ಟೋಕಿಯೊ: ಆಹಾರ ಮತ್ತು ಪಾನೀಯ(Food and Drink)ದ ವಿಷಯದಲ್ಲಿ ವಿಚಿತ್ರವಾದ ವಿಷಯಗಳ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವ ಹೆಸರೇ ಚೀನಾ. ಚೀನಾದಲ್ಲಿ ಜನರು ಕ್ರಿಮಿ-ಕೀಟಗಳನ್ನು ಖುಷಿ ಖುಷಿಯಿಂದ ಸೇವಿಸುತ್ತಾರೆ. ಚೀನಾದಲ್ಲಿ ಕೀಟಗಳಿಂದ ಸೂಪ್ ಸೇರಿದಂತೆ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಜಪಾನ್‌ನ ಪಾನೀಯವೊಂದರ ಬಗ್ಗೆ ಕೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಲ್ಲಿ ಜನರು ಜಿರಳೆಗಳಿಂದ ತಯಾರಿಸಿದ ಬಿಯರ್(Cockroaches Beer) ಅನ್ನು ಕುಡಿಯುತ್ತಾರೆ.
ಇದನ್ನೂ ಓದಿ: Viral News: ಇಲ್ಲಿನ ಕಲ್ಲುಗಳು ತನ್ನಷ್ಟಕ್ಕೆ ತಾನೇ ಚಲಿಸುತ್ತವಂತೆ, ಇದುವರೆಗೆ ವಿಜ್ಞಾನಿಗಳಿಗೆ ಇದು ಯಕ್ಷಪ್ರಶ್ನೆಯಾಗಿದೆ
ಮೊದಲು ಕೀಟಗಳನ್ನು ಕೊಳೆಸುತ್ತಾರೆ..!
ಜಪಾನ್‌ನಲ್ಲಿ ಜನರು ಜಿರಳೆಗಳಿಂದ ತಯಾರಿಸಿದ ಬಿಯರ್ ಅನ್ನು ಬಹಳ ಉತ್ಸಾಹದಿಂದ ಕುಡಿಯುತ್ತಾರೆ. ಈ ಬಿಯರ್‌ನ ಹೆಸರು Insect Sour or Konchu Sour ಅಂತಾ. ಈ ವಿಶೇಷ ತಳಿಯ ಜಿರಳೆಯು ಸ್ವಚ್ಛವಾದ ನೀರಿನಲ್ಲಿ ಕಂಡುಬರುತ್ತದೆ. ಇದು ನೀರಿನಲ್ಲಿರುವ ಇತರ ಕೀಟಗಳು ಮತ್ತು ಮೀನುಗಳನ್ನು ತಿನ್ನುತ್ತದೆ. ಈ ಕೀಟಗಳು ಹೆಚ್ಚಿನ ಸಂಖ್ಯೆಯಲ್ಲಿ ದೀಪಗಳ ಸುತ್ತಲೂ ಸುತ್ತುತ್ತಿರುತ್ತವೆ. ಹೀಗಾಗಿ ಜಪಾನ್ ನಲ್ಲಿ ಈ ಕೀಟಗಳನ್ನು ದೀಪಗಳನ್ನು ಹಚ್ಚಿಟ್ಟು ಹಿಡಿಯುತ್ತಾರೆ. ಹೀಗೆ ಹಿಡಿದ ಕೀಟಗಳನ್ನು ಒಂದು ಕಡೆ ಸಂಗ್ರಹಿಸಿಡಲಾಗುತ್ತದೆ. ಇದರ ನಂತರ ಅವುಗಳನ್ನು ಬಿಸಿ ನೀರಿನಲ್ಲಿ ಕುದಿಸಿ ಕೊಳೆಸಲಾಗುತ್ತದೆ. ಮೂರ್ನಾಲ್ಕು ದಿನಗಳ ನಂತರ ಇದರ ರಸವನ್ನು ತೆಗೆದು ಬಿಯರ್ ತಯಾರಿಸಿ ಸೇವಿಸುತ್ತಾರೆ.
ಇದನ್ನೂ ಓದಿ: Viral Video: ವಿಮಾನ ನಿಲ್ದಾಣದಲ್ಲಿ ಸ್ವಯಂಚಾಲಿತವಾಗಿ ಚಲಿಸಿದ ಸೂಟ್ಕೇಸ್!
ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್..!
ಗಂಡು ತೈವಾನೀಸ್ ಜಿರಳೆ(Cockroaches)ಯನ್ನು ಜಪಾನ್‌ನಲ್ಲಿ ತುಂಬಾ ರುಚಿಕರವೆಂದು ಪರಿಗಣಿಸಲಾಗುತ್ತದೆ. ಅಲ್ಲಿನ ಜನರು ಅದರ ರುಚಿಯನ್ನು ಬಹುತೇಕ ಹಣ್ಣಿನಂತೆ ವಿವರಿಸುತ್ತಾರೆ. ಇದನ್ನು ಉತ್ತಮ ಗುಣಮಟ್ಟದ ಸೀಗಡಿಗೆ ಹೋಲಿಸಲಾಗುತ್ತದೆ. ಈ ಕೀಟಗಳನ್ನು ಬೇಯಿಸಿ ತಿನ್ನಲಾಗುತ್ತದೆ ಅಥವಾ ಸೂಪ್ ಮತ್ತು ಮಸಾಲೆಯಾಗಿ ಬಳಸಲಾಗುತ್ತದೆ. ಪ್ರತಿ ಬಾಟಲಿಯ ಬಿಯರ್ ಬೆಲೆ ಸುಮಾರು 450 ರೂ. ಇರುತ್ತದೆ. ಮಾರುಕಟ್ಟೆಯಲ್ಲಿ ಈ ಬಿಯರ್ ಗೆ ಭರ್ಜರಿ ಡಿಮ್ಯಾಂಡ್ ಇದೆ. ಈ ಬಿಯರ್ ಅನ್ನು ಜಪಾನ್‌ನಲ್ಲಿ ‘ಕಬುಟೋಕಾಮಾ’ ಎಂಬ ಸಾಂಪ್ರದಾಯಿಕ ವಿಧಾನದಿಂದ ಬಟ್ಟಿ ಇಳಿಸಲಾಗುತ್ತದೆ. ಇದನ್ನು 20ನೇ ಶತಮಾನದ ಆರಂಭದಿಂದಲೂ ಇಲ್ಲಿನ ಜನರು ಸೇವಿಸುತ್ತಾ ಬರುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.