'IOC ಸಭೆಯ ಬಳಿಕ ಇಮ್ರಾನ್ ಕುರ್ಚಿ ತೊರೆಯಬೇಕು' Imran Khan ಗೆ ಪಾಕ್ ಸೇನೆಯ ಸೂಚನೆ

Pakistan: ಪಾಕ್ (Pakistan) ಪ್ರಧಾನಿ ಇಮ್ರಾನ್ ಖಾನ್ ಗೆ (Imran Khan) ಕೌಂಟ್ಡೌನ್ ಶುರುವಾಗಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಪಾಕ್ ಸೇನೆ ಇಮ್ರಾನ್ ಖಾನ್ ಗೆ IOC ಸಭೆಯ ಬಳಿಕ ಕುರ್ಚಿ ತೊರೆಯುವಂತೆ ಸೂಚಿಸಿದೆ ಎನ್ನಲಾಗಿದೆ.  

Written by - Nitin Tabib | Last Updated : Mar 21, 2022, 02:45 PM IST
  • ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಗೆ ಕೌಂಟ್ಡೌನ್ ಆರಂಭ
  • IOC ಸಭೆಯ ಬಳಿಕ ಪ್ರಧಾನಿ ಹುದ್ದೆ ತೊರೆಯಲು ಇಮ್ರಾನ್ ಸೂಚನೆ
  • ಪಾಕ್ ಸೇನೆಯ ವತಿಯಿಂದ ಈ ಸೂಚನೆ ನೀಡಲಾಗಿದೆ ಎನ್ನಲಾಗಿದೆ
'IOC ಸಭೆಯ ಬಳಿಕ ಇಮ್ರಾನ್ ಕುರ್ಚಿ ತೊರೆಯಬೇಕು' Imran Khan ಗೆ ಪಾಕ್ ಸೇನೆಯ ಸೂಚನೆ title=
Imran Khan Resignation (File Photo)

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ಕೌಂಟ್ಡೌನ್ ಆರಂಭವಾಗಿದೆ. IOC ಸಭೆಯ ನಂತರ ಇಮ್ರಾನ್ ಖಾನ್ ಕುರ್ಚಿ ತೊರೆಯಬೇಕು ಎಂದು ಪಾಕ್ ಸೇನೆ ಹೇಳಿದೆ ಎಂದು ಮೂಲಗಳು ವರದಿ ಮಾಡಿವೆ. ವಾಸ್ತವದಲ್ಲಿ, ಪ್ರಸ್ತುತ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಒಂದೆಡೆ ಪಾಕ್ ಸೇನೆಯೊಂದಿಗೆ (Pakistani Army) ಅವರ ಸಂಬಂಧ ಚೆನ್ನಾಗಿಲ್ಲ ಎನ್ನಲಾಗುತ್ತಿದ್ದ್ರೆ, ಇನ್ನೊಂದೆಡೆ ವಿರೋಧ ಪಕ್ಷಗಳು (Opposition Parties) ಇಮ್ರಾನ್ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆಗೆ (No Confidence Motion) ಆಗ್ರಹಿಸುತ್ತಿವೆ.

ಮೂಲಗಳ ಪ್ರಕಾರ, ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಾರ್ಪೊರೇಷನ್ (IOC) ಸಭೆಯ ನಂತರ ಪಾಕಿಸ್ತಾನ ಸೇನೆಯ ಉನ್ನತ ಅಧಿಕಾರಿಗಳು ಇಮ್ರಾನ್ ಖಾನ್ ಅವರನ್ನು ರಾಜೀನಾಮೆ (Imran Khan Resignation) ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಪಾಕ್ ಸೇನೆಯ ಪರವಾಗಿ ಇದನ್ನು ಹೇಳುತ್ತಿರುವವರಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ (Qamar Javed Bajwa) ಕೂಡ ಶಾಮೀಲಾಗಿದ್ದಾರೆ.

ಇದನ್ನೂ ಓದಿ-Plane Crash: 133 ಪ್ರಯಾಣಿಕರಿದ್ದ ವಿಮಾನ ಚೀನಾದಲ್ಲಿ ಪತನ..!

ಮಾರ್ಚ್ 22 ಮತ್ತು 23 ರಂದು ಪಾಕಿಸ್ತಾನದಲ್ಲಿ OIC ಸಭೆ ನಡೆಯಲಿದೆ. ಇಮ್ರಾನ್ ಖಾನ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಪಾಕಿಸ್ತಾನದಲ್ಲಿ IOC ಸಭೆಯನ್ನು ಶಾಂತಿಯುತವಾಗಿ ನಡೆಸುವುದಿಲ್ಲ ಎಂದು ಈ ಹಿಂದೆ ವಿರೋಧ ಪಕ್ಷಗಳ ನಾಯಕರು ಬೆದರಿಕೆಯೊಡ್ಡಿ ಸಭೆಯನ್ನು ವಿರೋಧಿಸುವುದಾಗಿ ಹೇಳಿದ್ದರು.

ಇದನ್ನೂ ಓದಿ-Child With Snake Video: ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು, ಮುಂದೇನಾಯ್ತು... ಈ ವಿಡಿಯೋ ನೋಡಿ...

ವಿರೋಧ ಪಕ್ಷಗಳ ರಚಿಸಿರುವ ಚಕ್ರವ್ಯೂಹದಲ್ಲಿಯೂ ಕೂಡ ಇಮ್ರಾನ್ ಖಾನ್ ಕೂಡ ಸಿಕ್ಕಿಬಿದ್ದಿದ್ದಾರೆ. ಅವರ ಕುರ್ಚಿ ಹೋಗುವುದು ಬಹುತೇಕ ಖಚಿತ ಎಂದು ನಂಬಲಾಗಿದೆ. ಪ್ರತಿಪಕ್ಷಗಳು ಇಮ್ರಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತಂದಿದ್ದು, ಅದರ ಮೇಲೆ ಮತದಾನ ನಡೆಯುವುದು ಇನ್ನೂ ಬಾಕಿ ಇದೆ. ಇದಕ್ಕೂ ಮುನ್ನ ಆಡಳಿತ ಪಕ್ಷ PTI ನ 24 ಸಂಸದರು ಬಂಡಾಯದ ಬಾವುಟ ಹಾರಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸುವ ಬದಲು, ಪಾಕಿಸ್ತಾನ ಸರ್ಕಾರವು ಬಂಡಾಯ ಸಂಸದರಿಗೆ ಮುಂದೆ ಬರುವಂತೆ ಬೆದರಿಕೆ ಹಾಕುತ್ತಿದ್ದು, ಅವರು ಮುಂದೆ ಬರದೆ ಹೋದಲ್ಲಿ ಪಕ್ಷದ ಕಾರ್ಯಕರ್ತರು ಅವರನ್ನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಿದೆ.

ಇದನ್ನೂ ಓದಿ-Ukraine Conflict: ಅಮೇರಿಕಾ-ಉ.ಕೊರಿಯಾ ಮಧ್ಯೆ ಯುದ್ಧ ಸಂಭವಿಸಲಿದೆಯಾ? ಏನಿದು ಹೊಸ ಭವಿಷ್ಯವಾಣಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News