ಸಿ.ಟಿ.ರವಿ ಅವರದ್ದು ಬುರುಡೆ ಮಾತು: ಶಾಸಕ ಸಿ.ಪುಟ್ಟರಂಗಶೆಟ್ಟಿ ಕಿಡಿ

ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರುವ ಸಿ.ಟಿ. ರವಿ (CT Ravi) ಅವರಿಗೆ ತಿರುಗೇಟು ನೀಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಅವನ ಕೈಯಲ್ಲಿ ತಾನೇ ಗೆಲ್ಲಲು ಆಗಿಲ್ಲ, ಎಮ್‌ಎಲ್‌ಸಿ ಆಗ್ಬಿಟ್ಟು ಇಷ್ಟೆಲ್ಲಾ ಬುರುಡೆ ಬಿಡುತ್ತಾನೆ ಎಂದು ಕಿಡಿಕಾರಿದರು.

Written by - Yashaswini V | Last Updated : Sep 9, 2024, 06:01 PM IST
  • ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪತನವಾಗುತ್ತೆ ಎನ್ನುವ ಸಿ. ಟಿ. ರವಿ ಹೇಳಿಕೆ ವಿಚಾರ
  • ಅವನು ಹುಟ್ಟಿದ ಕಾಲದಿಂದಲೂ ಅದನ್ನೇ ಹೇಳುತ್ತಾ ಬಂದಿದ್ದಾನೆ
  • ಅವನು ಇದನ್ನ ಎಷ್ಟು ಬಾರಿ ಹೇಳಿರಬಹುದು. ? : ಸಿಟಿ ರವಿ ವಿರುದ್ಧ ಏಕವಚನದಲ್ಲಿ ಗುಡುಗಿದ ಶಾಸಕ ಸಿ ಪುಟ್ಟರಂಗಶೆಟ್ಟಿ
ಸಿ.ಟಿ.ರವಿ ಅವರದ್ದು ಬುರುಡೆ ಮಾತು:  ಶಾಸಕ ಸಿ.ಪುಟ್ಟರಂಗಶೆಟ್ಟಿ ಕಿಡಿ title=

ಚಾಮರಾಜನಗರ. ಸಿ.ಟಿ.ರವಿ ಹುಟ್ಟಿದ ಕಾಲದಿಂದಲೂ ಸಿಎಂ ಬದಲು  (CM Change) ಅಂಥಾನೇ ಹೇಳಿಕೊಂಡು ಬರುತ್ತಿದ್ದು ಅವರು ಎಷ್ಟು ಬಾರಿ ಹೇಳಿಲ್ಲ ಎಂದು ಏಕವಚನದಲ್ಲಿ ಎಮ್‌ಎಲ್‌ಸಿ ಸಿ‌‌.ಟಿ.ರವಿ (MLC CT Ravi) ವಿರುದ್ಧ ಶಾಸಕ ಸಿ‌.ಪುಟ್ಟರಂಗಶೆಟ್ಟಿ ಗುಡುಗಿದರು‌.

ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸಿ‌.ಪುಟ್ಟರಂಗಶೆಟ್ಟಿ (MLA C Puttarangashetty) ಅವರು, ಸಿಎಂ ಬದಲಾಗುತ್ತಾರೆ ಎಂಬ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಹುಟ್ಟಿದ ಕಾಲದಿಂದಲೂ ಅದನ್ನೇ ಹೇಳುತ್ತಾ ಬಂದಿದ್ದಾರೆ, ಅವರು ಇದನ್ನ ಎಷ್ಟು ಬಾರಿ ಹೇಳಿರಬಹುದು..? ಅದೆಲ್ಲ ಸಾಧ್ಯವೇ ಇಲ್ಲ. ಅದು ರವಿಯ ಕನಸಿನ ಮಾತು ಎಂದರು. 

ಇದನ್ನೂ ಓದಿ- ಸಿದ್ಧು ಸರ್ಕಾರದ ವಿರುದ್ಧ ಸಿ.ಟಿ.ರವಿ ಹೊಸ ಬಾಂಬ್: ದೀಪಾವಳಿಯೊಳಗೆ ಸರ್ಕಾರ ಡಮಾರ್..!

ಇನ್ನೂ ಇದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರುವ ಸಿ.ಟಿ. ರವಿ (CT Ravi) ಅವರಿಗೆ ತಿರುಗೇಟು ನೀಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ, ಅವನ ಕೈಯಲ್ಲಿ ತಾನೇ ಗೆಲ್ಲಲು ಆಗಿಲ್ಲ, ಎಮ್‌ಎಲ್‌ಸಿ ಆಗ್ಬಿಟ್ಟು ಇಷ್ಟೆಲ್ಲಾ ಬುರುಡೆ ಬಿಡುತ್ತಾನೆ ಎಂದು ಕಿಡಿಕಾರಿದರು.

ಇದನ್ನೂ ಓದಿ-  ಸಿಎಂ ಪರ ಬಂಡೆಯಂತೆ ನಿಂತಿದ್ದೇವೆ ಎನ್ನುತ್ತಲೇ ಸಿದ್ದು ಕುರ್ಚಿ ಶೇಖ್ ಮಾಡ್ತಿದ್ದಾರೆ : ಪ್ರಲ್ಹಾದ ಜೋಶಿ ವ್ಯಂಗ್ಯ

ಸಿಎಂ ಖುರ್ಚಿ ಖಾಲಿ ಇಲ್ಲ:
ಕಾಂಗ್ರೆಸ್ ಪಕ್ಷವನ್ನು ಏನು ಮಾಡಲು ಆಗುವುದಿಲ್ಲ. ಸಿಎಂ ಆಗಿ ಸಿದ್ದರಾಮಯ್ಯ ನವರೇ ಮುಂದುವರಿಯುತ್ತಾರೆ. ನಮ್ಮಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ, ಸಿಎಂ ಖುರ್ಚಿ ಖಾಲಿ ಇಲ್ಲ,  ಸಿಎಂ ಸಿದ್ದರಾಮಯ್ಯ ಅವರೇ ಐದು ವರ್ಷಗಳು ಮುಖ್ಯಮಂತ್ರಿ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
WhatsApp Channel- bit.ly/46lENGm
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
Twitter Link - https://bit.ly/3n6d2R8  ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News