ಕೊರೋನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿ ಆಕ್ಸ್‌ಫರ್ಡ್ ವಿವಿಗೆ ಹಿನ್ನಡೆ

ಯುಎಸ್ ಬಯೋಟೆಕ್ನಾಲಜಿ ಕಂಪನಿ ಮಾಡರ್ನಾ ಇಂಕ್ ತನ್ನ ಕೋವಿಡ್ -19 ಲಸಿಕೆಯೊಂದಿಗೆ ಸಾಂಕ್ರಾಮಿಕ ರೋಗವನ್ನು ಎದುರಿಸುವ ಜಾಗತಿಕ ಪ್ರಯತ್ನದಲ್ಲಿ ತಾತ್ಕಾಲಿಕ ಭರವಸೆ ನೀಡಿದ್ದು ಒಂದೆಡೆಯಾದರೆ. ಇನ್ನೊಂದೆಡೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಕೋತಿಗಳಲ್ಲಿ ಸೋಂಕನ್ನು ತಡೆಯಲು ವಿಫಲವಾಗಿದೆ.

Last Updated : May 20, 2020, 09:21 PM IST
ಕೊರೋನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿ ಆಕ್ಸ್‌ಫರ್ಡ್ ವಿವಿಗೆ ಹಿನ್ನಡೆ  title=

ನವದೆಹಲಿ: ಯುಎಸ್ ಬಯೋಟೆಕ್ನಾಲಜಿ ಕಂಪನಿ ಮಾಡರ್ನಾ ಇಂಕ್ ತನ್ನ ಕೋವಿಡ್ -19 ಲಸಿಕೆಯೊಂದಿಗೆ ಸಾಂಕ್ರಾಮಿಕ ರೋಗವನ್ನು ಎದುರಿಸುವ ಜಾಗತಿಕ ಪ್ರಯತ್ನದಲ್ಲಿ ತಾತ್ಕಾಲಿಕ ಭರವಸೆ ನೀಡಿದ್ದು ಒಂದೆಡೆಯಾದರೆ. ಇನ್ನೊಂದೆಡೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಕೋತಿಗಳಲ್ಲಿ ಸೋಂಕನ್ನು ತಡೆಯಲು ವಿಫಲವಾಗಿದೆ.

ಆ ಮೂಲಕ ಈಗ ಪ್ರಾಯೋಗಿಕ ಲಸಿಕೆ - ChAdOx1 nCoV-19 ಸಿದ್ದಪಡಿಸುವಲ್ಲಿನ ಪ್ರಯತ್ನದಲ್ಲಿ ಆಕ್ಸ್‌ಫರ್ಡ್‌ ವಿಫಲವಾಗಿದೆ.

ಸ್ವತಃ ಕೊರೋನಾ ದಿಂದ ಬದುಕುಳಿದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಲಸಿಕೆ ವಿಚಾರವಾಗಿ ಪ್ರತಿಕ್ರಿಯಿಸಿ 'ಇನ್ನೂ ಬಹಳ ದೂರ ಸಾಗಬೇಕಿದೆ ಮತ್ತು ಈ ಲಸಿಕೆ ಫಲಪ್ರದವಾಗದಿರುವ ಬಗ್ಗೆ ಸ್ಪಷ್ಟವಾಗಿರಬೇಕು. ವೈರಸ್ ಅನ್ನು ನಿಯಂತ್ರಿಸಲು ನಾವು ಹೊಸ ಮಾರ್ಗಗಳನ್ನು ಹುಡುಕಬೇಕಾಗಿದೆ' ಎಂದು ಹೇಳಿದ್ದಾರೆ

ಕೋವಿಡ್ -19 ನಿಯಂತ್ರಣಕ್ಕಾಗಿ ಈಗ ಪ್ರಪಂಚದಾದ್ಯಂತ 100 ಕ್ಕೂ ಹೆಚ್ಚು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನಲಾಗಿದೆ.

Trending News