Lockdown in Pakistan: ನೆರೆಯ ದೇಶದಲ್ಲಿ ನಾಳೆಯಿಂದ ಫುಲ್ ಲಾಕ್‌ಡೌನ್

ಪಾಕಿಸ್ತಾನದಲ್ಲಿ ಈವರೆಗೆ 659,116 ಕರೋನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 14,256 ಜನರು ಸಾವನ್ನಪ್ಪಿದ್ದಾರೆ.  

Written by - Yashaswini V | Last Updated : Mar 31, 2021, 01:50 PM IST
  • ಕರೋನಾವೈರಸ್ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ, ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ಹಲವು ಭಾಗಗಳಲ್ಲಿ ಸೋಮವಾರ ಭಾಗಶಃ ಲಾಕ್‌ಡೌನ್
  • ಕರೋನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು, ಅಧಿಕಾರಿಗಳು ಪೂರ್ವ ಪಂಜಾಬ್ ಪ್ರಾಂತ್ಯದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಏಪ್ರಿಲ್ 1 ರಿಂದ ಎರಡು ವಾರಗಳ ಭಾಗಶಃ ಲಾಕ್‌ಡೌನ್ ಘೋಷಿಸಿದ್ದಾರೆ
  • ಈಗಾಗಲೇ ಸಂಕಷ್ಟದಲ್ಲಿರುವ ಆರ್ಥಿಕತೆಗೆ ಮತ್ತಷ್ಟು ಹಾನಿಯಾಗದಂತೆ ತಡೆಯಲು ಪಾಕಿಸ್ತಾನ ಸರ್ಕಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ತರುವುದನ್ನು ತಪ್ಪಿಸಿದೆ
Lockdown in Pakistan: ನೆರೆಯ ದೇಶದಲ್ಲಿ ನಾಳೆಯಿಂದ  ಫುಲ್ ಲಾಕ್‌ಡೌನ್  title=
Lockdown in Pakistan

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಕರೋನಾವೈರಸ್ ಸಾಂಕ್ರಾಮಿಕ ರೋಗವು ದಿನೇ ದಿನೇ ವೇಗವಾಗಿ ಹರಡುತ್ತಿದೆ. ಈ ಹಿನ್ನಲೆಯಲ್ಲಿ ಸೋಮವಾರ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ದೇಶದ ಇತರ ಹೈಪರ್ ಸೆನ್ಸಿಟಿವ್ ಪ್ರದೇಶಗಳಲ್ಲಿ ಭಾಗಶಃ ಲಾಕ್‌ಡೌನ್  (Partial Lockdown) ಜಾರಿಗೆ ತರಲಾಗಿದೆ. ಅದೇ ಸಮಯದಲ್ಲಿ, ಕೋವಿಡ್ -19 (Covid-19) ಪ್ರಕರಣಗಳ ಹೆಚ್ಚಳದ ಮಧ್ಯೆ ಸೋಂಕು ಹರಡುವುದನ್ನು ತಡೆಗಟ್ಟಲು, ಪಾಕಿಸ್ತಾನದ ಪಂಜಾಬ್ ಸರ್ಕಾರವು ಏಪ್ರಿಲ್ 1 ರಿಂದ ಲಾಹೋರ್ ಮತ್ತು ಪ್ರಾಂತ್ಯದ ಇತರ ನಗರಗಳಲ್ಲಿ 'ಪರಿಣಾಮಕಾರಿ ಲಾಕ್‌ಡೌನ್' ಜಾರಿಗೆ ತರಲು ನಿರ್ಧರಿಸಿದೆ. ಈ ಲಾಕ್‌ಡೌನ್‌ನಿಂದ ಸುಮಾರು 10 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಅದಾಗ್ಯೂ ಈಗಾಗಲೇ ಸಂಕಷ್ಟದಲ್ಲಿರುವ ಆರ್ಥಿಕತೆಗೆ ಮತ್ತಷ್ಟು ಹಾನಿಯಾಗದಂತೆ ತಡೆಯಲು ಪಾಕಿಸ್ತಾನ ಸರ್ಕಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ತರುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಲಾಗಿದೆ.

ವಾಸ್ತವವಾಗಿ ಪಾಕಿಸ್ತಾನದಲ್ಲಿ ಕರೋನಾವೈರಸ್ (Coronavirus) ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಧಿಕಾರಿಗಳು ದೇಶದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಸಾಂಕ್ರಾಮಿಕ ರೋಗ ಹರಡುವಿಕೆಯ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ ಎಂದು ವಿವರಿಸಿದ್ದಾರೆ.

ಅದೇ ಸಮಯದಲ್ಲಿ, ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಮತ್ತು ರಕ್ಷಣಾ ಸಚಿವ ಪರ್ವೇಜ್ ಖಟಕ್ ಅವರು ಕರೋನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಇದಕ್ಕೂ ಮೊದಲು ಸುಮಾರು ಒಂದು ವಾರದ ಹಿಂದೆ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಕರೋನಾ ಸೋಂಕಿಗೆ ತುತ್ತಾಗಿದ್ದರು. 

ಇದನ್ನೂ ಓದಿ - Covid-19 ಆತಂಕ: ಈ ದೇಶದಲ್ಲಿ ಮದ್ಯ ನಿಷೇಧಕ್ಕೆ ಸಿದ್ಧತೆ, ಆದರೂ ತೆರೆದಿರುತ್ತಂತೆ ಬಾರ್‌ಗಳು

ಏತನ್ಮಧ್ಯೆ, ದೇಶದಲ್ಲಿ ಹೆಚ್ಚಾಗುತ್ತಿರುವ ಕೋವಿಡ್ -19 ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಏಪ್ರಿಲ್ 1 ರಿಂದ ಲಾಹೋರ್ ಸೇರಿದಂತೆ ದೇಶದ ಇತರ ನಗರಗಳಲ್ಲೂ ಲಾಕ್‌ಡೌನ್ (Lockdown) ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ಲಾಕ್‌ಡೌನ್ ಏಪ್ರಿಲ್ 11 ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಈ ಸಮಯದಲ್ಲಿ ವಿವಾಹ ಸಮಾರಂಭಗಳು ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು, ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಿಳಿದುಬಂದಿದೆ.

ಸಾರ್ವಜನಿಕ ಸಾರಿಗೆ ಸೇವೆಗಳು ಬಂದ್, ಎಲ್ಲಾ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಆಹಾರ ನಿಷೇಧ:
ಆರೆಂಜ್ ಲೈನ್ ಮೆಟ್ರೋ ಮತ್ತು ಸ್ಪೀಡೋ ಬಸ್ ಸೇವೆಯಂತಹ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಮುಚ್ಚಲಾಗುವುದು ಮತ್ತು ಎಲ್ಲಾ ಉದ್ಯಾನವನಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಜೊತೆಗೆ ಎಲ್ಲಾ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಆಹಾರವನ್ನು ನಿಷೇಧಿಸಲಾಗುವುದು ಎಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಆಹಾರವನ್ನು ಪಾರ್ಸಲ್ ಕೊಂಡೊಯ್ಯುವ ವ್ಯವಸ್ಥೆ ಲಭ್ಯವಿರಲಿದೆ. ಇದಲ್ಲದೆ ಮಾರುಕಟ್ಟೆ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಸಂಜೆ ಆರು ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ - J&K: ಕೊರೊನಾ ಲಸಿಕೆ ಹಾಕಿಸಿಕೊಂಡ 28 ದಿನಗಳ ಬಳಿಕ ಸೋಂಕಿಗೆ ಗುರಿಯಾದ Farooq Abdullah

ದೇಶದಲ್ಲಿ ಹೆಚ್ಚಿನ ತಲ್ಲಣ ಸೃಷ್ಟಿಸಿದ ಕರೋನಾ ಮೂರನೇ ತರಂಗ:
ಕರೋನಾವೈರಸ್ ಸೋಂಕಿನ ಮೂರನೇ ತರಂಗವು ಲಾಹೋರ್, ಗುಜ್ರಾನ್ವಾಲಾ, ಗುಜರಾತ್, ರಾವಲ್ಪಿಂಡಿ, ಸರ್ಗೋಧಾ, ಫೈಸಲಾಬಾದ್ ಮತ್ತು ಮುಲ್ತಾನ್ ನಗರಗಳಲ್ಲಿ ಹೆಚ್ಚಿನ ಹಾನಿ ಉಂಟುಮಾಡಿದೆ. ಪಂಜಾಬ್ ಪ್ರಾಂತ್ಯದಲ್ಲಿ ಭಾನುವಾರ 2,823 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, 39 ಜನರು ಸಾಂಕ್ರಮಿಕಕ್ಕೆ ಬಲಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಪಾಕಿಸ್ತಾನದಲ್ಲಿ, ಕಳೆದ 24 ಗಂಟೆಗಳಲ್ಲಿ  4,525 ಹೊಸ ಕರೋನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು 41 ರೋಗಿಗಳು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದಲ್ಲಿ ಈವರೆಗೆ ಒಟ್ಟು 659,116 ಕರೋನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ರೋಗದಿಂದ 14,256 ಜನರು ಸಾವನ್ನಪ್ಪಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News