ನವದೆಹಲಿ: ಉತ್ತರದ ಇರಾಕಿ ಗ್ರಾಮವಾದ ಸಮರ್ರಾದಲ್ಲಿನ ದಯಾಶ್ ವಿರೋಧಿ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್) ಹೋರಾಟಗಾರರ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಬಾಂಬ್ ಸ್ಪೋಟದಿಂದ ಹದಿನಾರು ಜನರು ಮೃತಪಟ್ಟಿದ್ದಾರೆ.
ಸುದ್ದಿ ಮೂಲಗಳ ಪ್ರಕಾರ, ಅಲ್-ಹಾಶ್ದ್ ಅಲ್-ಶಾಬಿ ಪ್ಯಾರಾ ಮಿಲಿಟರಿಯ ಘಟಕಗಳ ಐವರ ಅಂತ್ಯಕ್ರಿಯೆ ಮೆರವಣಿಗೆಯನ್ನು ನಡೆಸಲಾಗುತ್ತಿತ್ತು. ಈ ಸೈನಿಕರು ಇರಾಕಿನ ಹಲವು ಪಟ್ಟಣಗಳಲ್ಲಿ ಉಗ್ರಗಾಮಿ ಭಯೋತ್ಪಾದಕರನ್ನು ನಾಶಮಾಡಲು 2017 ರಲ್ಲಿ ಅಲ್ಲಿನ ಸೈನ್ಯದೊಂದಿಗೆ ಹೋರಾಡಿದರು.
ಭಯೋತ್ಪಾದಕ ಗುಂಪಿನ ಮೇಲೆ ಇರಾಕಿ ಸರ್ಕಾರವು ವಿಜಯವನ್ನು ಘೋಷಿಸಿದರೂ, ಸಹಿತ ಕದನ ಇನ್ನೂ ಹಾಗೆ ಮುಂದುವರೆದಿದೆ.