Myanmar: ನೆಲದಿಂದ ನಡೆದ ಫೈರಿಂಗ್, 3500 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ಯಾತ್ರಿಗೆ ತಗುಲಿದ ಗುಂಡು

Myanmar National Airlines: ಎಲ್ಲಾ ವಿಮಾನಗಳ ಹಾರಾಟವನ್ನು ಅನಿರ್ಧಿಷ್ಟಾವಧಿಗಾಗಿ ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ. ಇನ್ನೊಂದೆಡೆ ಬಂಡುಕೋರರ ಪಡೆಗಳು ವಿಮಾನದ ಮೇಲೆ ಈ ದಾಳಿ ನಡೆಸಿವೆ ಎಂದು ಮ್ಯಾನ್ಮಾರ್ ಮಿಲಿಟರಿ ಸರ್ಕಾರ ಆರೋಪಿಸಿದೆ.  

Written by - Nitin Tabib | Last Updated : Oct 2, 2022, 04:11 PM IST
  • 3500 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಗುಂಡು ವಿಮಾನದ ಕೆಳಗಿನ ಭಾಗಕ್ಕೆ ತಗುಲಿದೆ.
  • ಲೊಯ್ಕಾವ್‌ನಲ್ಲಿರುವ ಮ್ಯಾನ್ಮಾರ್ ನ್ಯಾಷನಲ್ ಏರ್‌ಲೈನ್ಸ್ ಕಚೇರಿಯು ನಗರಕ್ಕೆ ಎಲ್ಲಾ ವಿಮಾನಗಳನ್ನು ಅನಿರ್ದಿಷ್ಟವಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
  • ಇನ್ನೊಂದೆಡೆ ಮ್ಯಾನ್ಮಾರ್ ಮಿಲಿಟರಿ ಸರ್ಕಾರವು ವಿಮಾನದ ಮೇಲೆ ಬಂಡುಕೋರ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಆರೋಪಿಸಿದೆ.
Myanmar: ನೆಲದಿಂದ ನಡೆದ ಫೈರಿಂಗ್, 3500 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ಯಾತ್ರಿಗೆ ತಗುಲಿದ ಗುಂಡು  title=
Firing On Plane

Firing on plane: ಮ್ಯಾನ್ಮಾರ್ ನಲ್ಲಿ ಅಚ್ಚರಿಯ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಹೌದು, ನೆಲದಿಂದ ಹಾರಿಸಲಾಗಿರುವ ಗುಂಡೊಂದು ಆಕಾಶದಲ್ಲಿ ಹಾರುತ್ತಿದ್ದ ವಿಮಾನದ ಪ್ರಯಾಣಿಕನಿಗೆ ತಗುಲಿತು. ಪರಿಣಾಮವಶಾತ್ ಪ್ರಯಾಣಿಕ ಗಾಯಗೊಂಡಿದ್ದಾರೆ. 63 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮ್ಯಾನ್ಮಾರ್ ನ್ಯಾಷನಲ್ ಏರ್‌ಲೈನ್ಸ್ ವಿಮಾನವು ಪೂರ್ವ ರಾಜ್ಯವಾದ ಕಯಾ ರಾಜ್ಯದ ರಾಜಧಾನಿ ಲೊಯಿಕಾವ್‌ನಲ್ಲಿ ಇಳಿಯಲಿದೆ. ಹೊರಹೊಮ್ಮಿದ ಆಘಾತಕಾರಿ ಚಿತ್ರಗಳಲ್ಲಿ ವಿಮಾನದಲ್ಲಿ ಗುಂಡಿನ ರಂಧ್ರವನ್ನು ತೋರಿಸಿವೆ ಮತ್ತು ಪುರುಷ ಪ್ರಯಾಣಿಕನು ತನ್ನ ಸೀಟಿನಲ್ಲಿ ಕುಳಿತಿದ್ದಾನೆ. ಆತ ರಕ್ತಸ್ರಾವ ತಡೆಯಲು ಕಿವಿಗೆ ಟಿಶ್ಯೂ ಹಾಕಿದ್ದಾರೆ.

3500 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಗುಂಡು ವಿಮಾನದ ಕೆಳಗಿನ ಭಾಗಕ್ಕೆ ತಗುಲಿದೆ. ಲೊಯ್ಕಾವ್‌ನಲ್ಲಿರುವ ಮ್ಯಾನ್ಮಾರ್ ನ್ಯಾಷನಲ್ ಏರ್‌ಲೈನ್ಸ್ ಕಚೇರಿಯು ನಗರಕ್ಕೆ ಎಲ್ಲಾ ವಿಮಾನಗಳನ್ನು ಅನಿರ್ದಿಷ್ಟವಾಗಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ. ಇನ್ನೊಂದೆಡೆ ಮ್ಯಾನ್ಮಾರ್ ಮಿಲಿಟರಿ ಸರ್ಕಾರವು ವಿಮಾನದ ಮೇಲೆ ಬಂಡುಕೋರ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಬಂಡುಕೋರರ ಪಡೆ ನಿದ್ರಾಕರಿಸಿವೆ. "ಪ್ರಯಾಣಿಕ ವಿಮಾನದ ಮೇಲೆ ಇಂತಹ ದಾಳಿಯು ಯುದ್ಧಾಪರಾಧ ಎಂದು ನಾನು ಹೇಳಲು ಬಯಸುತ್ತೇನೆ" ಎಂದು ಮ್ಯಾನ್ಮಾರ್‌ನ ಆಡಳಿತಾರೂಢ ಮಿಲಿಟರಿ ಕೌನ್ಸಿಲ್‌ನ ವಕ್ತಾರ ಮೇಜರ್ ಜನರಲ್ ಜಾ ಮಿನ್ ತುನ್ ಸ್ಟೇಟ್ ಟಿವಿಗೆ ತಿಳಿದಿದ್ದಾರೆ.

ಇದನ್ನೂ ಓದಿ-ವಿಶ್ವಸಂಸ್ಥೆಯಲ್ಲಿ ಮಹಾತ್ಮಾ ಗಾಂಧಿ ಪ್ರತ್ಯಕ್ಷ..!

ಅಧಿಕಾರ ಹಿಡಿದ ನಂತರ ಹೋರಾಟ ಮುಂದುವರಿದಿದೆ
ಶಾಂತಿ ಬಯಸುವ ಜನರು ಮತ್ತು ಸಂಘಟನೆಗಳು ಈ ವಿಷಯವನ್ನು ಸರ್ವಥಾ ಖಂಡಿಸಬೇಕು ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಮಿಲಿಟರಿಯು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಉರುಳಿಸಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಾಯಾ ರಾಜ್ಯವು ಮಿಲಿಟರಿ ಮತ್ತು ಬಂಡಾಯ ಗುಂಪುಗಳ ನಡುವೆ ತೀವ್ರವಾದ ಘರ್ಷಣೆಗೆ ಸಾಕ್ಷಿಯಾಗಿದೆ. ಕರೇನಿ ನ್ಯಾಷನಲ್ ಪ್ರೋಗ್ರೆಸ್ಸಿವ್ ಪಾರ್ಟಿ - ಸರ್ಕಾರದ ವಿರುದ್ಧ ಹೋರಾಡುತ್ತಿರುವ ಮಿಲಿಷಿಯಾ - ಮತ್ತು ಪೀಪಲ್ಸ್ ಡಿಫೆನ್ಸ್ ಫೋರ್ಸ್‌ನಲ್ಲಿರುವ ಅದರ ಮಿತ್ರರಿಂದ ಗುಂಡಿನ ದಾಳಿ ನಡೆಸಲಾಗಿದೆ ಎಂದು ಮಿಲಿಟರಿ ಸರ್ಕಾರ ಹೇಳುತ್ತದೆ.

ಇದನ್ನೂ ಓದಿ-ರಷ್ಯಾದಿಂದ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ ಮುಖ್ಯಸ್ಥನ ಅಪಹರಣ...!

ಕರೇನಿ ನ್ಯಾಷನಲ್ ಪ್ರೋಗ್ರೆಸ್ಸಿವ್ ಪಾರ್ಟಿಯ ನಾಯಕ ಖು ಡೇನಿಯಲ್ ಅವರು ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ನಾಗರಿಕರು ಅಥವಾ ಪ್ರಯಾಣಿಕ ವಿಮಾನಗಳ ಮೇಲೆ ಗುಂಡು ಹಾರಿಸಲು ತಮ್ಮ ಪಕ್ಷವು ತನ್ನ ಹೋರಾಟಗಾರರಿಗೆ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ. "ಸೇನೆಯು ಯಾವಾಗಲೂ ಗುಂಡಿನ ದಾಳಿಗೆ ಇತರ ಸಂಘಟನೆಗಳನ್ನು ದೂಷಿಸುತ್ತದೆ. ನಮ್ಮ ಜನರು ಇಂದು ಬೆಳಗ್ಗೆ ವಿಮಾನವನ್ನು ಹೊಡೆದುರುಳಿಸಲಿಲ್ಲ" ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News