ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಮೂರನೇ ಅಲೆಯು ಹೆಚ್ಚಿನ ರಾಷ್ಟ್ರಗಳಲ್ಲಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿಯೇ ಈಗ ಹೊಸದಾಗಿ ಹೊರಮ್ಮಿರುವ ಮಂಗನ ಕಾಯಿಲೆ 23 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದುವರೆಗೆ ಒಟ್ಟು 257 ಪ್ರಯೋಗಾಲಯದಲ್ಲಿ ದೃಢಪಡಿಸಿದ ಪ್ರಕರಣಗಳು ಮತ್ತು ಸುಮಾರು 120 ಶಂಕಿತ ಪ್ರಕರಣಗಳು ಇವೆ, ಇದು ಈ ರೋಗವು ಇನ್ನಷ್ಟು ಹರಡಬಹುದು ಎಂಬ ಭೀತಿಯನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ: ಕಲರ್ ಫುಲ್ 'ಡ್ಯಾನ್ಸಿಂಗ್ ಚಾಂಪಿಯನ್' ಫಿನಾಲೆಗೆ' ಅದ್ಧೂರಿ ತೆರೆ
ಸದ್ಯಕ್ಕೆ, ಪ್ರಪಂಚದಾದ್ಯಂತ ಮಂಗನ ಕಾಯಿಲೆ ಕುರಿತು ಸಂಶೋಧನೆ ನಡೆಸಲಾಗುತ್ತಿದೆ, ಆರೋಗ್ಯ ತಜ್ಞರು ಈ ರೋಗ ಎಷ್ಟು ತೀವ್ರವಾಗಿರುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ವೈರಸ್ ಮಾರಣಾಂತಿಕವಾಗಬಹುದು ಆದರೆ ಸಾಮಾನ್ಯವಾಗಿ ಜಗತ್ತಿಗೆ ಮಧ್ಯಮ ಗಾತ್ರದ ಭೀತಿಯನ್ನು ಹುಟ್ಟು ಹಾಕಿದೆ ಎನ್ನಲಾಗಿದೆ.ಈ ವೈರಸ್ ತನ್ನನ್ನು ಮಾನವ ರೋಗಕಾರಕವಾಗಿ ಸ್ಥಾಪಿಸುವ ಅವಕಾಶವನ್ನು ದುರ್ಬಳಕೆ ಮಾಡಿಕೊಂಡರೆ ಮತ್ತು ಚಿಕ್ಕ ಮಕ್ಕಳು ಮತ್ತು ತೀವ್ರವಾದ ಕಾಯಿಲೆಗಳನ್ನು ಹೊಂದಿರುವ ಗುಂಪುಗಳಿಗೆ ಹರಡಿದರೆ ಸಾರ್ವಜನಿಕ ಆರೋಗ್ಯದ ಅಪಾಯವು ಹೆಚ್ಚಾಗಬಹುದು" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ'
ಮಂಗನ ಕಾಯಿಲೆ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದರೆ ಇದು ನಿಕಟ ಸಂಪರ್ಕದಿಂದ ಹರಡುತ್ತದೆ ಎನ್ನಲಾಗಿದೆ, ಆದ್ದರಿಂದ ಇದು ಸ್ವಯಂ-ಪ್ರತ್ಯೇಕತೆ ಮತ್ತು ನೈರ್ಮಲ್ಯದಂತಹ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.ಇಲ್ಲಿಯವರೆಗೆ ವರದಿಯಾದ ಹೆಚ್ಚಿನ ಪ್ರಕರಣಗಳು ಯುಕೆ, ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಈ ಹಿಂದೆ, ಮಂಗನ ಕಾಯಿಲೆ ಅಸುರಕ್ಷಿತ ಲೈಂಗಿಕತೆಯ ಮೂಲಕ ಹರಡಬಹುದು ಎಂದು ವರದಿಯಾಗಿತ್ತು ಮತ್ತು ಈಗ ಹೆಚ್ಚಿನ ಪ್ರಕರಣಗಳು ಟ್ರಾನ್ಸ್ ಜೆಂಡರ್ ಸಮುದಾಯದಿಂದ ವರದಿಯಾಗುತ್ತಿವೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.