ನವದೆಹಲಿ: ಎಂಇಎ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ನೇತೃತ್ವದ ಭಾರತೀಯ ನಿಯೋಗವು ಮಾನವೀಯ ನೆರವು ವಿತರಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಅಫ್ಘಾನಿಸ್ತಾನದ ರಾಜಧಾನಿಗೆ ಭೇಟಿ ನೀಡಿದೆ.
ಇದೆ ವೇಳೆ ನಿಯೋಗವು ತಾಲಿಬಾನ್ ನಾಯಕರನ್ನು ಭೇಟಿ ಮಾಡುವುದರ ಜೊತೆಗೆ ಕಾಬೂಲ್‌ನಲ್ಲಿರುವ ಭಾರತದ ನೆರವಿನಿಂದ ಸ್ಥಾಪಿಸಲಾಗಿರುವ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿತು.ಭಾರತದ ನಿಯೋಗವು ತನ್ನ ಭೇಟಿ ಸಂದರ್ಭದಲ್ಲಿ ಸಮುದಾಯ ಕಲ್ಯಾಣದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ನಾಯಕರನ್ನು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಸಹ ಭೇಟಿ ಮಾಡಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.ಇನ್ನು ಮುಂದುವರೆದು 'ಭಾರತವು ಆಫ್ಘನ್ ಜನರೊಂದಿಗೆ ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳನ್ನು ಹೊಂದಿದೆ ಮತ್ತು ಈ ದೀರ್ಘಕಾಲದ ಸಂಪರ್ಕಗಳು ನಮ್ಮ ವಿಧಾನವನ್ನು ಮಾರ್ಗದರ್ಶನ ಮಾಡುವುದನ್ನು ಮುಂದುವರಿಸುತ್ತವೆ' ಎಂದು ಹೇಳಿದೆ.
ಇನ್ನೊಂದೆಡೆಗೆ ತಾಲಿಬಾನ್ ವಕ್ತಾರರು ಭಾರತೀಯ ತಂಡವು ಇಸ್ಲಾಮಿಕ್ ಗುಂಪಿನ ನಾಯಕರನ್ನು ಭೇಟಿ ಮಾಡಿರುವ ಮತ್ತು ದ್ವಿಪಕ್ಷೀಯ ವ್ಯಾಪಾರ ಮತ್ತು ಮಾನವೀಯ ನೆರವು ಕುರಿತು ಚರ್ಚಿಸಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಛತ್ರಪತಿ ಶಿವಾಜಿ ಆಗ್ತಾರಾ ರಾಕಿಂಗ್ ಸ್ಟಾರ್ ಯಶ್! ವೈರಲ್ ಆಗ್ತಿರುವ ಪೋಸ್ಟರ್ ಅಸಲಿಯತ್ತೇನು?
ಭಾರತೀಯ ನಿಯೋಗವನ್ನು ಭೇಟಿ ಮಾಡಿದ ನಂತರ ಟ್ವೀಟ್ ಮಾಡಿರುವ ತಾಲಿಬಾನ್ ವಕ್ತಾರ ಅಬ್ದುಲ್ ಕಹರ್ ಬಾಲ್ಕಿ 'ಇಂದು, ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಮೌಲ್ವಿ ಅಮೀರ್ ಖಾನ್ ಮೊಟ್ಟಕಿ ಅವರು ಭಾರತದ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ಮತ್ತು ಅವರ ಜೊತೆಗಿರುವ ನಿಯೋಗವನ್ನು ಭೇಟಿ ಮಾಡಲಾಯಿತು. ಇದೆ ವೇಳೆ ಸಭೆಯಲ್ಲಿ, ಅಫ್ಘಾನಿಸ್ತಾನ ಮತ್ತು ಭಾರತ ನಡುವಿನ ರಾಜತಾಂತ್ರಿಕ ಸಂಬಂಧಗಳು, ದ್ವಿಪಕ್ಷೀಯ ವ್ಯಾಪಾರ ಮತ್ತು ಮಾನವೀಯ ನೆರವು ಕುರಿತು ಚರ್ಚಿಸಲಾಗಿದೆ' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
Today, IEA Acting Deputy Foreign Minister Alhaj Sher Mohammad Abbas Stanekzai met with Indian MEA Joint Secretary J.P. Singh and accompanying delegation.
Mr. Singh called ties between the two countries historic, adding that India wants to assist in line with pic.twitter.com/cwBFmAmUQT
— Abdul Qahar Balkhi (@QaharBalkhi) June 2, 2022
ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತೀಯ ತಂಡವು ತಾಲಿಬಾನ್‌ನ ಹಿರಿಯ ಸದಸ್ಯರು ಮತ್ತು ಮಾನವೀಯ ನೆರವು ವಿತರಣೆಯಲ್ಲಿ ತೊಡಗಿರುವ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಸಹ ಭೇಟಿ ಮಾಡಲಿದೆ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.