ಪಾಕಿಸ್ತಾನ ದೇವಸ್ಥಾನದಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಬಾಲಕರು, ಮುಂದೆ...?

12 ರಿಂದ 15 ವರ್ಷ ವಯಸ್ಸಿನ ನಾಲ್ಕು ಹುಡುಗರಿಂದ ದೇವಿ ವಿಗ್ರಹಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.

Last Updated : Feb 3, 2020, 07:15 AM IST
ಪಾಕಿಸ್ತಾನ ದೇವಸ್ಥಾನದಲ್ಲಿ ವಿಧ್ವಂಸಕ ಕೃತ್ಯ ಎಸಗಿದ ಬಾಲಕರು, ಮುಂದೆ...? title=

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಛಾಕ್ರೊ ಪಟ್ಟಣದ ಬಳಿ ಹಿಂದೂ ದೇವಾಲಯದಲ್ಲಿ ಹಣ ಕದ್ದು, ವಿಗ್ರಹಗಳನ್ನು ಹಾನಿಗೊಳಿಸಿದ ಘಟನೆ ನಡೆದಿದೆ. ಆದರೆ ಈ ವಿದ್ವಂಸಕ ಕೃತ್ಯ ಎಸಗಿದ ನಾಲ್ವರು ಬಾಲಕರನ್ನು ಹಿಂದೂ ಸಮುದಾಯವುಬ ಕ್ಷಮಿಸಿದೆ. ಈ ಬಾಲಕರ ವಿರುದ್ಧದ ಪ್ರಕರಣವನ್ನು ಸಹ ಹಿಂಪಡೆಯಲಾಗಿದ್ದು, ನಂತರ ನ್ಯಾಯಾಲಯವು ನಾಲ್ವರನ್ನು ಬಿಡುಗಡೆ ಮಾಡಿತು.

ಛಾಚಾರೊ ಬಳಿಯ ಗ್ರಾಮವಾದ ಪ್ರೇಮೋ-ಜಿ-ವಾರಿಯಲ್ಲಿರುವ ದೇವಾಲಯದಲ್ಲಿ ಜನವರಿ 26 ರಂದು ಕಳವು ಮಾಡಿ ಅಪವಿತ್ರಗೊಳಿಸಲಾಯಿತು. ದೇವರ ಪ್ರತಿಮೆಗಳಿಗೂ ಹಾನಿಗೊಳಗಾಗಿವೆ. ಈ ಪ್ರಕರಣವನ್ನು ಸರ್ವಾಂಗೀಣ ಖಂಡಿಸಲಾಯಿತು. ಹಿಂದೂ ಸಮುದಾಯದ ಜೊತೆಗೆ ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ನಾಗರಿಕ ಪ್ರೇಮ್ ಕುಮಾರ್ ಅವರುಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆಯ ನಂತರ, ಪೊಲೀಸರು 12 ರಿಂದ 15 ವರ್ಷದೊಳಗಿನ ನಾಲ್ಕು ಹುಡುಗರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಪ್ರೇಮೋ-ಜಿ-ವಾರಿ ಗ್ರಾಮದವರು ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ದೇವಾಲಯದ ದೇಣಿಗೆಯಿಂದ ಹಣವನ್ನು ಕದ್ದಿರುವುದಾಗಿ ಹುಡುಗರು ಒಪ್ಪಿಕೊಂಡಿದ್ದಾರೆ.

'ಡಾನ್' ಪತ್ರಿಕೆ ವರದಿಯ ಪ್ರಕಾರ ಅವರನ್ನು ಸ್ಥಳೀಯ ನ್ಯಾಯಾಲಯ ಹೈದರಾಬಾದ್‌ನ ಜುವೆನೈಲ್ ಶಾಲೆಗೆ ಕಳುಹಿಸಿದೆ. ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿ ಅರ್ಜಿದಾರರಾದ ಪ್ರೇಮ್ ಕುಮಾರ್ ಅವರು ನಾಲ್ವರ ವಿರುದ್ಧದ ಪ್ರಕರಣವನ್ನು ಸದ್ಭಾವನೆಯಿಂದ ಹಿಂತೆಗೆದುಕೊಳ್ಳುತ್ತಿರುವುದಾಗಿ ಹೇಳಿದರು. ಇದರ ನಂತರ ನಾಲ್ವರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿತು.

ಹಿಂದೂ ಪಂಚಾಯತ್‌ನಲ್ಲಿ ತೊಡಗಿರುವ ಹಿರಿಯರು ಅರ್ಜಿದಾರರಾದ ಪ್ರೇಮ್ ಕುಮಾರ್ ಅವರನ್ನು ಈ ಶಾಲಾ ಮಕ್ಕಳನ್ನು ಸದ್ಭಾವನೆಯಿಂದ ಕ್ಷಮಿಸುವಂತೆ ಕೋರಿದ್ದಾರೆ ಎಂದು ಸಿಂಧ್ ಮುಖ್ಯಮಂತ್ರಿಯ ವಿಶೇಷ ಸಹಾಯಕ ಮತ್ತು ಮಾನವ ಹಕ್ಕುಗಳ ವ್ಯವಹಾರಗಳ ವಕೀಲ ವಿರ್ಜಿ ಕೊಲ್ಹಿ ಡಾನ್‌ಗೆ ತಿಳಿಸಿದರು.

ಧರ್ಮನಿಂದೆಯ ಆರೋಪದ ಮೇಲೆ ಜೈಲಿನಲ್ಲಿದ್ದ ಘೋಟ್ಕಿ ಜಿಲ್ಲೆಯ ಹಿಂದೂ ಶಿಕ್ಷಕನೊಬ್ಬನ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದಿಂದ ಇಂತಹ ಅಭಿಮಾನವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದರು. ಹಿಂದೂ ಶಿಕ್ಷಕನ ವಿರುದ್ಧ ಇದೇ ರೀತಿಯ ಪ್ರಕರಣವನ್ನು ಹಿಂಪಡೆಯಲಾಗುವುದು ಎಂದು ಅವರು ಆಶಿಸಿದ್ದಾರೆ.

ಹಿಂದಿ ಪಂಚಾಯತ್ ನಾಯಕರ ನಡೆಯನ್ನು ಕೋಲ್ಹಿ ಶ್ಲಾಘಿಸಿದರು ಮತ್ತು ಥಾರ್ ಪ್ರದೇಶದಲ್ಲಿ ಕೋಮು ಸೌಹಾರ್ದತೆಗೆ ಇದು ಒಳ್ಳೆಯದು ಎಂದು ಬಣ್ಣಿಸಿದರು.

Trending News