ರಷ್ಯಾದಲ್ಲಿ ಸೆರೆಸಿಕ್ಕ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕನ ವಿಚಾರಣೆಯ ಸಂದರ್ಭದಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದೆ. ರಷ್ಯಾದಿಂದ ಲಭಿಸಿರುವ ಮಾಹಿತಿಯ ಪ್ರಕಾರ, ಬಿಜೆಪಿಯ ದೊಡ್ಡ ನಾಯಕರೊಬ್ಬರು ಈ ಭಯೋತ್ಪಾದಕನ ಟಾರ್ಗೆಟ್ ಲಿಸ್ಟ್ ನಲ್ಲಿದ್ದಾರೆ. ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಯೋಜಿಸಿದ್ದ ಐಎಸ್ ಆತ್ಮಾಹುತಿ ಬಾಂಬ್ ದಾಳಿಕೋರನನ್ನು ಸದ್ಯ ರಷ್ಯಾ ಬಂಧಿಸಿದ್ದು, ಭಾರತೀಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಜನರನ್ನು ಕರೆಳಿಸಿದ ಚೀನಾದ ಹೊಸ ನೀತಿ: ಕೊರೊನಾ ಮಧ್ಯೆ ನೆರೆರಾಷ್ಟ್ರ ಮಾಡಿದ ಕೆಲಸ ಏನುಗೊತ್ತಾ?
ಮಾಹಿತಿ ಪಡೆದ ಬಳಿಕ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವಾಲಯದ ಪ್ರಕಾರ, “ಐಸಿಸ್ ತನ್ನ ಸಿದ್ಧಾಂತವನ್ನು ಪ್ರಚಾರ ಮಾಡಲು ವಿವಿಧ ಇಂಟರ್ನೆಟ್ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್‌ಸ್ಪೇಸ್ ಅನ್ನು ಸಂಬಂಧಪಟ್ಟ ಏಜೆನ್ಸಿಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಮತ್ತು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ತಿಳಿಸಿದೆ.
ಬಂಧಿತನನ್ನು ಐಸಿಸ್ ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿದೆ ಎಂದು ರಷ್ಯಾ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಸದ್ಯ ಈ ವಿಚಾರಣೆಯು ಮುಂದುವರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
“ISIS ಮತ್ತು ಅದರ ಎಲ್ಲಾ ಅಭಿವ್ಯಕ್ತಿಗಳನ್ನು ಭಯೋತ್ಪಾದಕ ಸಂಘಟನೆ ಎಂದು ಸೂಚಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಮೊದಲ ಪಟ್ಟಿಯಲ್ಲಿ ಕೇಂದ್ರ ಸರ್ಕಾರವು ಈ ವಿಚಾರವನ್ನು ಸೇರಿಸಿದೆ.
ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್) ಅಂತರರಾಷ್ಟ್ರೀಯ ಘಟಕದ ಸದಸ್ಯನೆಂದು ಆತ್ಮಹತ್ಯಾ ಬಾಂಬ್ ಕೋರನನ್ನು ಗುರುತಿಸಿದೆ. ಈ ಭಯೋತ್ಪಾದಕ ಮಧ್ಯ ಏಷ್ಯಾ ದೇಶದ ನಿವಾಸಿಯಾಗಿದ್ದು, ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಕಗೊಳಿಸಲಾಗಿತ್ತು. ಇನ್ನು ಈತನ ಟಾರ್ಗೆಟ್ ಲಿಸ್ಟ್ ನಲ್ಲಿ ಭಾರತದ ದೊಡ್ಡ ನಾಯಕನ ಹೆಸರೂ ಸಹ ಇತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಉದ್ಯೋಗದಲ್ಲಿ ಸಿಗುವುದು ಪದೋನ್ನತಿ, ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಹಣದ ಸುರಿ ಮಳೆ
ರಷ್ಯಾದ ಏಜೆನ್ಸಿಗಳು ಈ ಆತ್ಮಹತ್ಯಾ ಬಾಂಬರ್ ನಿರಂತರವಾಗಿ ತನಿಖೆ ನಡೆಸುತ್ತಿವೆ. ಭಾರತೀಯ ಏಜೆನ್ಸಿಗಳು ಈ ವಿಷಯದಲ್ಲಿ ಹೊಸ ಬೆಳವಣಿಗೆಗಾಗಿ ಕಾಯುತ್ತಿದ್ದಾರೆ. ಸದ್ಯ ಈ ಭಯೋತ್ಪಾದಕ ಗುರಿಯಾಗಿಸಲು ಹೊರಟಿದ್ದ ಬಿಜೆಪಿ ನಾಯಕನ ಹೆಸರು ಬಹಿರಂಗವಾಗಿಲ್ಲ. ಪ್ರಪಂಚದ ಅನೇಕ ದೇಶಗಳಂತೆ, ಇಸ್ಲಾಮಿಕ್ ಸ್ಟೇಟ್ ಭಾರತದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ. ಅದರ ಎಲ್ಲಾ ಘಟಕಗಳ ಚಟುವಟಿಕೆಗಳು ಭಯೋತ್ಪಾದಕ ಚಟುವಟಿಕೆಗಳ ವ್ಯಾಪ್ತಿಗೆ ಬರುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ