ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಸ್ಫೋಟ: ಚೀನಿ ಪ್ರಜೆಗಳು ಸೇರಿ ನಾಲ್ವರ ಸಾವು

ಸ್ಫೋಟ ಸಂಭವಿಸಿದ ವ್ಯಾನ್‌ನ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬೆಂಕಿಯ ಜ್ವಾಲೆಗೆ ವಾಹನ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. 

Written by - Zee Kannada News Desk | Last Updated : Apr 26, 2022, 06:16 PM IST
  • ಪಾಕಿಸ್ತಾನದ ಕರಾಚಿ ವಿವಿ ಆವರಣದಲ್ಲಿ ವ್ಯಾನ್‍ನಲ್ಲಿ ಸ್ಫೋಟ ಸಂಭವಿಸಿದೆ
  • ಘಟನೆಯಲ್ಲಿ ಇಬ್ಬರು ಚೀನಾ ಪ್ರಜೆಗಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ
  • ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ
ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಸ್ಫೋಟ: ಚೀನಿ ಪ್ರಜೆಗಳು ಸೇರಿ ನಾಲ್ವರ ಸಾವು title=
ಕರಾಚಿ ವಿವಿ ಆವರಣದಲ್ಲಿ ವ್ಯಾನ್‍ನಲ್ಲಿ ಸ್ಫೋಟ

ಕರಾಚಿ: ಪಾಕಿಸ್ತಾನದ ರಾಜಧಾನಿ ಕರಾಚಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಂಗಳವಾರ ವ್ಯಾನ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಚೀನಾದ ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ ಚೀನಾದ ಇಂಟರ್‍ನ್ಯಾಷನಲ್ ಎಜುಕೇಷನ್ ಫೌಂಡೇಷನ್ ಹಣಕಾಸು ಸಹಕಾರ ಮತ್ತು ಕೋರ್ಸ್ ವ್ಯವಸ್ಥೆ ರೂಪಿಸಿರುವ ಕರಾಚಿ ವಿವಿಯ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿ ವ್ಯಾನ್‌ನಲ್ಲಿ ಸ್ಫೋಟ ಸಂಭವಿಸಿದೆ. ಇದು ಸ್ಥಳೀಯ ವಿದ್ಯಾರ್ಥಿಗಳಿಗೆ ಚೈನೀಸ್ ಭಾಷೆಯನ್ನು ಕಲಿಸುವ ಲಾಭರಹಿತ ಸಂಸ್ಥೆಯಾಗಿದೆ.

ಇದನ್ನೂ ಓದಿ: 20 ಲಕ್ಷಕ್ಕೂ ಹೆಚ್ಚು ನೀರಿನ ಬಿಲ್: ಶಿಕ್ಷಕರ ನಿರ್ಲಕ್ಷ್ಯದಿಂದ ಶಾಲೆಗೆ ಭಾರಿ ನಷ್ಟ!

ವ್ಯಾನ್‌ನಲ್ಲಿ 7-8 ಮಂದಿ ಪ್ರಯಾಣಿಸುತ್ತಿದ್ದರು. ಚೀನಾದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಫೋಟಕ್ಕೆ ಬಲಿಯಾಗಿದ್ದಾರೆ. ಸಾವನ್ನಪ್ಪಿದ ಇನ್ನಿಬ್ಬರು ವ್ಯಾನ್‌ನಲ್ಲಿದ್ದ ಚಾಲಕ ಮತ್ತು ಭದ್ರತಾ ಸಿಬ್ಬಂದಿಯಾಗಿದ್ದು, ಸ್ಫೋಟ ಸಂಭವಿಸಿದಾಗ ವ್ಯಾನ್‌ನ ಹತ್ತಿರದಲ್ಲಿದ್ದ ಇತರ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ಬಗ್ಗೆ ವ್ಯತಿರಿಕ್ತ ವರದಿಗಳಿವೆ. ಆದರೆ, ಪ್ರಾಥಮಿಕ ತನಿಖೆ ನಡೆಯುತ್ತಿವೆ. ವ್ಯಾನ್ ಒಳಗೆ ಅಥವಾ ಹತ್ತಿರದಲ್ಲಿ ಇರಿಸಲಾದ ರಿಮೋಟ್ ನಿಯಂತ್ರಿತ ಸ್ಫೋಟಕ ಸಾಧನದಿಂದ ಸ್ಫೋಟ ಸಂಭವಿಸಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಖದಾಸ್ ಹೈದರ್ ಹೇಳಿದ್ದಾರೆ.

ಇದನ್ನೂ ಓದಿ: ನಿಲ್ಲದ ರಷ್ಯಾ - ಉಕ್ರೇನ್‌ ಯುದ್ಧ: ಸಾಮೂಹಿಕ ಸಮಾಧಿಯ ಚಿತ್ರ ಬಿಡುಗಡೆ ಮಾಡಿದ ಉಪಗ್ರಹ!

ಗ್ಯಾಸ್ ಸಿಲಿಂಡರ್‍ನಿಂದ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದ್ದು, ಪೊಲೀಸರು ಇದನ್ನು ದೃಢಪಡಿಸಿಲ್ಲ. ಚೈನೀಸ್ ಭಾಷೆ ಕಲಿಕಾ ಕೇಂದ್ರ ಕಂಫ್ಯೂಸಿಯಸ್ ಇನ್‍ಸ್ಟಿಟ್ಯೂಟ್‍ನಿಂದ ಸಂತ್ರಸ್ತರು ವ್ಯಾನ್ ಮೂಲಕ ಅತಿಥಿ ಗೃಹಕ್ಕೆ ಹಿಂದಿರುಗುತ್ತಿದ್ದರು.

ಸ್ಫೋಟ ಸಂಭವಿಸಿದ ವ್ಯಾನ್‌ನ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬೆಂಕಿಯ ಜ್ವಾಲೆಗೆ ವಾಹನ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ವಿಷಯ ತಿಳಿದ ತಕ್ಷಣವೇ ಪೊಲೀಸರು ಮತ್ತು ಅರೆಸೈನಿಕ ರೇಂಜರ್‌ಗಳು ಘಟನಾ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪಾಕಿಸ್ತಾನದ ಅತಿದೊಡ್ಡ ನಗರ ಮತ್ತು ಆರ್ಥಿಕ ಕೇಂದ್ರವಾಗಿರುವ ಕರಾಚಿಯಲ್ಲಿ ಚೀನಾದ ಪ್ರಜೆಗಳು ಭಯೋತ್ಪಾದಕ ದಾಳಿಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News