ವಿದೇಶಿದಲ್ಲಿ ಭಾರತದ ರಾಜನಿಗಾಗಿತ್ತು ಅವಮಾನ..! ರೊಚ್ಚಿಗೆದ್ದ ಆತ ಮಾಡಿದ್ದೇನು ಗೊತ್ತಾ..? ನೀವು ಊಹಿಸೋಕೂ ಸಾಧ್ಯವಿಲ್ಲ

Garbage Collection by Rolls Royce: ಬ್ರಿಟಿಷ್ ಐಷಾರಾಮಿ ಕಾರು ಕಂಪನಿ 'ರೋಲ್ಸ್ ರಾಯ್ಸ್' ತನ್ನ ಕಾರುಗಳಿಂದ ಎಲ್ಲರನ್ನು ಸೆಳೆಯುವುದಲ್ಲದೇ ದೊಡ್ಡ ಖ್ಯಾತಿ ಗಳಿಸಿದೆ.. ಈ ಪ್ರಮುಖ ಕಾರ್‌ ಬ್ರ್ಯಾಂಡ್‌ನ ಬಗೆಗಿನ ಕಥೆಯೊಂದನ್ನು ಇಲ್ಲಿ ತಿಳಿಯೋಣ.. 

Written by - Savita M B | Last Updated : Aug 3, 2024, 03:28 PM IST
  • 'ರೋಲ್ಸ್ ರಾಯ್ಸ್' ಇದು ಸೆಲೆಬ್ರಿಟಿಗಳು ಹಾಗೂ ಬಿಜಿನೆಸ್‌ ಮ್ಯಾನ್‌ಗಳು ಬಳಸುವ ಬಹುಮುಖ್ಯ ಕಾರ್‌ ಬ್ರ್ಯಾಂಡ್‌ ಆಗಿದೆ.
  • ಮಹಾರಾಜರೊಬ್ಬರು ಕಸ ಸಂಗ್ರಹಿಸಲು ರೋಲ್ಸ್ ರಾಯ್ಸ್‌ನ್ನು ಬಳಸಿದ್ದರಂತೆ
ವಿದೇಶಿದಲ್ಲಿ ಭಾರತದ ರಾಜನಿಗಾಗಿತ್ತು ಅವಮಾನ..! ರೊಚ್ಚಿಗೆದ್ದ ಆತ ಮಾಡಿದ್ದೇನು ಗೊತ್ತಾ..? ನೀವು ಊಹಿಸೋಕೂ ಸಾಧ್ಯವಿಲ್ಲ  title=

Maharaja Jai ​​Singh: 'ರೋಲ್ಸ್ ರಾಯ್ಸ್' ಇದು ಸೆಲೆಬ್ರಿಟಿಗಳು ಹಾಗೂ ಬಿಜಿನೆಸ್‌ ಮ್ಯಾನ್‌ಗಳು ಬಳಸುವ ಬಹುಮುಖ್ಯ ಕಾರ್‌ ಬ್ರ್ಯಾಂಡ್‌ ಆಗಿದೆ.. ಈ ಕಾರುಗಳ ಬಗ್ಗೆ ಭಾರತದಲ್ಲಿ ಅನೇಕ ಕಥೆಗಳನ್ನು ಹೇಳಲಾಗುತ್ತದೆ.. ಅದರಲ್ಲಿ ಮಹಾರಾಜರೊಬ್ಬರು ಕಸ ಸಂಗ್ರಹಿಸಲು ರೋಲ್ಸ್ ರಾಯ್ಸ್‌ನ್ನು ಬಳಸಿದ್ದರಂತೆ.. ಹಾಗಾದ್ರೆ ಏನು ಇದರ ಅಸಲಿ ಕಥೆ? 

ಈ ಕಥೆಯನ್ನು ತಿಳಿದುಕೊಳ್ಳಲು ಬಯಸಿದರೇ ಅಂತರ್ಜಾಲದಲ್ಲಿ ಸಾಕಷ್ಟು ಸಿಗುತ್ತವೆ.. ಒಂದು ದಿನ ಮಹಾರಾಜ ಜೈ ಸಿಂಗ್‌ ಲಂಡನ್‌ಗೆ ಭೇಟಿ ನೀಡಿದ್ದರಂತೆ.. ಅವರು ಅಲ್ಲಿ ಭಾರತೋಯ ಉಡುಪನ್ನು ಧರಿಸಿದ್ದರಂತೆ.. ಹೀಗೆ ನಗರದಲ್ಲಿ ಓಡಾಡುವಾಗ ಈ ರೋಲ್ಸ್‌ ರಾಯ್ಸ್‌ ಕಾರಿನ ಬಗ್ಗೆ ತಿಳಿದುಕೊಳ್ಳಲು ಶೋಂ ರೂಗೆ ಹೋಗಲು ಪ್ರಯತ್ನಿಸಿದರು.. ಆದರೆ ಮಹಾರಾಜ ಭಾರತೀಯ ಉಡುಗೆ ತೊಟ್ಟಿದ್ದಾರೆಂದು ಅವರನ್ನು ಭಿಕ್ಷುಕ ಎಂದು ತಿಳಿದು ಅಲ್ಲಿನ ಸಿಬ್ಬಂದಿ ಅವರನ್ನು ಒಳಗೆ ಹೋಗಲು ಬಿಡಲಿಲ್ಲ.. 

ಇದನ್ನೂ ಓದಿ-ವಿಶ್ವದ 5 ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?

ಹೀಗೆ ಅವಮಾನಕ್ಕೊಳಗಾದ ರಾಜ  6 ರೋಲ್ಸ್ ರಾಯ್ಸ್ ಕಾರುಗಳನ್ನು ಅಲ್ಲಿಯೇ ಖರೀದಿಸಿ ಅವುಗಳನ್ನು ಭಾರತಕ್ಕೆ ಕಳುಹಿಸಿದರು.. ಕಾರುಗಳು ಭಾರದಲ್ಲಿನ ತಮ್ಮ ಸಂಸ್ಥಾನಕ್ಕೆ ಬಂದ ನಂತರ ಸೇಡು ತೀರಿಸಿಕೊಳ್ಳಲು ರೋಲ್ಸ್ ರಾಯ್ಸ್ ಕಾರುಗಳನ್ನು ಮುನ್ಸಿಪಲ್ ಕಾರ್ಮಿಕರಿಗೆ ದಾನವಾಗಿ ನೀಡಿ ಕಸ ಗೂಡಿಸಲು ಅವುಗಳನ್ನು ಬಳಸುವಂತೆ ಆದೇಶ ನೀಡಿದ್ದರು.. ಈ ಸಂಬಂಧ ಅನೇಕ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದ್ದವು.. 

ಇದನ್ನೂ ಓದಿ-ಈ 5 ದೇಶಗಳ ಜನರು ಮಾತ್ರ ಯಾವುದೇ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ..!

ಈ ಕಥೆ ಸತ್ಯವೋ ಸುಳ್ಳೋ ಎಂಬುದನ್ನು ತಿಳಿಯಲು ನಾವು ಇತಿಹಾಸವನ್ನು ನೋಡಬೇಕಾಗುತ್ತದೆ.. ಜೈ ಸಿಂಗ್‌ ಮಹಾರಾಜರ ಪೂರ್ತಿ ಹೆಸರು ಸವಾಯಿ ಜೈ ಸಿಂಗ್‌.. ಇವರು ಜನಿಸಿದ್ದು, ನವೆಂಬರ್ 3, 1688ರಲ್ಲಿ.. ಮತ್ತು ನಿಧನರಾಗಿದ್ದು ಸೆಪ್ಟೆಂಬರ್ 21, 1743ರಂದು.. ಇಲ್ಲಿ ಗಮನಾರ್ಹವಾದ ಸಂತಿಯೆಂದರೇ 1885ರವರೆಗೂ ವಾಹನಗಳನ್ನು ಅಭಿವೃದ್ಧಿ ಮಾಡಿರಲಿಲಲ್ಲ.. ಅಲ್ಲದೇ ಆ ವರ್ಷವೇ ಕಾರ್ಲ್ ಬೆಂಜ್ ಕಾರುಗಳ ತಯಾರಿಕೆಯಲ್ಲಿ ತೊಡಗಿದ್ದರು.. ರೋಲ್ಸ್ ರಾಯ್ಸ್ ಕಂಪನಿ ಶುರುವಾಗಿದ್ದು 1906ರಲ್ಲಿ. ಎಂದರೇ ಅದು ಜೈ ಸಿಂಗ್‌ ಅವರ ಮರಣದ ನಂತರ.. ಇದರಿಂದ ಬಹತೇಕ ತಿಳಿಯುವುದೇನೆಂದರೇ ಈ ಕಥೆ ನಿಜವಲ್ಲ ಎಂಬುದು..

ಮತ್ತೊಂದು ಮಾಹಿತಿಯ ಪ್ರಕಾರ ರೋಲ್ಸ್ ರಾಯ್ಸ್ ಕಾರಿನ ಮುಂಭಾಗದಲ್ಲಿ ಪೊರಕೆಗಳನ್ನು ಕಟ್ಟಿದ್ದು ಯಾವ ಕಾರಣಕ್ಕೆ ಎಂದರೇ ಟೈರ್‌ಗಳಿಗೆ ಹಾನಿಯಾಗದಂತೆ ತಡೆಯಲಿ ಎಂಬುದು ಅದರ ಉದ್ದೇಶವಾಗಿತ್ತು.. ಅಲ್ಲದೇ ಇದು ನಂಬಲಾರ್ಹವಾಗಿದೆ.. ಅಲ್ಲದೇ ಈ ಐಷಾರಾಮಿ ಕಾರಿಗನ ಬಗ್ಗೆ ಇನ್ನೂ ಹತ್ತು ಹಲವಾರು ಕಥೆಗಳು ಈಗಲೂ ಸಿಗುತ್ತವೆ.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News