Pak Politics: ರಾಜಕೀಯ ಬೆಂಕಿಯಲ್ಲಿ ಪಾಕ್ ಕೊತಕೊತ, ಇಮ್ರಾನ್ ಗಲ್ಲಿಗೆ ತೀವ್ರ ಆಗ್ರಹ, ಲಾಹೋರ್ ನಲ್ಲಿ ಸೆಕ್ಷನ 144 ಜಾರಿ

Pak Crisis: ಪಾಕಿಸ್ತಾನದ ಸೇನೆಯ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ಮುಂದಿನ ಏಳು ದಿನಗಳವರೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ಅಲ್ಲಿಯವರೆಗೆ ಯಾವುದೇ ಸಭೆ, ರ್ಯಾಲಿ, ಮೆರವಣಿಗೆಗಳಂತಹ ಚಟುವಟಿಕೆಗಳ ಮೇಲೆ ನಿಷೇಧವಿರಲಿದೆ.   

Written by - Nitin Tabib | Last Updated : May 15, 2023, 07:25 PM IST
  • ಮೇ 9 ರ ನಂತರ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ 70 ವರ್ಷದ ಇಮ್ರಾನ್ ಖಾನ್ ಅವರಿಗೆ ಜಾಮೀನು ನೀಡಲಾಗಿದ್ದು,
  • ಬಂಧನವನ್ನು ತಡೆಹಿಡಿಯಲಾಗಿದೆ ಮತ್ತು ಹೆಚ್ಚಿನ ಪರಿಹಾರಕ್ಕಾಗಿ ಮೇ 15 ರಂದು ಲಾಹೋರ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
  • ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಖಾನ್ ಅವರನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಮತ್ತು ಪ್ರಕರಣವನ್ನು IHC ಗೆ ಹಸ್ತಾಂತರಿಸಿದೆ.
Pak Politics: ರಾಜಕೀಯ ಬೆಂಕಿಯಲ್ಲಿ ಪಾಕ್ ಕೊತಕೊತ, ಇಮ್ರಾನ್ ಗಲ್ಲಿಗೆ ತೀವ್ರ ಆಗ್ರಹ, ಲಾಹೋರ್ ನಲ್ಲಿ ಸೆಕ್ಷನ 144 ಜಾರಿ  title=
ಇಮ್ರಾನ್ ಖಾನ್

Pakistan Crisis: ಪಾಕಿಸ್ತಾನದ ಸೇನೆಯ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ಕ್ರಮಕ್ಕೆ ಸಂಬಂಧಿಸಿದಂತೆ ಅವರ ಬೆಂಬಲಿಗರು ಪಾಕಿಸ್ತಾನದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೆಹಬಾಜ್ ಸರಕಾರಕ್ಕೆ ಕಂಟಕವಾಗಿ ಪರಿಣಮಿಸಿರುವ ಇಮ್ರಾನ್ ಅವರನ್ನು ತಡೆಯಲು ಪಾಕಿಸ್ತಾನ ಸರಕಾರ ನಾನಾ ತಂತ್ರಗಳನ್ನು ಅನುಸರಿಸುತ್ತಿದೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ರಿಯಾಜ್ ಅಹ್ಮದ್ ಖಾನ್ ಅವರು ಇಮ್ರಾನ್ ಖಾನ್ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ, ಆದರೆ ಮತ್ತೊಂದೆಡೆ, ನ್ಯಾಯಾಲಯವು ಅವರನ್ನು ಅಳಿಯನಂತೆ ಸ್ವಾಗತಿಸುತ್ತಿದೆ. ಹೆಚ್ಚುತ್ತಿರುವ ಗದ್ದಲದ ಹಿನ್ನೆಲೆಯಲ್ಲಿ, ಮುಂದಿನ ಏಳು ದಿನಗಳವರೆಗೆ ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ, ಅಲ್ಲಿಯವರೆಗೆ ಯಾವುದೇ ಸಭೆ, ರ್ಯಾಲಿ, ಮೆರವಣಿಗೆಗಳಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ-Maharashtra Politics: ಶರದ್ ಪವಾರ್ ಮನೆಯಲ್ಲಿ ಎಂವಿಎ ಸಭೆ, 2024ರ ಸ್ಥಾನ ಹಂಚಿಕೆ ಕುರಿತು ಚರ್ಚೆ

ಪಾಕಿಸ್ತಾನದಲ್ಲಿ ಏನಾಗುತ್ತಿದೆ?
ಪಾಕಿಸ್ತಾನದ ಗಲಾಟೆ ಇನ್ನೂ ಮುಂದುವರೆದಿದೆ. ಪಿಡಿಎಂ ಸರ್ಕಾರದ ಬೆಂಬಲಿಗರು ನ್ಯಾಯಾಲಯವನ್ನು ಪ್ರತಿಭಟನಾ ಸ್ಥಳವನ್ನಾಗಿ ಮಾಡಿಕೊಂಡಿದ್ದು, ವೇದಿಕೆಯನ್ನು ಸ್ಥಾಪಿಸಿ ನ್ಯಾಯಾಧೀಶರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಮ್ರಾನ್ ಖಾನ್ ಅವರ ಬೆಂಬಲಿಗರು ತಮ್ಮ ಮಹಾನಾಯಕನನ್ನು ಬೆಂಬಲಿಸಿ ಶಾಂತಿಯುತ ಧರಣಿಯನ್ನು ಸಹ ಆಯೋಜಿಸಿದ್ದಾರೆ, ಆದರೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಡೈಲಿ ಪಾಕಿಸ್ತಾನದ ವರದಿಯ ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್ ವಿರುದ್ಧ ದುರ್ನಡತೆಯ ನಿರ್ಣಯವನ್ನು ಅಂಗೀಕರಿಸಲಾಗಿದೆ. ಇಮ್ರಾನ್ ಪರವಾಗಿ ತೀರ್ಪು ನೀಡುವಾಗ, ಬಂಧನವನ್ನು ಕಾನೂನುಬಾಹಿರ ಎಂದು ಕರೆದ ಅದೇ ಬಂಡಿಯಾಲ್  ಇವರಾಗಿದ್ದಾರೆ.  ಬಂಡಿಯಾಲ್ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಆಡಳಿತ ಪಕ್ಷ ಆರೋಪಿಸಿದೆ.

ಇದನ್ನೂ ಓದಿ-Maharashtra Violence: ಅಕೋಲಾ ಬಳಿಕ ಇದೀಗ ಅಹ್ಮದ್ ನಗರದಲ್ಲಿ ಭುಗಿಲೆದ್ದ ಹಿಂಸಾಚಾರ

ಭದ್ರತಾ ಏಜೆಂಸಿಗಳ ಮೇಲೆ ಇಮ್ರಾನ್ ಆರೋಪ
ಮೇ 9 ರ ನಂತರ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ 70 ವರ್ಷದ ಇಮ್ರಾನ್ ಖಾನ್ ಅವರಿಗೆ ಜಾಮೀನು ನೀಡಲಾಗಿದ್ದು, ಬಂಧನವನ್ನು ತಡೆಹಿಡಿಯಲಾಗಿದೆ ಮತ್ತು ಹೆಚ್ಚಿನ ಪರಿಹಾರಕ್ಕಾಗಿ ಮೇ 15 ರಂದು ಲಾಹೋರ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಖಾನ್ ಅವರನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಮತ್ತು ಪ್ರಕರಣವನ್ನು IHC ಗೆ ಹಸ್ತಾಂತರಿಸಿದೆ. ಇಷ್ಟೇ ಅಲ್ಲ, ಇಮ್ರಾನ್ ಖಾನ್ ತಮ್ಮ 7000 ಬೆಂಬಲಿಗರನ್ನು ಯಾವುದೇ ಆರೋಪವಿಲ್ಲದೆ ಪಾಕಿಸ್ತಾನದ ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ಟ್ವೀಟ್ ಮಾಡಿದ್ದಾರೆ. ಇದಿಷ್ಟೇ ಅಲ್ಲ... ತಮ್ಮ ಹಲವು ನಾಯಕರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ. ಪಾಕಿಸ್ತಾನ ಸೇನೆ ತನ್ನ ಪಕ್ಷವನ್ನು ಹತ್ತಿಕ್ಕಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News