Pfizer On COVID-19: 2024ರವರೆಗೆ ಬೆನ್ನು ಬಿಡಲ್ಲ ಕೊರೊನಾ, ಫೈಜರ್ ಕಂಪನಿಯ ಭವಿಷ್ಯವಾಣಿ

Pfizer On COVID-19: 2024 ರವರೆಗೆ ಕರೋನಾ ಸಾಂಕ್ರಾಮಿಕವು ಕೊನೆಗೊಳ್ಳುವುದಿಲ್ಲ ಎಂದು ಫಿಜರ್ ಭವಿಷ್ಯ ನುಡಿದಿದೆ. ಕಳೆದ ತಿಂಗಳು Omicron ರೂಪಾಂತರವು ಕಾಣಿಸಿಕೊಂಡ ಹಿನ್ನೆಲೆ Pfizerನ ಈ ಮುನ್ಸೂಚನೆಯು ಪ್ರಕಟಗೊಂಡಿದೆ.

Written by - Nitin Tabib | Last Updated : Dec 18, 2021, 02:17 PM IST
  • ವರ್ಷ 2024ರವರೆಗೆ ಅಂತ್ಯವಾಗುವುದಿಲ್ಲ ಕೊರೊನಾ ಮಹಾಮಾರಿ.
  • ಅಮೆರಿಕಾದ ಔಷಧ ತಯಾರಿಕ ಕಂಪನಿ ಫೈಜರ್ ಭವಿಷ್ಯ.
  • ಈ ಕುರಿತು ಫೈಜರ್ ತಜ್ಞರು ಇನ್ನೇನು ಹೇಳಿದ್ದಾರೆ ತಿಳಿಯಲು ವರದಿ ಓದಿ
Pfizer On COVID-19: 2024ರವರೆಗೆ ಬೆನ್ನು ಬಿಡಲ್ಲ ಕೊರೊನಾ, ಫೈಜರ್ ಕಂಪನಿಯ ಭವಿಷ್ಯವಾಣಿ title=
Pfizer Forecast (File Photo)

Pfizer On COVID-19: ಕೋವಿಡ್-19 ಒಮಿಕ್ರಾನ್‌ನ (Omicron Variant) ಹೊಸ ರೂಪಾಂತರಿಯಿಂದಾಗಿ ವಿಶ್ವಾದ್ಯಂತ ಭೀತಿಯ ವಾತಾವರಣವಿದೆ. ಏತನ್ಮಧ್ಯೆ, ಔಷಧೀಯ ಕಂಪನಿ ಫೈಜರ್ ಕರೋನಾ ಸಾಂಕ್ರಾಮಿಕವು 2024 ರವರೆಗೆ ಕೊನೆಗೊಳ್ಳುವುದಿಲ್ಲ ಎಂದು ಭವಿಷ್ಯ ನುಡಿದಿದೆ. ಫೈಜರ್ ಇಂಕ್ (PFE.inc) ಶುಕ್ರವಾರದಂದು ಕೋವಿಡ್ ಸಾಂಕ್ರಾಮಿಕವು 2024 ರವರೆಗೆ ಜಗತ್ತನ್ನು ತೊರೆಯುವುದಿಲ್ಲ ಎಂದು ಮುನ್ಸೂಚನೆ (Pfizer Forecast) ನೀಡಿದೆ. 2 ರಿಂದ 4 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯ ದುರ್ಬಲ ಪ್ರತಿರಕ್ಷೆಯ ಬಗ್ಗೆಯೂ ಕೂಡ ಕಂಪನಿ ಕಳವಳ ವ್ಯಕ್ತಪಡಿಸಿದೆ.

ಕೋವಿಡ್-19 (Covid-19) ಪ್ರಕರಣಗಳು ಮುಂದಿನ ವರ್ಷ ಅಥವಾ ಎರಡು ವರ್ಷಗಳವರೆಗೆ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುಡು ಮುಂದುವರೆಗಲಿದೆ  ಎಂದು ಫೈಜರ್ ಮುಖ್ಯ ವೈಜ್ಞಾನಿಕ ಅಧಿಕಾರಿ ಮೈಕೆಲ್ ಡಾಲ್‌ಸ್ಟನ್ ಪ್ರಸ್ತುತಿಯ ಸಂದರ್ಭದಲ್ಲಿ ಹೂಡಿಕೆದಾರರಿಗೆ ತಿಳಿಸಿದ್ದಾರೆ. 2024 ರ ವೇಳೆಗೆ, ಈ ಕಾಯಿಲೆಯಿಂದ ಸೋಂಕಿನ ಅಪಾಯವು ಕಡಿಮೆಯಾಗುತ್ತದೆ ಎಂದು ಕಂಪನಿಯು ಅಂದಾಜಿಸಿದೆ. ಆದರೆ, ಲಸಿಕೆಗಳು ಮತ್ತು ಚಿಕಿತ್ಸೆಯನ್ನು ಸಮಾಜವು ಎಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ಮತ್ತು ಬಳಸಲು ಸಾಧ್ಯವಾಗುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ವ್ಯಾಕ್ಸಿನೇಷನ್ ದರಗಳು ಕಡಿಮೆಯಾಗಿದ್ದರೆ, ಸೋಂಕಿನ ಅಪಾಯವು ಇನ್ನೂ ಉಳಿಯುವ ಸಾಧ್ಯತೆ ಇದೆ. 

ಫೈಜರ್ ಕೋವಿಡ್-19 ಲಸಿಕೆ
ಫಿಜರ್ ತನ್ನ COVID-19 ಲಸಿಕೆಯನ್ನು ಜರ್ಮನಿಯ BioNTech SE (22UAy.DE) ನೊಂದಿಗೆ ಅಭಿವೃದ್ಧಿಪಡಿಸಿದೆ ಮತ್ತು ಇದರಿಂದ ಮುಂದಿನ ವರ್ಷದ ವೇಳೆಗೆ ₹31 ಶತಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಮುಂದಿನ ವರ್ಷದ ವೇಳೆಗೆ 4 ಬಿಲಿಯನ್ ಶಾಟ್‌ಗಳನ್ನು ಮಾಡುವ ಯೋಜನೆ ಇದೆ ಎಂದು ಹೇಳಲಾಗುತ್ತಿದೆ. ಡ್ರಗ್‌ಮೇಕರ್ ಫೈಜರ್ ಪ್ಯಾಕ್ಸ್‌ಲೋವಿಡ್ ಎಂಬ ಪ್ರಾಯೋಗಿಕ ಆಂಟಿವೈರಲ್ ಮಾತ್ರೆಯನ್ನು ಹೊಂದಿದೆ, ಇದು ಕ್ಲಿನಿಕಲ್ ಪ್ರಯೋಗಗಳಲ್ಲಿ ಸುಮಾರು 90 ಪ್ರತಿಶತದಷ್ಟು ಹೆಚ್ಚಿನ ಅಪಾಯದ ರೋಗಿಗಳಲ್ಲಿ ಆಸ್ಪತ್ರೆಗೆ ದಾಖಲು ಮತ್ತು ಸಾವುಗಳನ್ನು ಕಡಿಮೆ ಮಾಡಿದೆ ಎಂದು ಸಾಬೀತುಪಡಿಸಿದೆ.

ಇದನ್ನೂ ಓದಿ-ಓಮಿಕ್ರಾನ್ ಬಹುಶಃ ಹೆಚ್ಚಿನ ದೇಶಗಳಲ್ಲಿ ಹಿಂದೆಂದೂ ನಿರೀಕ್ಷಿಸದ ಪ್ರಮಾಣದಲ್ಲಿ ಹರಡುತ್ತಿದೆ: WHO

ಕಳೆದ ತಿಂಗಳು ಕೊರೋನಾದ (Coronavirus) ಹೊಸ ರೂಪಾಂತರಿ ಓಮಿಕ್ರಾನ್ ಬೆಳಕಿಗೆ ಬಂದ ನಂತರ ಫೈಜರ್ (Pfizer) ನ ಈ ಭವಿಷ್ಯವಾಣಿ ಪ್ರಕಟಗೊಂಡಿದೆ. ಇದು ವೈರಸ್‌ನ ಮೂಲ ರೂಪಾಂತರಕ್ಕಿಂತ 50 ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಇದು ಸೋಂಕಿನ ವಿರುದ್ಧ ಲಸಿಕೆಯ ಎರಡು ಡೋಸ್‌ಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಿದೆ ಮತ್ತು ವಿಶ್ವಾದ್ಯಂತ ವೇಗವಾಗಿ ಹರಡುವ ಭಯ ಹುಟ್ಟುಹಾಕಿದೆ. ಓಮಿಕ್ರಾನ್ ಬರುವ ಮೊದಲು ಅಮೆರಿಕಾದ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ ಸಾಂಕ್ರಾಮಿಕ ರೋಗವು 2022 ರಲ್ಲಿ ಕೊನೆಗೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದರು, ಆದರೆ ಅದು ಸಂಭವಿಸಿಲ್ಲ. ಫೈಜರ್ ಲಸಿಕೆಯನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅಧಿಕೃತಗೊಳಿಸಲಾಗಿದೆ.

ಇದನ್ನೂ ಓದಿ-Corona Vaccine:ಬೆಳಿಗ್ಗೆಗಿಂತ ಮಧ್ಯಾಹ್ನ ತೆಗೆದುಕೊಂಡ ಲಸಿಕೆ ಹೆಚ್ಚು ಪರಿಣಾಮಕಾರಿ.. ಯಾಕೆ ಗೊತ್ತೇ?

ವಯಸ್ಕರ ಕ್ಲಿನಿಕಲ್ ಪ್ರಯೋಗಗಳಲ್ಲಿ ಲಸಿಕೆಯು ಸುಮಾರು 95% ಪರಿಣಾಮಕಾರಿಯಾಗಿದೆ, ಆದರೆ ಎರಡನೇ ಡೋಸ್ ನಂತರ ಕೆಲವು ತಿಂಗಳ ನಂತರ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಫೈಜರ್ ಹೇಳುತ್ತದೆ. ಓಮಿಕ್ರಾನ್ ರೂಪಾಂತರದ ವಿರುದ್ಧ ರಕ್ಷಿಸಲು ಲಸಿಕೆಯ ಮೂರು ಡೋಸ್‌ಗಳವರೆಗೆ ಅಗತ್ಯವಾಗಬಹುದು ಎಂದು ಪ್ರಾಥಮಿಕ ಡೇಟಾ ಸೂಚಿಸುತ್ತದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ-Covid Vaccine for Children: 5-11 ವರ್ಷದ ಮಕ್ಕಳಿಗೆ ಫಿಜರ್ ಲಸಿಕೆ ನೀಡಲು ಮುಂದಾದ ಅಮೆರಿಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News