Salman Rushdie Attacked In US: ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಖ್ಯಾತ ಬರಹಗಾರ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕಾರ್ಯಕ್ರಮದ ವೇಳೆ ಸಲ್ಮಾನ್ ರಶ್ದಿ ಅವರಿಗೆ ವೇದಿಕೆ ಮೇಲೆ ಚಾಕುವಿನಿಂದ ಈ ಹಲ್ಲೆ ನಡೆಸಲಾಗಿದೆ. ದಾಳಿಕೋರ ಸಲ್ಮಾನ್ ರಶ್ದಿಯವರಿಗೆ ಹಲವು ಬಾರಿ ಗುದ್ದಿದ್ದಾನೆ. ಈ ಸಮಾರಂಭದಲ್ಲಿ 75 ವರ್ಷದ ಸಲ್ಮಾನ್ ರಶ್ದಿ ಉಪನ್ಯಾಸ ನೀಡಬೇಕಿತ್ತು. ದಾಳಿಯಲ್ಲಿ ಗಾಯಗೊಂಡ ಸಲ್ಮಾನ್ ರಶ್ದಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು. ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ.
ಚೌಟೌಕ್ವಾ ಇನ್‌ಸ್ಟಿಟ್ಯೂಟ್‌ನಲ್ಲಿ ಭಾಷಣ ಕಾರ್ಯಕ್ರಮಕ್ಕೆ ಮುನ್ನ ನಡೆದ ಲೇಖಕ ಸಲ್ಮಾನ್ ರಶ್ದಿ ಅವರ ಮೇಲಿನ ಹಲ್ಲೆಯ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ. ರಾತ್ರಿ 11 ಗಂಟೆಯ ಸುಮಾರಿಗೆ ಶಂಕಿತ ವ್ಯಕ್ತಿಯೊಬ್ಬ ವೇದಿಕೆಗೆ ಬಂದು ರಶ್ದಿ ಮತ್ತು ಸಂದರ್ಶಕರ ಮೇಲೆ ಹಲ್ಲೆ ನಡೆಸಿದ್ದಾನೆ. ರಶ್ದಿಯ ಕುತ್ತಿಗೆಗೆ ಚಾಕು ಹಾಕಿದ ಕಾರಣ ಅವರನ್ನು ವಿಮಾನದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಸಂದರ್ಶಕರ ತಲೆಗೆ ಸಣ್ಣ ಗಾಯವಾಗಿದೆ. ದಾಳಿಕೋರನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಟ್ವೀಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ ಲೇಖಕರು
ಸಲ್ಮಾನ್ ರಶ್ದಿ ಮೇಲಿನ ದಾಳಿಯ ಬಗ್ಗೆ ಹಲವು ಸೆಲೆಬ್ರಿಟಿಗಳು ಟ್ವೀಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿ, "ಸಲ್ಮಾನ್ ರಶ್ದಿ ಅವರ ಮೇಲೆ ನ್ಯೂಯಾರ್ಕ್‌ನಲ್ಲಿ ದಾಳಿ ನಡೆದಿದೆ ಎಂಬ ಸಂಗತಿ ತಿಳಿದು, ನನಗೆ . ನಿಜವಾಗಿಯೂ ಆಘಾತವಾಗಿದೆ. ಇದು ಸಂಭವಿಸುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಅವರು ಪಶ್ಚಿಮದಲ್ಲಿ ವಾಸಿಸುತ್ತಿದ್ದಾರೆ ಮತ್ತು 1989 ರಿಂದ ಅವರನ್ನು ರಕ್ಷಿಸಲಾಗುತ್ತಿದೆ. ಅವರ ಮೇಲೆ ದಾಳಿಯ ಅರ್ಥ ಇಸ್ಲಾಂ ಧರ್ಮವನ್ನು ಟೀಕಿಸುವವರ ಮೇಲೆ ದಾಳಿ ಎಂದರ್ಥ ಮತ್ತು ನಾನು ಚಿಂತಿತನಾಗಿದ್ದೇನೆ" ಎಂದಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಸಲ್ಮಾನ್ ರಶ್ದಿ ಅವರನ್ನು ಕೊಲ್ಲುವ ಪ್ರಯತ್ನ ನಡೆದಿದೆ ಎಂದು ಪ್ರತ್ಯಕ್ಷದರ್ಶಿ ಕಾರ್ಲ್ ಲೆವನ್ ಟ್ವೀಟ್ ಮಾಡಿದ್ದಾರೆ. ದಾಳಿಕೋರನನ್ನು ಭದ್ರತಾ ಪಡೆಗಳು ಹಿಡಿಯುವ ಮೊದಲು ಆಟ ರಶ್ದಿಯನ್ನು ಹಲವು ಬಾರಿ ಇರಿದಿದ್ದ. ನಂತರ ಸಭಿಕರ ನಡುವೆ ಇದ್ದ ಕೆಲವು ಸದಸ್ಯರು ವೇದಿಕೆಗೆ ಧಾವಿಸಿದ್ದಾರೆ.
ಇದನ್ನೂ ಓದಿ-Kissing King Cobra: ಕಾಳಿಂಗ ಸರ್ಪಕ್ಕೆ ಕಿಸ್ ಕೊಡಲು ಖತರ್ನಾಕ್ ಕೆಲಸ ಮಾಡಿದ ಯುವತಿ, ವಿಡಿಯೋ ನೋಡಿ
ಪುಸ್ತಕಕ್ಕೆ ಸಂಬಂಧಿಸಿದಂತೆ ಬೆದರಿಕೆಗಳು ಬಂದಿದ್ದವು
ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಸಲ್ಮಾನ್ ರಶ್ದಿ ಕಳೆದ 20 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಸಲ್ಮಾನ್ ರಶ್ದಿ ಅವರು ತಮ್ಮ 'ದಿ ಸೈಟಾನಿಕ್ ವರ್ಸಸ್' ಪುಸ್ತಕಕ್ಕೆ ಸಂಬಂಧಿಸಿದಂತೆ ಹಲವು ಬೆದರಿಕೆಗಳನ್ನು ಎದುರಿಸಿದ್ದಾರೆ. 1988 ರಿಂದ ಇರಾನ್‌ನಲ್ಲಿ ಈ ಪುಸ್ತಕವನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ಇಸ್ಲಾಂ ಧರ್ಮದ ವಿರುದ್ಧ ಧರ್ಮನಿಂದೆಯ ಆರೋಪ ಎದುರಿಸುತ್ತಿದೆ. ಇರಾನ್‌ನ ಉನ್ನತ ನಾಯಕರಿಂದ ಅವನ ತಲೆಯ ಮೇಲೆ ಬಹುಮಾನವನ್ನೂ ಕೂಡ ಘೋಷಿಸಲಾಗಿದೆ.
ಇದನ್ನೂ ಓದಿ-UK PM Race: ಸೋಲನ್ನು ಒಪ್ಪಿಕೊಳ್ಳುತ್ತೇನೆ, ಆದರೆ ಸುಳ್ಳು ಭರವಸೆ ನೀಡಲ್ಲ - ರಿಷಿ ಸುನಕ್
ಅವರ ಮೊದಲ ಕಾದಂಬರಿ 1975 ರಲ್ಲಿ ಪ್ರಕಟವಾಗಿತ್ತು. ಅವರು ತಮ್ಮ ಮಿಡ್ನೈಟ್ಸ್ ಚಿಲ್ಡ್ರನ್ (1981) ಗಾಗಿ ಬೂಕರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಮಧ್ಯರಾತ್ರಿಯ ಮಕ್ಕಳು ಆಧುನಿಕ ಭಾರತದ ಕುರಿತಾದ ಕಾದಂಬರಿ. ಅವರ ನಾಲ್ಕನೇ ಪುಸ್ತಕ ದಿ ಸೈಟಾನಿಕ್ ವರ್ಸಸ್ (1988) ವಿವಾದದ ನಂತರ ಅವರು ಸಾರ್ವಜನಿಕರಿಂದ ದೂರಾಗಿದ್ದಾರೆ. ಆದರೆ, ಬೆದರಿಕೆಗಳ ಹೊರತಾಗಿಯೂ, ಸಲ್ಮಾನ್ ರಶ್ದಿ 1990 ರ ದಶಕದಲ್ಲಿ ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. 2007ರಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬೆತ್ II, ರಶ್ದಿಯವರು ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 'ಸರ್' ಎಂಬ ಬಿರುದನ್ನು ನೀಡಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.