ಪಾಕಿಸ್ತಾನವು ಹೊಸ ರೀತಿಯ ಅಣ್ವಸ್ತ್ರಗಳನ್ನು ಅಭಿವೃದ್ದಿಪಡಿಸುತ್ತಿದೆ- ಅಮೇರಿಕಾ

ಪಾಕಿಸ್ತಾನ ಹೊಸ ರೀತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ.ಇದರಿಂದ ದಕ್ಷಿಣ ಏಷ್ಯಾ ಪ್ರದೇಶಕ್ಕೆ ಹೆಚ್ಚು ಅಪಾಯಗಳನ್ನು ತಂದಿದೆ ಎಂದು ಅಮೆರಿಕದ ಗುಪ್ತಚರ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ. 

Last Updated : Feb 14, 2018, 07:11 PM IST
ಪಾಕಿಸ್ತಾನವು ಹೊಸ ರೀತಿಯ ಅಣ್ವಸ್ತ್ರಗಳನ್ನು ಅಭಿವೃದ್ದಿಪಡಿಸುತ್ತಿದೆ- ಅಮೇರಿಕಾ  title=

ವಾಷಿಂಗ್ಟನ್: ಪಾಕಿಸ್ತಾನ ಹೊಸ ರೀತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ.ಇದರಿಂದ ದಕ್ಷಿಣ ಏಷ್ಯಾ ಪ್ರದೇಶಕ್ಕೆ ಹೆಚ್ಚು ಅಪಾಯಗಳನ್ನು ತಂದಿದೆ ಎಂದು ಅಮೆರಿಕದ ಗುಪ್ತಚರ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ. 

ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಡಾನ್ ಕೋಟ್ಸ್ ಹೇಳಿಕೆಯು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರರು ಸುಂಜವಾನ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ನಂತರ ಬಂದಿದೆ. ಈ ದಾಳಿಯಲ್ಲಿ ಉಗ್ರರು ಏಳು ಜನರು ಹಾಗೂ ಆರು ಜನ ಸೈನಿಕರು ಮೃತಪಟ್ಟಿದ್ದರು.

ಪಾಕಿಸ್ತಾನವು ಹೊಸ ರೀತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ ಎಂದು ಕೋಟ್ ರವರು ವಿಶ್ವದಾದ್ಯಂತದ ಬೆದರಿಕೆಗಳ ಮೇಲೆ ಕಾಂಗ್ರೆಸ್ ವಿಚಾರಣೆಯ ಸಮಯದಲ್ಲಿ ಗುಪ್ತಚರ ಸೆನೆಟ್ ಆಯ್ಕೆ ಸಮಿತಿಯ ಮುಂದೆ ತಿಳಿಸಿದ್ದಾರೆ.ಈ ಹೊಸ ರೀತಿಯ ಶಸ್ತ್ರಾಸ್ತ್ರಗಳು ದಕ್ಷಿಣ ಏಷ್ಯಾ ಪ್ರದೇಶದ ಭದ್ರತೆ ಅಪಾಯವನ್ನು ತರುತ್ತದೆ ಎಂದು ಅವರು ವಿಚಾರಣೆಯ ಸಂಧರ್ಭದಲ್ಲಿ ತಿಳಿಸಿದ್ದಾರೆ.

Trending News