Bizarre News: ವಿಷಕಾರಿ ಹಾವಿನ ರಕ್ತ ಕುಡಿಯುತ್ತಾರಂತೆ ಈ ದೇಶದ ಜನ, ಸೌಂದರ್ಯ-ಆರೋಗ್ಯಕ್ಕೆ ಸಂಬಂಧಿಸಿದೆ ಈ ವಿಷಯ

ಸಾಮಾನ್ಯವಾಗಿ ಜನರು ಹಾವುಗಳನ್ನು ನೋಡಿ ಹೆದರುತ್ತಾರೆ, ಆದರೆ ಜಗತ್ತಿನ ದೇಶವೊಂದರಲ್ಲಿನ ಜನರು ಹಾವಿನ ರಕ್ತವನ್ನು ಕುಡಿಯುತ್ತಾರೆ. ಇಲ್ಲಿ, ಹಾವಿನ ರಕ್ತವನ್ನು ಕುಡಿಯಲು ಬೆಳಿಗ್ಗೆಯಿಂದ ಸಂಜೆಯವರೆಗೆ ಅಂಗಡಿಗಳ ಮುಂದೆ ಜನಸಂದಣಿ ನೆರೆದಿರುತ್ತದೆ. ನಂಬಲು ಕಷ್ಟವಾದರೂ ಕೂಡ ಇದು ಸತ್ಯ.

Last Updated : Dec 4, 2020, 07:58 PM IST
  • ಹಾವುಗಳ ರಕ್ತ ಸೇವಿಸುತ್ತಾರಂತೆ ಇಂಡೋನೇಷ್ಯಾ ಜನರು.
  • ಪುರುಷರು ಆರೋಗ್ಯದಿಂದಿರಲು ಹಾಗೂ ಮಹಿಳೆಯರು ಸುಂದರ ತ್ವಚೆಗಾಗಿ ಹಾವಿನ ರಕ್ತ ಕುಡಿಯುತ್ತಾರಂತೆ.
  • ಹಾವಿನ ರಕ್ತ ಕುಡಿಯಲು ಅಂಗಡಿಗಳ ಮುಂದೆ ಭಾರಿ ಜನಸಮೂಹ ನೆರೆದಿರುತ್ತದೆ.

Trending Photos

Bizarre News: ವಿಷಕಾರಿ ಹಾವಿನ ರಕ್ತ ಕುಡಿಯುತ್ತಾರಂತೆ ಈ ದೇಶದ ಜನ, ಸೌಂದರ್ಯ-ಆರೋಗ್ಯಕ್ಕೆ ಸಂಬಂಧಿಸಿದೆ ಈ ವಿಷಯ title=

ನವದೆಹಲಿ: ತನ್ನ ಅಸ್ತಿತ್ವದಿಂದಲೇ ಜನರನ್ನು ಹೆದರಿಸುವ ಜೀವಿ ಎಂದರೆ ಅದು ಹಾವು. ಹಾವನ್ನು ಭೂಮಿಯ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿ ಎಂದು ಪರಿಗಣಿಸಲಾಗಿದೆ. ಈ ವಿಷಕಾರಿ ಪ್ರಾಣಿಯನ್ನು ನೋಡಿದ ಅನೇಕ ಜನರು ತಮ್ಮ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಾರೆ. ಆದರೆ ಜಗತ್ತಿನಲ್ಲಿ ದೇಶವೊಂದಿದ್ದು ಅಲ್ಲಿನ ಯುವತಿಯರು ಈ ವಿಷಕಾರಿ ಜೀವಿಯ ರಕ್ತವನ್ನು ಬಹಳ ಇಷ್ಟದಿಂದ ಕುಡಿಯುತ್ತಾರೆ. ಹಾಗಾದರೆ ಬನ್ನಿ ಆ ದೇಶದ ಬಗ್ಗೆ ಮತ್ತು ಅಲ್ಲಿನ ಜನರು ಹಾವಿನ ರಕ್ತವನ್ನು ಏಕೆ ಕುಡಿಯುತ್ತಾರೆ ಎಂಬುದನ್ನು ತಿಳಿಯೋಣ.

ಇದನ್ನು ಓದಿ- ಈ ದೇಶದಲ್ಲಿ ಸ್ಥೂಲಕಾಯದ ಯುವತಿಯರಿಗೆ ಫುಲ್ ಡಿಮಾಂಡ್, ನೀಳಕಾಯದ ವಧು ಅಶುಭ ಅಂತೆ

ಜಕಾರ್ತಾ ಜನರು ಹಾವಿನ ರಕ್ತ ಕುಡಿಯುತ್ತಾರಂತೆ
ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ವಿಷಪೂರಿತ ಹಾವುಗಳ ರಕ್ತವನ್ನು ಕುಡಿಯಲಾಗುತ್ತದೆ. ಇಲ್ಲಿ ಹಾವಿನ ರಕ್ತವನ್ನು ಮಾರಾಟ ಮಾಡುವ ಅಂಗಡಿಗಳು ಎಲ್ಲೆಡೆ ಕಂಡುಬರುತ್ತವೆ ಮತ್ತು ಇಲ್ಲಿನ ಜನರು ಹಾವಿನ ರಕ್ತವನ್ನು ಬಹಳ ಇಷ್ಟಪಟ್ಟು ಕುಡಿಯುತ್ತಾರೆ.

ಇದನ್ನು ಓದಿ-OMG! ನಾಲಿಗೆಯಿಂದ ತನ್ನ ಹಣೆಯನ್ನೇ ಮುಟ್ಟಿಸೋ ವ್ಯಕ್ತಿ ಬಗ್ಗೆ ಗೊತ್ತಾ?

ಮಾರುಕಟ್ಟೆಯಲ್ಲಿ ಹಾವಿನ ರಕ್ತಕ್ಕೆ ಭಾರಿ ಬೇಡಿಕೆ ಇದೆ
ಜಕಾರ್ತ ಮಾರುಕಟ್ಟೆಯಲ್ಲಿ ಹಾವಿನ ರಕ್ತಕ್ಕೆ ಭಾರಿ ಬೇಡಿಕೆ ಇದೆ. ಈ ಕಾರಣದಿಂದಾಗಿ, ಪ್ರತಿದಿನ ಇಲ್ಲಿ ಸಾವಿರಾರು ಹಾವುಗಳನ್ನು ಕತ್ತರಿಸಲಾಗುತ್ತದೆ. ರಕ್ತ ಮಾರಾಟಗಾರರು ಹಾವಿನ ರಕ್ತವನ್ನು ಸೇವಿಸಿದ ನಂತರ 3-4 ಗಂಟೆಗಳ ಕಾಲ ಚಹಾ ಅಥವಾ ಕಾಫಿ ಕುಡಿಯದಿರಲು ಜನರಿಗೆ ಸಲಹೆ ನೀಡುತ್ತಾರೆ. ಇದರಿಂದ ರಕ್ತವು ಶರೀರಕ್ಕೆ ಹೋಗಿ ತನ್ನ ಕೆಲಸವನ್ನು ಮಾಡುತ್ತದೆ ಎನ್ನಲಾಗುತ್ತದೆ. ಇಲ್ಲಿನ  ಈ ಅಂಗಡಿಗಳಲ್ಲಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಭಾರಿ ಜನದಟ್ಟನೆ ಇರುತ್ತದೆ.

ಇದನ್ನು ಓದಿ- Viral: ಕುಡಿದ ಅಮಲಿನಲ್ಲಿ ಜೀವಂತ ಹಾವು ನುಂಗಿ ವ್ಯಕ್ತಿ ಸಾವು!

ಹಾವಿನ ರಕ್ತ ಕುಡಿಯಲು ಕಾರಣ ಏನು?
ಒಂದೆಡೆ ಇಲ್ಲಿನ ಪುರುಷರು ಆರೋಗ್ಯದಿಂದಿರಲು ಹಾವುಗಳ ರಕ್ತವನ್ನು ಸೇವಿಸುತ್ತಿದ್ದರೆ, ಇನ್ನೊಂದೆಡೆ ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಹಾವಿನ ರಕ್ತವನ್ನು ಕುಡಿಯುತ್ತಾರೆ. ಹಾವಿನ ರಕ್ತವನ್ನು ಕುಡಿಯುವುದರಿಂದ ಚರ್ಮವು ಹೊಳೆಯುತ್ತದೆ  ಮತ್ತು ಆರೋಗ್ಯಕರವಾಗಿರುತ್ತದೆ ಎಂಬುದು ಅವರ ನಂಬಿಕೆ.

ಇದನ್ನು ಓದಿ- Viral Video: Dairy Plantನಲ್ಲಿ ಹಾಲಿನ ಟಬ್ ನಲ್ಲಿ ಸ್ನಾನ ಮಾಡಿದ ಭೂಪ, ಮುಂದೇನಾಯ್ತು ನೀವೇ ನೋಡಿ

ಇಂಡೋನೇಷ್ಯಾದಲ್ಲಿ ಹಾವುಗಳ ರಕ್ತವನ್ನು ಕುಡಿಯುವ ವಿಚಿತ್ರ (Bizarre) ಸಂಪ್ರದಾಯ ಪ್ರಾಚೀನ ಕಾಲದಿಂದ ರೂಢಿಯಲ್ಲಿದೆ. ಹಾವುಗಳನ್ನು ಸಹ ಇಲ್ಲಿ ತಿನ್ನಲಾಗುತ್ತದೆ. ಇಲ್ಲಿನ ಜನರು ಹಾವುಗಳನ್ನು ನಿಂಬೆ ಹುಲ್ಲಿನ ಜೊತೆ ಕುದಿಸಿ ಅಥವಾ ಹುರಿಯುವ ಮೂಲಕ ತಿನ್ನುತ್ತಾರೆ. ಊಟದ ವೇಳೆ  ಹಾವಿನ ರಕ್ತವನ್ನು ಅಕ್ಕಿ ವೈನ್ ನೊಂದಿಗೆ ಬೆರೆಸಿ ಬಡಿಸಲಾಗುತ್ತದೆ.

Trending News