 12, 2017, 01:25 PM IST
  • ಈ ಹಿಂದೆ ಅಮೇರಿಕಾವು ಜುಲೈ 20 1969 ರಲ್ಲಿ ಮೊದಲಬಾರಿಗೆ ನೀಲ್ ಆರ್ಮ್ಸ್ಟ್ರಾಂಗ್ ರವರನ್ನು ಚಂದ್ರನ ಮೇಲೆ ಕಳುಹಿಸಿತ್ತು.
  • 2030ರ ವೇಳೆಗೆ ಮಂಗಳಗ್ರಹಕ್ಕೆ ಮಾನವನ್ನು ಕಳುಹಿಸುವ ಯೋಜನೆಯನ್ನು ಅಮೇರಿಕಾ ಇಟ್ಟುಕೊಂಡಿದೆ.
  • " ಈ ಬಾರಿಯ ಚಂದ್ರನ ಮೇಲೆ ಕೇವಲ ನಮ್ಮ ಧ್ವಜವನ್ನಷ್ಟೇ ನೆಡುವುದಿಲ್ಲ ಬದಲಾಗಿ ನಮ್ಮ ಹೆಜ್ಜೆಗುರುತುಗಳನ್ನು ಸಹಿತ ಮೂಡಿಸುತ್ತೇವೆ. ನಾವು ಮಂಗಳಗ್ರಹಕ್ಕಾಗಿ ಹಾಕುತ್ತಿರುವ ತಳಹದಿ ಮುಂದೆ ಅದು ಇನ್ನು ಬೇರೆ ಗ್ರಹಗಳನ್ನು ಕೂಡ ತಿಳಿಯುವುದಕ್ಕೆ ನಾಂದಿ ಹಾಡುತ್ತದೆ." ಎಂದು ಟ್ರಂಪ್ ತಿಳಿಸಿದರು
ಚಂದ್ರನ ಮೇಲೆ ಅಮೆರಿಕರನ್ನು ಕಳುಹಿಸಿ -ಡೊನಾಲ್ಡ್ ಟ್ರಂಪ್ ರಿಂದ ನಾಸಾಗೆ ಸಲಹೆ title=

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಂದ್ರನ ಮೇಲೆ ಮತ್ತೊಮ್ಮೆ  ಅಮೆರಿಕಾದವರನ್ನು ಕಳುಹಿಸಿ ಎಂದು ಇಲ್ಲಿನ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸಲಹೆ ನೀಡಿದ್ದಾರೆ. ಇದು ಮುಂದೆ ಮಂಗಳ ಗ್ರಹಕ್ಕೆ ಮಾನವನನ್ನು  ಕಳುಹಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಇಲ್ಲಿನ ಶ್ವೇತ ಭವನದಲ್ಲಿ ನೂತನ ಬಾಹ್ಯಾಕಾಶ ನಿರ್ದೇಶನಗಳಿಗೆ ಸಂಬಂಧಪಟ್ಟ ಕಾಯ್ದೆ ಸಹಿ ಹಾಕುವ ಸಂದರ್ಭದಲ್ಲಿ ಮಾತನಾಡಿದ ಅವರು " ಈ ಬಾರಿಯ ಚಂದ್ರನ ಮೇಲೆ  ಕೇವಲ ನಮ್ಮ ಧ್ವಜವನ್ನಷ್ಟೇ ನೆಡುವುದಿಲ್ಲ ಬದಲಾಗಿ ನಮ್ಮ ಹೆಜ್ಜೆಗುರುತುಗಳನ್ನು ಸಹಿತ ಮೂಡಿಸುತ್ತೇವೆ. ನಾವು  ಮಂಗಳಗ್ರಹಕ್ಕಾಗಿ ಹಾಕುತ್ತಿರುವ ತಳಹದಿ ಮುಂದೆ ಅದು ಇನ್ನು ಬೇರೆ ಗ್ರಹಗಳನ್ನು ಕೂಡ ತಿಳಿಯುವುದಕ್ಕೆ ನಾಂದಿ ಹಾಡುತ್ತದೆ." ಎಂದು ಟ್ರಂಪ್ ತಿಳಿಸಿದರು. ಈ ಹಿಂದೆ ಅಮೇರಿಕಾವು  ಜುಲೈ 20 1969 ರಲ್ಲಿ ಮೊದಲಬಾರಿಗೆ ನೀಲ್ ಆರ್ಮ್ಸ್ಟ್ರಾಂಗ್ ರವರನ್ನು ಚಂದ್ರನ ಮೇಲೆ ಕಳುಹಿಸಿತ್ತು. 

ಮಂಗಳಗ್ರಹದ ಪೂರ್ವ ತಯಾರಿಯಾಗಿ ಮತ್ತೆ ಚಂದ್ರನ ಮೇಲೆ ಮಾನವನ್ನು ಕಳುಹಿಸುವ ಯೋಜನೆಯನ್ನು ಅಮೆರಿಕಾ ಹಾಕಿಕೊಂಡಿದೆ. ಇದರ ನಂತರ ಅದು 2030ರ ವೇಳೆಗೆ ಮಂಗಳಗ್ರಹಕ್ಕೆ ಮಾನವನ್ನು ಕಳುಹಿಸುವ ಯೋಜನೆಯನ್ನು ಅಮೇರಿಕಾ ಇಟ್ಟುಕೊಂಡಿದೆ ಎಂದು ಹೊಸ ಬಾಹ್ಯಾಕಾಶ ಯೋಜನೆಯಲ್ಲಿ ತಿಳಿಸಲಾಗಿದೆ.

Trending News