ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನಿಂದ 273,400 ಎಕರೆ ಅರಣ್ಯ ನಾಶ

    

Last Updated : Dec 24, 2017, 01:21 PM IST
ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನಿಂದ 273,400 ಎಕರೆ ಅರಣ್ಯ ನಾಶ title=
ಫೋಟೋ ಕೃಪೆ :ರಾಯಿಟರ್ಸ್

ಲಾಸ್ ಎಂಜೆಲಿಸ್: ಅಮೆರಿಕಾದ ಫ್ಯಾಸಿಫಿಕ್ ಪ್ರದೇಶದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನ ಪರಿಣಾಮದಿಂದಾಗಿ ಸುಮಾರು 273,400 ಎಕರೆಯಷ್ಟು  ಅರಣ್ಯ ನಾಶವಾಗಿದೆ ಎಂದು ವರದಿಯಾಗಿದೆ. 

ಕ್ಯಾಲಿಪೋರ್ನಿಯಾದ ಅರಣ್ಯ ಇಲಾಖೆಯ ವರದಿಯಂತೆ  ಈ ಥಾಮಸ್ ಕಾಡ್ಗಿಚ್ಚು ಡಿಸೆಂಬರ್ 4 ರಿಂದ ಹತ್ತಿಕೊಂಡಿದೆ ಎಂದು ತಿಳಿದುಬಂದಿದೆ.ಈ ಹಿಂದೆ 2003 ರಲ್ಲಿ ಸ್ಯಾನ್ ಡಿಯಾಗೋ ದಲ್ಲಿ 273,246 ಎಕರೆ ಅರಣ್ಯ ಬೆಂಕಿಗೆ ಆಗುತಿಯಾಗಿದ್ದು ಇದುವರೆಗಿನ ದಾಖಲೆ ಎಂದು ಹೇಳಲಾಗಿದೆ.

ಅರಣ್ಯ ಇಲಾಖೆಯು 1932ರಿಂದ ಈ ಕಾಡ್ಗಿಚ್ಚಿನಿಂದ ಆಹುತಿಯಾದ ಅರಣ್ಯದ ಬಗ್ಗೆ ದಾಖಲೆಯನ್ನು ಕಾಯ್ದಿಟ್ಟುಕೊಂಡು ಬಂದಿದೆ. ಥಾಮಸ್ ಕಾಡ್ಗಿಚ್ಚು ಸುಮಾರು 1,063  ಕಟ್ಟಡಗಳು ಮತ್ತು ಇಬ್ಬರನ್ನು ಆಹುತಿ ತೆಗೆದುಕೊಂಡಿದೆ ಎಂದು ಹೇಳಾಗಿದೆ,ಈ ಹಿಂದೆ  ಸೇಡಾರ್ ಕಾಡ್ಗಿಚ್ಚು ಸುಮಾರು 2,820 ಕಟ್ಟಡಗಳು ಮತ್ತು 15 ಜನರನ್ನು ಬಲಿ ತೆಗೆದುಕೊಂಡಿತ್ತು. 

ಪ್ರಾರಂಭದಲ್ಲಿ ಬೆಂಕಿಯ ನಿಯಂತ್ರಣ ಕಷ್ಟವಾಗಿದ್ದರಿಂದ ಇದು ಸಂತಾ ಬಾರ್ಬರಾ ಮತ್ತು ವೆಂತುರಾ ಕೌಂಟಿಗಳಿಗೆ ಈ ಬೆಂಕಿ ವಿಸ್ತರಿಸಿದ ಪರಿಣಾಮವಾಗಿ ಅಪಾರ ಪ್ರಮಾಣದ ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಒಂದು ಅಂದಾಜಿನ ಪ್ರಕಾರ ಈ ಬೆಂಕಿಯು  ಸುಮಾರು 44 ಜನರು ಹಾಗೂ ಸುಮಾರು 8,900 ಮನೆಗಳು ಇದರಲ್ಲಿ ಸುಟ್ಟುಹೋಗಿವೆ ಎಂದು ಹೇಳಲಾಗುತ್ತಿದೆ.

Trending News