Pakistan: ಸೇನಾ ಮುಖ್ಯಸ್ಥರ ಎಚ್ಚರಿಕೆಯ ಬಳಿಕ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಆಪರೇಶನ್ ಕಾಟ

Pakistan - ಭಯೋತ್ಪಾದಕರ ಅಡ್ಡೆಯಾಗಿ ಮಾರ್ಪಟ್ಟಿರುವ ಪಾಕಿಸ್ತಾನ ಪ್ರತಿ ಬಾರಿಯೂ ಭಾರತದ ಸೇನಾ ದಾಳಿಯ ಭೀತಿಯಲ್ಲಿಯೇ ಬಳಲುತ್ತಿದೆ. ಮತ್ತೊಮ್ಮೆ ಪಾಕಿಸ್ತಾನದ ಈ ಭಯ ಜಗತ್ತಿನ ಮುಂದೆ ಬಹಿರಂಗಗೊಂಡಿದ್ದು, ಭಾರತವು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರ್ಯಾಚರಣೆ ನಡೆಸಬಹುದು ಎಂದು ಬಹಿರಂಗವಾಗಿ ಒಪ್ಪಿಕೊಂಡಿದೆ.

Written by - Nitin Tabib | Last Updated : Jan 14, 2022, 08:30 PM IST
  • ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ನಡುಕ.
  • ಕಾಡುತ್ತಿದೆ ಭಾರತದ ಕಾರ್ಯಾಚರಣೆಯ ಕಾಟ
  • ಮಾತುಕತೆಗೆ ಮುಂದಾದ ಪಾಕಿಸ್ತಾನ
Pakistan: ಸೇನಾ ಮುಖ್ಯಸ್ಥರ ಎಚ್ಚರಿಕೆಯ ಬಳಿಕ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಆಪರೇಶನ್ ಕಾಟ title=
Imran Khan (File Photo)

ನವದೆಹಲಿ: Pakistan - ಭಾರತದ (India) ವಿರುದ್ಧ ಪಾಕಿಸ್ತಾನ (Pakistan) ನಿರಂತರವಾಗಿ ಸುಳ್ಳು ಪ್ರಚಾರ ನಡೆಸುತ್ತಿದ್ದು, ಇದರಲ್ಲಿ ಹೊಸದೇನೂ ಇಲ್ಲ. ಆದರೆ ನೆರೆಯ ರಾಷ್ಟ್ರವು ಇದೀಗ ಭಾರತೀಯ ಸೇನೆಗೆ ಎಷ್ಟು ಹೆದರುತ್ತಿದೆಯೆಂದರೆ, ತನ್ನೀ ಆತಂಕವನ್ನು ಅದು ಬಹಿರಂಗವಾಗಿ ಒಪ್ಪಿಕೊಂಡಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಅಸೀಮ್ ಇಫ್ತಿಕರ್ ಅಹ್ಮದ್ (Asim Iftikhar Ahmad) ಅವರು ಮತ್ತೊಮ್ಮೆ ಭಾರತದ ಬಗೆಗಿನ ಭಯವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಭಾರತೀಯ ಸೇನಾ ಮುಖ್ಯಸ್ಥ ಎಂಎಂ ನರವಾಣೆ (Indian Army Chief) ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕಿಸ್ತಾನದ ಈ ಹೇಳಿಕೆ ಹೊರಬಂದಿದೆ. 

ಪಾಕಿಸ್ತಾನಕ್ಕೆ ಕಾರ್ಯಾಚರಣೆಯ ಭಯ
'ಡಾನ್' ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಭಾರತವು ತನ್ನ ವಿರುದ್ಧ ಯಾವುದೇ ಸುಳ್ಳು ಕಾರ್ಯಾಚರಣೆ ನಡೆಸಬಹುದು ಎಂದು ಪಾಕಿಸ್ತಾನವು ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಹೇಳಿದೆ. ಇದಕ್ಕಾಗಿ ಪಾಕಿಸ್ತಾನ ಕೂಡ ತನ್ನ ಸ್ನೇಹಿ ರಾಷ್ಟ್ರಗಳನ್ನು ಎಚ್ಚರಿಸಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಭಾರತ ಮತ್ತೊಂದು ಕಾರ್ಯಾಚರಣೆ ನಡೆಸಬಹುದು ಎಂಬ ಆತಂಕವಿದೆ ಎಂದು ವಕ್ತಾರ ಅಸೀಮ್ ಇಫ್ತಿಕರ್ ಹೇಳಿದ್ದಾರೆ. ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಪಾಕಿಸ್ತಾನ ಭಯದಲ್ಲಿದೆ ಮತ್ತು ಯಾವುದೇ ಸಂದರ್ಭದಲ್ಲಿ ಈ ದಾಳಿ ನಡೆಯಬಹುದು ಎಂದು ಹೆದರುತ್ತಿದೆ.

ಈ ಸಂದರ್ಭದಲ್ಲಿ ಪಾಕಿಸ್ತಾನ ಭಾರತದೊಂಡಿವೆ ಮಾತುಕತೆ ಬಯಸುತ್ತಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ಪುನರುಚ್ಚರಿಸಿದೆ. ಗಡಿಯಲ್ಲಿ ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಗೆ ನೀಡಿದ್ದು, ಪ್ರಾದೇಶಿಕ ಶಾಂತಿಗೆ ಇದು ಅಗತ್ಯ ಎಂದು ಪಾಕ್ ವಕ್ತಾರರು ಹೇಳಿದ್ದಾರೆ.ಆದರೆ, ಅಖಂಡ ಭಾರತದ ವಿಸ್ತರಣಾ ಧೋರಣೆಯಿಂದಾಗಿ ಈ ಶಾಂತಿಗೆ ಧಕ್ಕೆ ಉಂಟಾಗಬಹುದು ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನದೊಂದಿಗಿನ ಮಾತುಕತೆಯಲ್ಲಿ ಭಾರತದ ನಿಲುವು ಅತ್ಯಂತ ಸ್ಪಷ್ಟವಾಗಿದೆ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸದೆ, ನೆರೆಯ ರಾಷ್ಟ್ರದೊಂದಿಗೆ ಯಾವುದೇ ರೀತಿಯ ಮಾತುಕತೆ ಸಾಧ್ಯವಿಲ್ಲ ಎಂದು ಹಲವು ಬಾರಿ ಹೇಳಿದೆ.

ಸೇನಾ ಮುಖ್ಯಸ್ಥರು ನೀಡಿದ ಎಚ್ಚರಿಕೆಯಾದರು ಏನು?
ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ನಂತರ ಪಾಕಿಸ್ತಾನದ ಈ ಆತಂಕ ಬಹಿರಂಗಗೊಂಡಿದೆ. ಲಾಂಚ್ ಪ್ಯಾಡ್‌ಗಳಲ್ಲಿ (Terrorist Camp) ಇರುವ ಸುಮಾರು 350 ರಿಂದ 400 ಭಯೋತ್ಪಾದಕರು ಪುನರಾವರ್ತಿತ ಒಳನುಸುಳುವಿಕೆ ಪ್ರಯತ್ನಗಳು ಮತ್ತು ಎಲ್‌ಒಸಿಯಾದ್ಯಂತ ಭಯೋತ್ಪಾದಕರ ತರಬೇತಿ ಕ್ಯಾಂಪ್ ಗಳು (Terrorist Training Camp) ತಮ್ಮ ಕೆಟ್ಟ ಉದ್ದೇಶಗಳು ಇದನ್ನು ಬಹಿರಂಗಪಡಿಸುತ್ತಿವೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ನಮ್ಮ ಕಡೆಯಿಂದ, ನಾವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ತೋರಿಸಲು ನಿರ್ಧರಿಸಿದ್ದೇವೆ ಮತ್ತು ನಮಗೆ ಒತ್ತಾಯಿಸಿದರೆ ನಾವು ಗಂಭೀರ ಪ್ರತೀಕಾರವನ್ನು ತೆಗೆದುಕೊಳ್ಳಲು ಸಹ ಬದ್ಧರಾಗಿದ್ದೇವೆ ಎಂದು ಜನರಲ್ ನರವಾಣೆ ಹೇಳಿದ್ದರು.

ಇದನ್ನೂ ಓದಿ-Covid Treatment : Corona ಚಿಕಿತ್ಸೆಯಲ್ಲಿ ಯಾವ ಔಷಧಿ ಹೆಚ್ಚು ಪರಿಣಾಮಕಾರಿ? WHO ಸೂಚಿಸಿದ ಎರಡು ಔಷಧಿಗಳು ಇಲ್ಲಿವೆ

ಪಾಕಿಸ್ತಾನ ಭಾರತೀಯ ಸೇನಾ ಮುಖಸ್ಥರ ಹೇಳಿಕೆಯನ್ನುಖಂಡಿಸಿದೆ ಮತ್ತು ಈ ಆಧಾರರಹಿತ ಆರೋಪಗಳಲ್ಲಿ ಹೊಸದೇನೂ ಇಲ್ಲ ಮತ್ತು ಈ ಆರೋಪಗಳು ಪಾಕಿಸ್ತಾನ ವಿರೋಧಿ ಪ್ರಚಾರದ ಭಾಗವಾಗಿದೆ ಎಂದು ಹೇಳಿಕೊಂಡಿದೆ. ಭಾರತದ ಇಂತಹ ಹೇಳಿಕೆಗಳು ಕಾಶ್ಮೀರದಿಂದ ಅಂತರಾಷ್ಟ್ರೀಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಇದನ್ನೂ ಓದಿ-Book On Prophet Mohammed: ಮುಹಮ್ಮದ್ ಪೈಗಂಬರ್ ಕಾರ್ಟೂನ್ ಗೆ ಬೆದರಿದ ಸರ್ಕಾರ, ಇಡೀ ಪುಸ್ತಕದ ಮೇಲೆ ಬ್ಯಾನ್

ಪಾಕಿಸ್ತಾನವು ಭಾರತದಿಂದಾಗುವ ಸಂಭಾವ್ಯ ಕಾರ್ಯಾಚರಣೆಗೆ ಹೆದರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಕೂಡ ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಭಾರತದೊಂದಿಗೆ ಪರಮಾಣು ಯುದ್ಧದ ಬೆದರಿಕೆಯನ್ನು ವ್ಯಕ್ತಪಡಿಸಿದ್ದರು. ಇದಲ್ಲದೆ, ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಗ್ಗೆ ತಮ್ಮ ದ್ವೇಷಪೂರಿತ ಮಾತುಗಳನ್ನು ಪುನರಾವರ್ತಿಸಿದ್ದರು.

ಇದನ್ನೂ ಓದಿ-US Embassy: ಯುಎಸ್ ರಾಯಭಾರ ಕಚೇರಿಯ ಮೇಲೆ ರಾಕೆಟ್ ದಾಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News