ನೀರಿನ ಗುಂಡಿಗೆ ವ್ಯಾನ್ ಪಲ್ಟಿ... 12 ಮಕ್ಕಳು ಸೇರಿ 20 ಮಂದಿ ಸಾವು

Pakistan Accident : ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ನೀರಿನ ಗುಂಡಿಗೆ ಪಲ್ಟಿಯಾಗಿ 12 ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ದುರ್ಘಟನೆ ನಡೆದಿದೆ. 

Written by - Chetana Devarmani | Last Updated : Nov 19, 2022, 12:24 PM IST
  • ನೀರಿನ ಗುಂಡಿಗೆ ವ್ಯಾನ್ ಪಲ್ಟಿ
  • 12 ಮಕ್ಕಳು ಸೇರಿ 20 ಮಂದಿ ಸಾವು
  • ಪಾಕಿಸ್ತಾನದಲ್ಲಿ ಸಂಭವಿಸಿದ ಅಪಘಾತ
ನೀರಿನ ಗುಂಡಿಗೆ ವ್ಯಾನ್ ಪಲ್ಟಿ... 12 ಮಕ್ಕಳು ಸೇರಿ 20 ಮಂದಿ ಸಾವು  title=
ಪಾಕಿಸ್ತಾನ

Pakistan Accident : ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸೂಫಿ ಮಂದಿರಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ವ್ಯಾನ್ ಪಲ್ಟಿಯಾಗಿ ಹೆದ್ದಾರಿ ಬದಿಯ ಹೊಂಡಕ್ಕೆ  ಬಿದ್ದಿದೆ. ಘಟನೆಯಲ್ಲಿ 12 ಮಕ್ಕಳು ಸೇರಿದಂತೆ ಸುಮಾರು 20 ಜನರು ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ. ಅಧಿಕಾರಿಗಳು ಶವಗಳನ್ನು ಹೊರತೆಗೆದು ಸೈಯದ್ ಅಬ್ದುಲ್ಲಾ ಶಾ ಇನ್ಸ್ಟಿಟ್ಯೂಟ್ ಸೆಹ್ವಾನ್ ಷರೀಫ್‌ಗೆ ರವಾನಿಸಿದ್ದಾರೆ. 

ಇದನ್ನೂ ಓದಿ: ಪಾಕಿಸ್ತಾನದಲ್ಲಿ 19 ವರ್ಷದ ಯುವತಿಯನ್ನು ಮದುವೆಯಾದ 70 ವರ್ಷದ ವೃದ್ದ..! 

ಖೈರ್‌ಪುರ ಜಿಲ್ಲೆಯಿಂದ ಸೆಹ್ವಾನ್‌ನಲ್ಲಿರುವ ಪ್ರಸಿದ್ಧ ಸೂಫಿ ದೇಗುಲಕ್ಕೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಸಿಂಧೂ ಹೆದ್ದಾರಿಯಲ್ಲಿನ ಗುಂಡಿಗೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿ ಇಮ್ರಾನ್ ಖುರೇಷಿ ಹೇಳಿದ್ದಾರೆ. ಈ ವರ್ಷ ಪಾಕಿಸ್ತಾನದಲ್ಲಿ ಕಳೆದ ಮೂರು ದಶಕಗಳಿಗಿಂತ ಅಧಿಕ ಮಳೆಯಾಗಿದೆ. ಈ ಭಾರಿ ಮಳೆಯಿಂದಾಗಿ 1600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಎಂಟು ಮಿಲಿಯನ್ ಜನರು ಸ್ಥಳಾಂತರಗೊಂಡರು. ಈ ಮಳೆಯಿಂದಾಗಿ ರಸ್ತೆಗಳು, ಸೇತುವೆಗಳು ಹಾಳಾಗಿವೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದ ಇತ್ತೀಚಿನ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಭೀಕರ ಅಪಘಾತದ ಬಗ್ಗೆ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ರಸ್ತೆ ಅಪಘಾತದ ಸಾವಿನ ಪ್ರಮಾಣವನ್ನು ಹೊಂದಿದೆ. ಹಾಳಾದ ಹೆದ್ದಾರಿ ಮತ್ತು ನಿರ್ಲಕ್ಷ್ಯದ ಚಾಲನೆಯೇ ಇದಕ್ಕೆ ಕಾರಣ ಎಂದು ಅನೇಕ ವರದಿಗಳು ತಿಳಿಸಿವೆ.

ಇದನ್ನೂ ಓದಿ:  ಸಾಮೂಹಿಕ ರಾಜಿನಾಮೆ ನೀಡಿದ ಟ್ವಿಟ್ಟರ್ ನೌಕರರು..! ಸಂಕಷ್ಟದಲ್ಲಿ ಟ್ವಿಟ್ಟರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News