GDP Growth Rate 2021: 2021ರಲ್ಲಿ ಶೇ.8.3 ಹಾಗೂ 2022 ರಲ್ಲಿ ಶೇ.7.5 ರಷ್ಟು ಇರಲಿದೆ ಭಾರತದ GDP ಗ್ರೋಥ್ ರೇಟ್-World Bank

GDP Growth Rate 2021 - 2021 ರಲ್ಲಿ ಭಾರತದ ಆರ್ಥಿಕತೆಯು (Indian Economy) ಶೇಕಡಾ 8.3 ಮತ್ತು 2022 ರಲ್ಲಿ ಶೇ.7.5 ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ (World Bank) ತನ್ನ ಅಂದಾಜು ವ್ಯಕ್ತಪಡಿಸಿದೆ.

Written by - Nitin Tabib | Last Updated : Jun 8, 2021, 10:47 PM IST
  • 2021ರಲ್ಲಿ ಭಾರತದ GDP ಗ್ರೋಥ್ ರೇಟ್ ಶೇ.8.3 ರಷ್ಟು ಇರಲಿದೆ.
  • 2022ರಲ್ಲಿ ಭಾರತದ GDP ಗ್ರೋಥ್ ರೇಟ್ ಶೇ.7.5 ರಷ್ಟು ಇರಲಿದೆ.
  • Global Economic Prospective 2021 ವರದಿಯಲ್ಲಿ ಅಂದಾಜು ವ್ಯಕ್ತಪಡಿಸಿದ ವಿಶ್ವಬ್ಯಾಂಕ್.
GDP Growth Rate 2021: 2021ರಲ್ಲಿ ಶೇ.8.3 ಹಾಗೂ 2022 ರಲ್ಲಿ ಶೇ.7.5 ರಷ್ಟು ಇರಲಿದೆ ಭಾರತದ GDP ಗ್ರೋಥ್ ರೇಟ್-World Bank title=
GDP Growth Rate 2021 (File Photo)

ನವದೆಹಲಿ: GDP Growth Rate 2021 - 2021 ರಲ್ಲಿ ಭಾರತದ ಆರ್ಥಿಕತೆಯು (Indian Economy) ಶೇಕಡಾ 8.3 ಮತ್ತು 2022 ರಲ್ಲಿ ಶೇಕಡಾ 7.5 ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಮಂಗಳವಾರ ಅಂದಾಜು ವ್ಯಕ್ತಪಡಿಸಿದೆ. ಕೋವಿಡ್ -19ನ ಅನಿರೀಕ್ಷಿತ ಎರಡನೇ ಅಲೆ ಆರ್ಥಿಕ ಚೇತರಿಕೆಗೆ ಅಡ್ಡಿಯಾದ ನಂತರ ವಿಶ್ವ ಬ್ಯಾಂಕ್ ಈ ಅಂದಾಜು ವ್ಯಕ್ತಪಡಿಸಿದೆ. ತನ್ನ ಗ್ಲೋಬಲ್ ಎಕಾನಾಮಿಕ್ ಪ್ರಾಸ್ಪೆಕ್ಟಿವ್ (Global Economic Prospects Report 2021) ಜಾರಿಗೊಳಿಸಿರುವ ವಾಷಿಂಗ್ಟನ್ ಮೂಲದ ಜಾಗತಿಕ ಬ್ಯಾಂಕ್, ಭಾರತದಲ್ಲಿ ಕೊರೊನಾ ವೈರಸ್ ನ ಭೀಕರ ಎರಡನೆಯ ಅಲೆ 2020/21 ಆರ್ಥಿಕ ವರ್ಷದ ದ್ವಿತಿಯಾರ್ಧದಲ್ಲಿ ನಿರೀಕ್ಷೆಗೂ ಮೀರಿದ ವೇಗದಲ್ಲಿ ಆರ್ಥಿಕ ಚೇತರಿಕೆಯನ್ನು ತಡೆಯುತ್ತಿದೆ ಮತ್ತು ಅದರಲ್ಲೂ ವಿಶೇಷವಾಗಿ ಸೇವಾ ಕ್ಷೇತ್ರದಲ್ಲಿ ಎಂದು ಹೇಳಿದೆ.

2020-21ರಲ್ಲಿ ಶೇಕಡಾ 7.3 ರಷ್ಟು ಕುಸಿತದ ನಂತರ ಶೇಕಡಾ 8.3 ರ ಬೆಳವಣಿಗೆಯ ದರವು ಬರಲಿದೆ ಎಂಬುದು ಇಲ್ಲಿ ಗಮನಾರ್ಹ. ಅಂದರೆ, 2021-22ರ ಕೊನೆಯಲ್ಲಿ, ದೇಶದ ಜಿಡಿಪಿ 2019-20ರ (GDP Growth) ಪ್ರಮಾಣಕ್ಕಿಂತ ಕೇವಲ ಶೇ.1 ರಷ್ಟು ಹೆಚ್ಚಾಗಲಿದೆ. ಇದರರ್ಥ ಎರಡು ವರ್ಷಗಳಲ್ಲಿ ಶೇ.1 ರಷ್ಟು ಎಂದಾಗುತ್ತದೆ. ಇದಕ್ಕೂ ಮೊದಲು 2019-20ರಲ್ಲಿ ಅಂದರೆ ಕರೋನಾ ಬಿಕ್ಕಟ್ಟಿಗೆ (Corona Crisis) ಮುಂಚೆಯೇ ದೇಶದ ಜಿಡಿಪಿ ಬೆಳವಣಿಗೆಯ ದರ ಕೇವಲ ಶೇ.4 ರಷ್ಟಿತ್ತು.

2023ರಲ್ಲಿ ಭಾರತದ ಆರ್ಥಿಕ ಅಭಿವೃದ್ದಿ ದರ ಶೇ.6.5ರಷ್ಟು ಇರಲಿದೆ
ಮಹಾಮಾರಿಯ (Corona Pandemic) ಆರಂಭದ ಬಳಿಕ ಮೊದಲ ಬಾರಿಗೆ ಯಾವುದೇ ಒಂದು ದೇಶದಲ್ಲಿನ ಅತಿ ದೊಡ್ಡ ಆರ್ಥಿಕ ಚೇತರಿಕೆಗೆ ಹಿನ್ನಡೆ (Setback To Economy Recovery) ಇದಾಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2020ರಲ್ಲಿ ಭಾರತದ ಆರ್ಥಿಕತೆಯಲ್ಲಿ ಶೇ.7.3 ರಷ್ಟು ಕುಸಿತ , 2019 ರಲ್ಲಿ ಶೇ.4 ರಷ್ಟು ವೃದ್ಧಿ ದರ ದಾಖಲಾಗಿತ್ತು.  ಹೀಗಾಗಿ 2023ರಲ್ಲಿ ಇದು ಶೇ.6.5ರಷ್ಟು ಅಭಿವೃದ್ಧಿಯಾಗುವ ನಿರೀಕ್ಷೆ ಇದೆ ಎಂದು ಜಾಗತಿಕ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ- EPFO News: 6 ಕೋಟಿ ಚಂದಾದಾರರಿಗೊಂದು ಮಹತ್ವದ ಮಾಹಿತಿ, ಆದಷ್ಟು ಬೇಗ ಈ ಕೆಲಸ ಮಾಡಿ

ಜಾಗತಿಕ ಅರ್ಥವ್ಯವಸ್ಥೆಯ (Global Economy 2021) ಕುರಿತು ತನ್ನ ವರದಿಯಲ್ಲಿ ಹೇಳಿರುವ ವಿಶ್ವಬ್ಯಾಂಕ್ 2021 ರಲ್ಲಿ ಇದು ಶೇ.5.6 ರಷ್ಟು ವೃದ್ಧಿಯಾಗಲಿದ್ದು. ಇದು 80 ವರ್ಷಗಳ ಆರ್ಥಿಕ ಮಂದಗತಿಯ ನಂತರದ ವೇಗವಾಗಿದೆ ಎಂದಿದೆ.  ಭಾರತದಲ್ಲಿ ಏಪ್ರಿಲ್ 2021ರಿಂದ ಆರಂಭಗೊಂಡ 2021/22ರ ಆರ್ಥಿಕ ವರ್ಷದಲ್ಲಿ GDP ಶೇ.8.3 ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ, ಸೇವಾವಲಯ ಹಾಗೂ ಉತ್ಪಾದನಾ ವಲಯದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಚೇತರಿಕೆ ಸೇರಿದಂತೆ ಕಾರ್ಯವಿಧಾನದ ನೀತಿಯ ಬೆಂಬಲದ ಲಾಭ ಶಾಮೀಲಾಗಿವೆ ಎಂದು ಜಾಗತಿಕ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ-RBI: ಈ ಎರಡು ಬ್ಯಾಂಕುಗಳ ವಿರುದ್ಧ ಆರ್‌ಬಿಐ ಕ್ರಮ, 6 ಕೋಟಿ ರೂ.ಗಳ ದಂಡ

ಆದರೆ, ಈ ಮೊದಲು ವ್ಯಕ್ತಪಡಿಸಲಾಗಿರುವ ಶೇ.2.9ರಷ್ಟು ಅಂದಾಜಿನಲ್ಲಿ ಬದಲಾವಣೆ ಮಾಡಲಾಗಿದ್ದು, ಇದು ಕೊವಿಡ್-19 (Covid-19) ರ ತೀವ್ರತರವಾದ ಎರಡನೇ ಅಲೆ ಮತ್ತು ಮಾರ್ಚ್ 2021ರಲ್ಲಿ ಜಾರಿಗೆ ಬಂದ ಸ್ಥಳೀಯ ನಿರ್ಬಂಧಗಳು ಬಹುದೊಡ್ಡ ಆರ್ಥಿಕ ನಷ್ಟವನ್ನು ತೋರಿಸುತ್ತಿವೆ ಎಂದು ಜಾಗತಿಕ ಬ್ಯಾಂಕ್ (Global Bank) ಹೇಳಿದೆ. 

ಇದನ್ನೂ ಓದಿ-EPFO Rules: ನಿಮ್ಮ ಪಿಎಫ್ ಖಾತೆಯಲ್ಲಿ ಸಿಗಲಿದೆ 50,000 ರೂ. ನೇರ ಪ್ರಯೋಜನ, ಆದರೆ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News