Viral Video: ಪೋಲಿಸ್ ಸ್ಟೇಷನ್ ಗೆ ಬಂದ ಹಾವನ್ನು ಬರಿಗೈಲಿ ಅರೆಸ್ಟ್ ಮಾಡಿದ ಭೂಪ!

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

Last Updated : Dec 12, 2018, 02:06 PM IST
Viral Video: ಪೋಲಿಸ್ ಸ್ಟೇಷನ್ ಗೆ ಬಂದ ಹಾವನ್ನು ಬರಿಗೈಲಿ ಅರೆಸ್ಟ್ ಮಾಡಿದ ಭೂಪ! title=
Video Grab

ಥೈಲ್ಯಾಂಡ್: ಅದೇನು ಕೆಲಸ ಇತ್ತೋ ಏನೋ ಗೊತ್ತಿಲ್ಲ ರೀ... ಕಾಡು, ಗಿಡಗಂಟಿ, ಮೈದಾನದಲ್ಲಿರಬೇಕಾದ ಹಾವು ಇಲ್ಲಿನ ಪೊಲೀಸ್ ಸ್ಟೇಷನ್ ಒಳಗೆ ಸರಸರನೆ ನುಗ್ಗಿ ವ್ಯಕ್ತಿಯೊಬ್ಬನ ಮೇಲೆ ಅಟ್ಯಾಕ್ ಮಾಡಿದ್ದು, ಅದನ್ನು ಆತ ಬರಿಗೈಲಿ ಹಿಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

ಇಲ್ಲಿನ ಪೊಲೀಸ್ ಸ್ಟೇಶನ್ ಒಳಗೆ ಸರಸರನೆ ನುಗ್ಗಿದ ಹಾವೊಂದು ಅಲ್ಲೇ ಕುರ್ಚಿ ಮೇಲೆ ಕುಳಿತಿದ್ದ ವ್ಯಕ್ತಿಯ ಕಾಲಿಗೆ ಅಟ್ಯಾಕ್ ಮಾಡಿದೆ. ಆ ಕ್ಷಣಕ್ಕೆ ಅಲ್ಲಿದ್ದ ವ್ಯಕ್ತಿ ಭಯಭೀತನಾದರೂ, ಬಳಿಕ ಆ ಹಾವನ್ನು ಕಾಲಿನಿಂದಲೇ ನಿಯಂತ್ರಿಸಿ, ಬರಿಗೈಲಿ ಹಿಡಿದು ಹೊರಗೆ ಬಿಟ್ಟಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. 

Trending News