ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯು ಭಾರತದ ಆಂತರಿಕ ವಿಷಯಕ್ಕೆ ಸಂಬಂಧಿಸಿದೆ ಎಂದು ಬಾಂಗ್ಲಾದೇಶ ಹೇಳಿದೆ.
ಈಗ ಬುಧುವಾರದಂದು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿರುವ ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ಭಾರತ ಸರ್ಕಾರವು 370 ನೇ ವಿಧಿಯನ್ನು ರದ್ದುಪಡಿಸುವುದು ಭಾರತದ ಆಂತರಿಕ ಸಮಸ್ಯೆಯಾಗಿದೆ ಎಂದು ಬಾಂಗ್ಲಾದೇಶ ಸಮರ್ಥಿಸಿಕೊಂಡಿದೆ.ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಅಭಿವೃದ್ಧಿಯು ಎಲ್ಲ ದೇಶಗಳಿಗೂ ಆದ್ಯತೆಯಾಗಿರಬೇಕು ಎನ್ನುವ ವಿಚಾರವನ್ನು ಬಾಂಗ್ಲಾದೇಶ ಯಾವಾಗಲು ಪ್ರತಿಪಾದಿಸುತ್ತಾ ಬಂದಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕಿದ್ದ ಅರೆ ಸ್ವಾಯತ್ತತೆ ಮತ್ತು ರಾಜ್ಯತ್ವವನ್ನು ತೆಗೆದುಹಾಕಿ, ಲಡಾಕ್ ಮತ್ತು ಜಮ್ಮು ಮತ್ತು ಕಾಶ್ಮೀರಗಳಾಗಿ ಎರಡು ಫೆಡರಲ್ ಪ್ರಾಂತ್ಯಗಳನ್ನು ರಚಿಸಿತು. ಆ ಮೂಲಕ ಈ ಹಿಂದೆ ಕಾಶ್ಮಿರಕ್ಕಿದ್ದ ಸ್ವತಂತ್ರ ಅಧಿಕಾರವನ್ನು ಹಿಂತೆಗೆದುಕೊಂಡು, ಇತರ ರಾಜ್ಯಗಳ ನಿಯಮಗಳು ಕಾಶ್ಮೀರಕ್ಕೆ ಅನ್ವಯವಾಗುವಂತೆ ಮಾಡಿತು.
ಈ ಹಿಂದೆ 370ನೇ ವಿಧಿ ರಾಜ್ಯದ ಹೊರಗಿನ ಭಾರತೀಯರಿಗೆ ಶಾಶ್ವತವಾಗಿ ನೆಲೆಸುವುದು, ಭೂಮಿ ಖರೀದಿಸುವುದು, ಸ್ಥಳೀಯ ಸರ್ಕಾರಿ ಉದ್ಯೋಗಗಳನ್ನು ಹೊಂದಿರುವುದು ಮತ್ತು ಅಲ್ಲಿ ಶೈಕ್ಷಣಿಕ ವಿದ್ಯಾರ್ಥಿವೇತನವನ್ನು ಪಡೆಯುವುದನ್ನು ನಿಷೇಧಿಸಿದೆ. ಭಾರತ ಸರ್ಕಾರ ಈ ಕ್ರಮವನ್ನು ತೆಗೆದುಕೊಳ್ಳುವ ಮೊದಲು ಸಾವಿರಾರು ಭಾರತೀಯ ಸೈನಿಕರನ್ನು ಮತ್ತು ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಲಾಗಿತ್ತು. ಅಲ್ಲದೆ ಲ್ಯಾಂಡ್‌ಲೈನ್‌ಗಳು, ಸೆಲ್‌ಫೋನ್ ವ್ಯಾಪ್ತಿ, ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮತ್ತು ಕೇಬಲ್ ಟಿವಿ ಸೇವೆಗಳನ್ನು ಕಡಿತಗೊಳಿಸಲಾಯಿತು.