ದಕ್ಷಿಣ ಜಪಾನ್ ನಲ್ಲಿ ಪ್ರಬಲ ಭೂಕಂಪ!ಸುನಾಮಿ ಎಚ್ಚರಿಕೆ

Japan Tsunami Advisory:ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ಕೂಡಾ ನೀಡಲಾಗಿದೆ.  

Written by - Ranjitha R K | Last Updated : Aug 8, 2024, 02:30 PM IST
  • ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದೆ.
  • ಇದಾದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿದೆ.
  • ಭೂಕಂಪದ ತೀವ್ರತೆ ಪ್ರಾಥಮಿಕವಾಗಿ 6.9ಯಷ್ಟಿತ್ತು ಎನ್ನಲಾಗಿದೆ
ದಕ್ಷಿಣ ಜಪಾನ್ ನಲ್ಲಿ ಪ್ರಬಲ ಭೂಕಂಪ!ಸುನಾಮಿ ಎಚ್ಚರಿಕೆ  title=

Japan Tsunami Advisory : ಜಪಾನ್‌ನ ದಕ್ಷಿಣ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದೆ.ಇದಾದ ಬಳಿಕ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ತೀವ್ರತೆ ಪ್ರಾಥಮಿಕವಾಗಿ 6.9ಯಷ್ಟಿತ್ತು ಎನ್ನಲಾಗಿದೆ.ಭೂಕಂಪದ ಕೇಂದ್ರಬಿಂದುವು  ಜಪಾನ್‌ನ ದಕ್ಷಿಣ ಮುಖ್ಯ ದ್ವೀಪವಾದ ಕ್ಯುಶು ಪೂರ್ವ ಕರಾವಳಿಯಿಂದ ಸುಮಾರು 30 ಕಿಲೋಮೀಟರ್ (18.6 ಮೈಲುಗಳು) ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ಹೇಳಿದೆ. 

ಭೂಕಂಪದ ನಂತರ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.ಕ್ಯುಶುವಿನ ದಕ್ಷಿಣ ಕರಾವಳಿ ಮತ್ತು ಶಿಕೋಕು ಹತ್ತಿರದ ದ್ವೀಪದ ಉದ್ದಕ್ಕೂ 1 ಮೀಟರ್ (3.3 ಅಡಿ) ವರೆಗಿನ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ : ನೊಬೆಲ್ ಪುರಸ್ಕೃತ ಮಹಮೂದ್ ಯೂನಸ್ ಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಪಟ್ಟ..!

ಇನ್ನು ಭೂಕಂಪದಿಂದ ಯಾವುದಾದರೂ ಹಾನಿ ಸಂಭವಿಸಿದೆಯೇ ಎನ್ನುವುದನ್ನು ಕ್ಯುಶು ಮತ್ತು ಶಿಕೋಕುದಲ್ಲಿನ ಪರಮಾಣು ಸ್ಥಾವರಗಳ ನಿರ್ವಾಹಕರು ತನಿಖೆ ನಡೆಸುತ್ತಿದ್ದಾರೆ.ಜಪಾನ್‌ನ NHK ಸ್ಟೇಟ್ ಟೆಲಿವಿಷನ್,ಭೂಕಂಪದ ಕೇಂದ್ರದ ಸಮೀಪವಿರುವ ಮಿಯಾಝಾಕಿ ವಿಮಾನ ನಿಲ್ದಾಣದಲ್ಲಿ ಕಿಟಕಿಗಳು ಮುರಿದಿರುವ ಬಗ್ಗೆ ವರದಿ ಮಾಡಿದೆ.  

ಜಪಾನ್ ಪೆಸಿಫಿಕ್ 'ರಿಂಗ್ ಆಫ್ ಫೈರ್'ನಲ್ಲಿದೆ.ಇದು ವಿಶ್ವದ ಅತ್ಯಂತ ಭೂಕಂಪನ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. 

ಇದನ್ನೂ ಓದಿ : ಬಾಂಗ್ಲಾದೇಶದ ಸಂಸತ್ತು ವಿಸರ್ಜನೆ, ಗೃಹ ಬಂಧನದಿಂದ ಮಾಜಿ ಪ್ರಧಾನಿ ಜಿಯಾ ಮುಕ್ತಿ

ಜನವರಿ 1 ರಂದು ಜಪಾನ್‌ನ ಉತ್ತರ-ಮಧ್ಯ ಪ್ರದೇಶದಲ್ಲಿ ನೊಟೊದಲ್ಲಿ ಸಂಭವಿಸಿದ ಭೂಕಂಪದಲ್ಲಿ 240 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News