ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್‍ಗೆ ಏಳು ವರ್ಷ ಜೈಲು

ಪಾಕಿಸ್ತಾನದ ನ್ಯಾಯಾಲಯ ಸೋಮವಾರದಂದು ಪಾಕ್ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರಿಗೆ ಏಳು ವರ್ಷ ಶಿಕ್ಷೆ ವಿಧಿಸಿದೆ.  

Last Updated : Dec 24, 2018, 04:38 PM IST
ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್‍ಗೆ ಏಳು ವರ್ಷ ಜೈಲು  title=

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್‍ಗೆ ನ್ಯಾಯಾಲಯವು ಅಲ್-ಅಜೀಜಿಯ ಪ್ರಕರಣದಲ್ಲಿ ಫ್ಲ್ಯಾಗ್ಶಿಪ್ ಹೂಡಿಕೆಗೆ ಸಂಬಂಧಿಸಿದಂತೆ ಏಳು ವರ್ಷ ಶಿಕ್ಷೆ ವಿಧಿಸಿದೆ.

ಶರೀಫ್ ವಿರುದ್ಧದ ಎರಡು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್ ನ್ಯಾಯಾಲಯವು ಇಂದು ತೀರ್ಪನ್ನು ಪ್ರಕಟಿಸಿದೆ.  ಸೌದಿ ಅರೇಬಿಯಾದಲ್ಲಿ ಉಕ್ಕಿನ ಗಿರಣಿಯ ಮಾಲೀಕತ್ವಕ್ಕಾಗಿ ಆದಾಯದ ಮೂಲವನ್ನು ಸಾಬೀತುಪಡಿಸಲು ವಿಫಲರಾದ ಕಾರಣ ಶರೀಫ್ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.

ಲಂಡನ್‍ನಲ್ಲಿ ಐಷಾರಾಮಿ ಬಂಗಲೆ ಸೇರಿದಂತೆ ಅಕ್ರಮ ಆಸ್ತಿ ಖರೀದಿಸಿದ್ದ ಆರೋಪದ ಮೇರೆಗೆ ನವಾಜ್ ಷರೀಫ್‍ಗೆ ಇದೇ ನ್ಯಾಯಾಲಯವು ಜುಲೈನಲ್ಲಿ ಶರೀಫ್'ಗೆ 10ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

Trending News