ಅಮೇರಿಕಾದ 'ಬೇಹು' ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಇರಾನ್; ಹೇಳಿಕೆ ನಿರಾಕರಿಸಿದ ಯುಎಸ್

ಪರಮಾಣು ಒಪ್ಪಂದದ ಕುಸಿತದ ಬಗ್ಗೆ ಟೆಹ್ರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ನಡುವೆಯೇ ಇರಾನ್ ಸೇನೆ ಅಮೆರಿಕಾದ ಡ್ರೋನ್ ಹೊಡೆದುರುಳಿಸಿದೆ.

Last Updated : Jun 20, 2019, 12:24 PM IST
ಅಮೇರಿಕಾದ 'ಬೇಹು' ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಇರಾನ್; ಹೇಳಿಕೆ ನಿರಾಕರಿಸಿದ ಯುಎಸ್ title=
Photo: U.S. Air Force Global Hawk Unmanned Aerial Vehicle (defense.gov)

ಟೆಹ್ರಾನ್: ಅಮೇರಿಕಾದ 'ಬೇಹು' ಡ್ರೋನ್ ಇರಾನಿನ ವಾಯುಪ್ರದೇಶವನ್ನು ಉಲ್ಲಂಘಿಸಿದ್ದು ಆ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನಿನ ರೆವಲ್ಯೂಶನರಿ ಗಾರ್ಡ್‌ ಗುರುವಾರ ತಿಳಿಸಿದೆ. ವರದಿಗಳ ಪ್ರಕಾರ, ಯುಎಸ್ ನಿರ್ಮಿತ ಗ್ಲೋಬಲ್ ಹಾಕ್ ಕಣ್ಗಾವಲು ಡ್ರೋನ್ ಅನ್ನು ಇರಾನ್ ವಾಯುಪಡೆಯು ದೇಶದ ದಕ್ಷಿಣ ಕರಾವಳಿ ಪ್ರಾಂತ್ಯದ ಹಾರ್ಮೋಜ್ಗಾನ್ ನಲ್ಲಿ ಪ್ರವೇಶಿಸಿದ ಬಳಿಕ ಇರಾನ್ ಸೇನೆ ಅದನ್ನು ಹೊಡೆದುರುಳಿಸಿದೆ. ಇರಾನ್ ಡ್ರೋನ್ ಅನ್ನು 'ಆರ್‌ಕ್ಯೂ-4 ಗ್ಲೋಬಲ್ ಹಾಕ್' ಎಂದು ಗುರುತಿಸಿದೆ.

ಆದರೆ, ಅಮೆರಿಕ ಈ ವರದಿಗಳನ್ನು ತಿರಸ್ಕರಿಸಿದೆ. "ಇರಾನಿನ ವಾಯುಪ್ರದೇಶದಲ್ಲಿ ಇಂದು ಯಾವುದೇ ಯುಎಸ್ ವಿಮಾನಗಳು ಕಾರ್ಯನಿರ್ವಹಿಸುತ್ತಿಲ್ಲ" ಎಂದು ಯುಎಸ್ ಮಿಲಿಟರಿಯ ಸೆಂಟ್ರಲ್ ಕಮಾಂಡ್ ವಕ್ತಾರ ನೇವಿ ಕ್ಯಾಪ್ಟನ್ ಬಿಲ್ ಅರ್ಬನ್ ಬುಧವಾರ ಮಧ್ಯರಾತ್ರಿ ಹೇಳಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಾರ ಇರಾನ್ ಅಮೆರಿಕನ್ ಡ್ರೋನ್ ಅನ್ನು ಹೊಡೆದುರುಳಿಸಲು ಪ್ರಯತ್ನಿಸಿತ್ತು ಎಂದು ಅಮೇರಿಕಾ ಹೇಳಿತ್ತು. ಯೆಮನ್‌ನಲ್ಲಿ ಇರಾನ್-ಒಗ್ಗೂಡಿಸಿದ ಹೌತಿ ಪಡೆಗಳಿಂದ ಯಶಸ್ವಿಯಾಗಿ ಗುಂಡು ಹಾರಿಸಲಾಗಿದೆ ಎಂದು ಯುಎಸ್ ಇತ್ತೀಚೆಗೆ ಹೇಳಿಕೊಂಡಿತ್ತು.

ಆರ್‌ಕ್ಯೂ -4 ಗ್ಲೋಬಲ್ ಹಾಕ್ ಮಾನವರಹಿತ ವಿಮಾನ ವ್ಯವಸ್ಥೆ (ಯುಎಎಸ್) 30 ಗಂಟೆಗಳಿಗಿಂತ ಹೆಚ್ಚು ಕಾಲ ಹೆಚ್ಚಿನ ಎತ್ತರದಲ್ಲಿ ಹಾರಬಲ್ಲದು, ನೈಜ-ಸಮಯದ ಸಮೀಪ, ಎಲ್ಲಾ ರೀತಿಯ ಹವಾಮಾನದಲ್ಲಿ ದೊಡ್ಡ ಪ್ರದೇಶಗಳ ಹೆಚ್ಚಿನ ರೆಸಲ್ಯೂಶನ್ ಚಿತ್ರಣವನ್ನು ಸಂಗ್ರಹಿಸುತ್ತದೆ ಎಂದು ತಯಾರಕ ನಾರ್ತ್ರೋಪ್ ಗ್ರಮ್ಮನ್ ತಮ್ಮ ವೆಬ್‌ಸೈಟ್ನಲ್ಲಿ ತಿಳಿಸಿದ್ದಾರೆ.

ಪರಮಾಣು ಒಪ್ಪಂದದ ಕುಸಿತದ ಬಗ್ಗೆ ಟೆಹ್ರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಇರಾನ್ ಸೇನೆ ಅಮೆರಿಕಾದ ಡ್ರೋನ್ ಹೊಡೆದುರುಳಿಸಿದೆ. ಕಳೆದ ವರ್ಷದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ ಮತ್ತು ಪ್ರಮುಖ ಶಕ್ತಿಗಳ ನಡುವಿನ ಪರಮಾಣು ಒಪ್ಪಂದದಿಂದ ನಿರ್ಗಮಿಸಿ ದೇಶದ ಮೇಲೆ ನಿರ್ಬಂಧಗಳನ್ನು ಪುನಃ ಜಾರಿಗೊಳಿಸಿದಾಗ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಯಿತು.

ಕಳೆದ ವಾರ ಒಮಾನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ನಾಲ್ಕು ಟ್ಯಾಂಕರ್‌ಗಳ ಮೇಲೆ ಮೇ 12 ರಂದು ನಡೆದ ದಾಳಿಯ ನಂತರ ಇರಾನ್ ಮತ್ತು ಯುಎಸ್ ನಡುವಿನ ಘರ್ಷಣೆಯ ಬಗ್ಗೆ ಕಳವಳ ವ್ಯಕ್ತವಾಯಿತು.  ಈ ದಾಳಿಗೆ ಇರಾನ್​ ಕಾರಣ ಎಂದು ಅಮೆರಿಕ ದೂರಿತ್ತು. ಆದರೆ ಇರಾನ್ ಅದನ್ನು ನಿರಾಕರಿಸಿತ್ತು. ಎರಡೂ ದಾಳಿಗಳು ನಡೆದ ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಸರಬರಾಜಿಗೆ ಪ್ರಮುಖ ಮಾರ್ಗವಾಗಿದೆ.
 

Trending News