ವಾರಿ (ನೈಜೀರಿಯಾ): ಹೊಸ ವರ್ಷದ ಮುನ್ನಾದಿನದಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಚರ್ಚ್ ನಿಂದ ಹಿಂದಿರುಗುತ್ತಿದ್ದ ಜನರ ಮೇಲೆ "ರಾತ್ರಿ 12.30 ರ ಹೊತ್ತಿಗೆ ಗನ್ಮೆನ್ ಗುಂಡು ಹಾರಿಸಿದರು". ಈ ಗುಂಡಿನ ದಹನದ ಸಂದರ್ಭದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ.
ಡಿ.31 ರ ತಡರಾತ್ರಿ ಚರ್ಚ್ನಲ್ಲಿ ಪ್ರಾರ್ಥನೆ ಮುಗಿಸಿ ಹಿಂದಿರುಗುತ್ತಿರುವಾಗ ರಾತ್ರಿ 12 ಗಂಟೆಗೆ ಗುಂಡಿನ ದಾಳಿ ಪ್ರಾರಂಭವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಹತ್ಯಾಕಾಂಡದ ಘಟನೆಯು ಪೋರ್ಟ್ ಹಾರ್ಕೋರ್ಟ್ನಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಓಮಕುದಲ್ಲಿ ನಡೆಯಿತು.
ಈ ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿವರ್ಸ್ ಸ್ಟೇಟ್ ಪೋಲಿಸ್ ಪಬ್ಲಿಕ್ ರಿಲೇಶನ್ಸ್ ಆಫೀಸರ್ ನನ್ನಿಡಿ ಓಮ್ನಿ ಈ ಸಮಯದಲ್ಲಿ ಸಾವುನೋವುಗಳನ್ನು ದೃಢೀಕರಿಸಲಾಗುವುದಿಲ್ಲ ಎಂದು ತಿಳಿಸಿದರು. ಪೋಲಿಸ್ ಕಮೀಷನರ್ ಅಹ್ಮದ್ ಜಕೀ ಅವರು ಗನ್ಮನ್ಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ ಎಂದು ಓಮ್ನಿ ತಿಳಿಸಿದರು.