ನವದೆಹಲಿ: ಪ್ರಸಿದ್ಧ ಹಾಲಿವುಡ್ ಸ್ಟಾರ್ ಮಾರ್ಟಿನ್ ಶೀನ್ ಅವರು ಅಮೇರಿಕಾದಲ್ಲಿ ಇತ್ತೀಚೆಗೆ ನಡೆದ ಹವಾಮಾನ ಬದಲಾವಣೆಯ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಭಾಷಣದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಕವಿತೆಯನ್ನು ವಾಚಿಸಿದ್ದಾರೆ.
ವಾಷಿಂಗ್ಟನ್ನಲ್ಲಿ ನಡೆದ ಫೈರ್ ಡ್ರಿಲ್ ಶುಕ್ರವಾರ ಪ್ರತಿಭಟನಾ ಕಾರ್ಯಕ್ರಮದ ಸಂದರ್ಭದಲ್ಲಿ, ಶೀನ್, ತಮ್ಮ ಪ್ರಖರ ಭಾಷಣದಲ್ಲಿ, ಟ್ಯಾಗೋರ್ರ ಕವಿತೆ ‘ವೇರ್ ದಿ ಮೈಂಡ್ ಈಸ್ ವಿಥೌಟ್ ಫಿಯರ್’ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಈಗ ಅವರ ಭಾಷಣದ ವಿಡಿಯೋ ವೈರಲ್ ಆಗುತ್ತಿದೆ.
Martin Sheen recites Rabindranath Tagore’s ‘Where the mind is without fear.’
pic.twitter.com/7JC6VfmFNK— Shivam Vij (@DilliDurAst) January 11, 2020
ನಟ ಜೇನ್ ಫೋಂಡಾ ಆಯೋಜಿಸಿರುವ ಸಾಪ್ತಾಹಿಕ ಹವಾಮಾನ ಪ್ರತಿಭಟನಾ ಕಾರ್ಯಕ್ರಮವು ಖ್ಯಾತ ಹಾಲಿವುಡ್ ನಟ ಉಪಸ್ಥಿತಿಗೆ ಸಾಕ್ಷಿಯಾಯಿತು. ಶೀನ್ ಮತ್ತು ಗೋಲ್ಡನ್ ಗ್ಲೋಬ್ ವಿಜೇತ ನಟ ಜೊವಾಕ್ವಿನ್ ಫೀನಿಕ್ಸ್ ಹವಾಮಾನ ಬದಲಾವಣೆಯನ್ನು ಎದುರಿಸಲು ಸರ್ಕಾರ ಮತ್ತು ಕೈಗಾರಿಕೆಗಳ ನಿಷ್ಕ್ರಿಯತೆಯ ವಿರುದ್ಧ ಧ್ವನಿ ಎತ್ತಲು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
'Where the mind is without fear,
And the head is held high.'Martin Sheen reciting Tagore is something to behold!pic.twitter.com/TPgZdOep1r
— Amit Varma (@amitvarma) January 11, 2020
“ಸ್ಪಷ್ಟವಾಗಿ, ಜಗತ್ತನ್ನು ಮಹಿಳೆಯರಿಂದ ರಕ್ಷಿಸಲಾಗುತ್ತದೆ. ದೇವರಿಗೆ ಧನ್ಯವಾದಗಳು, ಪುರುಷರೇ, ಅವರು ನಮ್ಮನ್ನು ಮೀರಿಸಿದ್ದಾರೆ,' ಎಂದು ” ಮಾರ್ಟಿನ್ ಶೀನ್ ತಮ್ಮ ಭಾಷಣವನ್ನು ಪ್ರಾರಂಭಿಸಿ ನಂತರ ರವೀಂದ್ರನಾಥ ಟ್ಯಾಗೋರ್ ಅವರ ಕವಿತೆಯನ್ನು ವಾಚಿಸಿದರು.