Interesting Facts:ವಿಶ್ವಾದ್ಯಂತ ಈ ಹೆಸರು ಹೆಚ್ಚು ಪಾಪ್ಯುಲರ್, ಭಾರತದಲ್ಲಿ ಯಾವುದು?

Most Popular Names in the World: ಭಾರತೀಯ ಹೆಸರುಗಳಲ್ಲಿ 'ಶ್ರೀ' ಹೆಸರು ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ 'ಶ್ರೀ' ಹೆಸರಿನ ಸುಮಾರು 64,73,133 ಜನರಿದ್ದಾರೆ. ಇದಾದ ಬಳಿಕ 'ರಾಮ' ಹೆಸರು ಎರಡನೇ ಸ್ಥಾನದಲ್ಲಿದೆ. 57,43,057 ವ್ಯಕ್ತಿಗಳ ಹೆಸರು ರಾಮ ಆಗಿದೆ. ವಿಶ್ವಾದ್ಯಂತ 'ಶ್ರೀರಾಮ' 45ನೇ ಸ್ಥಾನದಲ್ಲಿದೆ. ಅಂದರೆ ಪ್ರತಿ 126ನೇ ವ್ಯಕ್ತಿಯ ಹೆಸರು ರಾಮ್ ಆಗಿದೆ. ಆಲ್ ವರ್ಲ್ಡ್ ಶ್ರೇಯಾಂಕ ಪಟ್ಟಿಯಲ್ಲಿ ಈ ಹೆಸರು 58ನೇ ಸ್ಥಾನದಲ್ಲಿದೆ.

Written by - Nitin Tabib | Last Updated : Jan 8, 2021, 03:22 PM IST
  • ವಿಶ್ವದಲ್ಲಿ ಯಾವ ಹೆಸರಿನ ವ್ಯಕ್ತಿಗಳು ಹೆಚ್ಚಾಗಿದ್ದಾರೆ.
  • ಈ ಪಟ್ಟಿಯ ಮೊದಲ ನಾಲ್ಕು ಸ್ಥಾನಗಳಲ್ಲಿ 3 ಚೀನಾ ಹೆಸರುಗಳಿವೆ.
  • ಭಾರತದ ಯಾವ ಹೆಸರು ಹೆಚ್ಚು ಕಾಮನ್ ತಿಳಿದುಕೊಳ್ಳಲು ಈ ವರದಿ ಓದಿ.
Interesting Facts:ವಿಶ್ವಾದ್ಯಂತ ಈ ಹೆಸರು ಹೆಚ್ಚು ಪಾಪ್ಯುಲರ್, ಭಾರತದಲ್ಲಿ ಯಾವುದು? title=
Most Popular Names in the World (Photo Courtesy:Reuters)

Most Popular Names in the World:ಸುಮಾರು 7.79 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ಜಗತ್ತಿನಲ್ಲಿ ಯಾವ ಹೆಸರಿನ ವ್ಯಕ್ತಿಗಳು ಅತ್ಯಧಿಕವಾಗಿದ್ದಾರೆ? ಉತ್ತರವನ್ನು ಉತ್ತರವನ್ನು ತಿಳಿದು ನೀವೂ ಆಶ್ಚರ್ಯ ವ್ಯಕ್ತಪಡಿಸುವಿರಿ. ಪಟ್ಟಿಯ ಮೊದಲ ನಾಲ್ಕು ಸ್ಥಾನಗಳಲ್ಲಿ ಮೂರು ಸ್ಥಾನಗಳು ಚೀನಾ ಹೆಸರುಗಳಾಗಿವೆ ಎಂಬುದು ಇಲ್ಲಿನ ರೋಚಕ ಸಂಗತಿ. 

ಮೋಸ್ಟ ಪಾಪ್ಯುಲರ್ ಹೆಸರುಗಳ ಲಿಸ್ಟ್ ನಲ್ಲಿ ಚೀನಾ ಪಾರುಪತ್ಯ
ವಿಶ್ವದಲ್ಲಿ 'ಶಿಯಾನ್ಶೆಂಗ್' ಹೆಸರಿನ ಅತ್ಯಧಿಕ ವ್ಯಕ್ತಿಗಳಿದ್ದಾರೆ. ಚೀನಾ ಭಾಷೆಯಲ್ಲಿ ಈ ಹೆಸರಿನ ಅರ್ಥ ಸರ್, ಪತಿ ಹಾಗೂ ಮಿಸ್ಟರ್ ಎಂದರ್ಥ. forebears.io ವೆಬ್ಸೈಟ್ ನಲ್ಲಿ ಪ್ರಕಟಗೊಂಡ ಮಾಹಿತಿಯ ಅನುಸಾರ ಪ್ರತಿ 67 ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಯ ಹೆಸರು ಶಿಯಾನ್ಶೆಂಗ್ ಆಗಿದೆ. ಇಡೀ ವಿಶ್ವಾದ್ಯಂತ ಒಟ್ಟು 108,118,954  ಸಿಯಾನ್ಶೆಂಗ್ ಗಳಿದ್ದಾರೆ.

ಎರಡನೇ ಸ್ಥಾನದಲ್ಲಿ ಮಾರಿಯಾ ಹೆಸರಿನ ವ್ಯಕ್ತಿಗಳಿದ್ದಾರೆ. ವಿಶ್ವಾದ್ಯಂತ ಮಾರಿಯಾ ಹೆಸರಿನ ಸುಮಾರು  61,147,219 ಮಹಿಳೆಯರಿದ್ದಾರೆ. ಮೂರನೇ ಸ್ಥಾನದಲ್ಲಿಯೂ ಕೂಡ ಚೀನಾ ಹೆಸರಿದೆ. ವಿಶ್ವದಲ್ಲಿ ಶಾವುಜಿಯೇ ಹೆಸರಿನ ಸುಮಾರು 51,857,868 ಮಹಿಳೆಯರಿದ್ದಾರೆ. ಇದರರ್ಥ ವಿಶ್ವದ ಪ್ರತಿ 141ನೇ ಮಹಿಳೆಯ ಹೆಸರು ಶಾವುಜಿಯೇ ಆಗಿದೆ.

ಇದನ್ನು ಓದಿ-ದೇವರನ್ನು ರೇಪಿಸ್ಟ್ ಎಂದು ಆರೋಪಿಸಿ, ಎರಡು ವರ್ಷ ಜೈಲಿಗೆ ತಳ್ಳಿದ RTE CHANNEL

ಐದನೇ ಸ್ಥಾನದಲ್ಲಿ ಮೊಹಮ್ಮದ್ ಹೆಸರಿದೆ
ಪಟ್ಟಿಯ ನಾಲ್ಕನೇ ಸ್ಥಾನದಲ್ಲಿ ನೂಷಿ ಎಂಬ ಚೀನಾ ಹೆಸರು ಹೆಚ್ಚು ಕಾಮನ್ ಆಗಿದ್ದರೆ, ಐದನೇ ಸ್ಥಾನದಲ್ಲಿ ಮೊಹಮ್ಮದ್, 6 ನೇ ಸ್ಥಾನದಲ್ ಜೋಸ್, 7 ನೇ ಸ್ಥಾನದಲ್ಲಿ ಮುಹಮ್ಮದ್, 8 ನೇ ಸ್ಥಾನದಲ್ಲಿ ಮೊಹಾಮದ್, 9 ನೇ ಸ್ಥಾನದಲ್ಲಿ ಮೊಹಾಮ್ಮದ್ ಹಾಗೂ 10ನೇ ಸ್ಥಾನದಲ್ಲಿ ವೇಯಿ ಇದೆ.

ಈ ಭಾರತೀಯ ಹೆಸರುಗಳು ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿವೆ
ಭಾರತೀಯ ಹೆಸರುಗಳಲ್ಲಿ 'ಶ್ರೀ' ಹೆಸರು ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ 'ಶ್ರೀ' ಹೆಸರಿನ ಸುಮಾರು 64,73,133 ಜನರಿದ್ದಾರೆ. ಇದಾದ ಬಳಿಕ 'ರಾಮ' ಹೆಸರು ಎರಡನೇ ಸ್ಥಾನದಲ್ಲಿದೆ. 57,43,057 ವ್ಯಕ್ತಿಗಳ ಹೆಸರು ರಾಮ ಆಗಿದೆ. ವಿಶ್ವಾದ್ಯಂತ 'ಶ್ರೀರಾಮ' 45ನೇ ಸ್ಥಾನದಲ್ಲಿದೆ. ಅಂದರೆ ಪ್ರತಿ 126ನೇ ವ್ಯಕ್ತಿಯ ಹೆಸರು ರಾಮ್ ಆಗಿದೆ. ಆಲ್ ವರ್ಲ್ಡ್ ಶ್ರೇಯಾಂಕ ಪಟ್ಟಿಯಲ್ಲಿ ಈ ಹೆಸರು 58ನೇ ಸ್ಥಾನದಲ್ಲಿದೆ.

ಇದನ್ನು ಓದಿ-Jack Ma Missing: China ಕೋಟ್ಯಾಧೀಶ Jack Ma ನಾಪತ್ತೆ, ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರಂತೆ

ಇದಾದ ಬಳಿಕ ಅನಿತಾ ಹೆಸರು ತುಂಬಾ ಪಾಪ್ಯುಲರ್ ಆಗಿದೆ. ಇದು ಪಟ್ಟಿಯಲ್ಲಿ 63ನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಪ್ರತಿ 1330 ಮಹಿಳೆಯರಲ್ಲಿ ಓರ್ವ ಮಹಿಳೆಯ ಹೆಸರು ಅನಿತಾ ಆಗಿದೆ. ಅನಿತಾ ಹೆಸರನ್ನಿಟ್ಟುಕೊಂಡಿರುವ ಒಟ್ಟು ಮಹಿಳೆಯರ ಸಂಖ್ಯೆ 54,79,091. ನಂತರ ರೀತಾ ಹೆಸರು ತುಂಬಾ ಕಾಮನ್ ಆಗಿದೆ. ಜಾಗತಿಕ ಪಟ್ಟಿಯಲ್ಲಿ ಈ ಹೆಸರು 75 ನೇ ಸ್ಥಾನದಲ್ಲಿದೆ.

ವಿಶ್ವದ ಟಾಪ್ 100 ಹೆಸರುಗಳ ಪಟ್ಟಿಯಲ್ಲಿ ಸುನಿತಾ ಹೆಸರೂ ಕೂಡ ಇದೆ. ಪಟ್ಟಿಯಲ್ಲಿ ಸುನಿತಾ ಹೆಸರು 85ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ ಸುನಿತಾ ಹೆಸರಿನ 41,10,579 ಜನರಿದ್ದಾರೆ.

ಇದನ್ನು ಓದಿ-ಎಚ್ಚರಿಕೆ! ವಿಶ್ವದ ಅತ್ಯಂತ ಅಪಶಕುನಿ Mobile Number ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News