Lockdown ನಿಂದ ಬೇಸತ್ತು ಹೋದ ಸ್ಪೇನ್ ಮಹಿಳೆ ಮಾಡಿದ್ದೇನು? ನೀವೇ ಓದಿ..

ವಿಶ್ವಾದ್ಯಂತ ಜನರು ಇದೀಗ ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಘೋಷಿಸಲಾಗಿರುವ ಲಾಕ್ ಡೌನ್ ನಿಂದ ಇದೀಗ ಬೇಸತ್ತು ಹೋಗಿದ್ದಾರೆ ಎಂಬಂತೆ ತಿಳಿದುಬಂದಿದೆ.

Last Updated : Apr 16, 2020, 01:33 PM IST
Lockdown ನಿಂದ ಬೇಸತ್ತು ಹೋದ ಸ್ಪೇನ್ ಮಹಿಳೆ ಮಾಡಿದ್ದೇನು? ನೀವೇ ಓದಿ.. title=

ವಿಶ್ವಾದ್ಯಂತ ಜನರು ಇದೀಗ ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಘೋಷಿಸಲಾಗಿರುವ ಲಾಕ್ ಡೌನ್ ನಿಂದ ಇದೀಗ ಬೇಸತ್ತು ಹೋಗಿದ್ದಾರೆ ಎಂಬಂತೆ ತಿಳಿದುಬಂದಿದೆ. ಜನರು ಗೃಹ ಬಂಧನದಿಂದ ಹೊರಬರಲು ಬಯಸುತ್ತಿದ್ದಾರೆ. ಆದರೆ, ಹಲವು ನಿಭಂಧನೆಗಳ ಕಾರಣ ಅವರಿಗೆ ಈ ರೀತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಸ್ಪೇನ್ ನಲ್ಲಿರುವ ಓರ್ವ ಮಹಿಳೆ ಲಾಕ್ ಡೌನ್ ಉಲ್ಲಂಘಿಸಿದ್ದಾಳೆ. ನಂತರ ಆಕೆಯನ್ನು ಬಂಧಿಸಿರುವ ಪೊಲೀಸರು ಆಕೆಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಈ ವೇಳೆ ಮಹಿಎಲ್ ತನ್ನ ಎಲ್ಲಾ ಬಟ್ಟೆಗಳನ್ನು ಬಿಚ್ಚಿ ಕೋಲಾಹಲವನ್ನೇ ಸೃಷ್ಟಿಸಿದ್ದಾಳೆ. 

ಲಾಕ್ ಡೌನ್ ಹಿನ್ನೆಲೆ ಸ್ಪೇನ್ ನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರಿಗೂ ಕೂಡ ಮನೆಯಿಂದ ಹೊರಗೆ ಬೀಳುವ ಅನುಮತಿ ಇಲ್ಲ. ಆದರೆ, 41 ವರ್ಷ ಮಹಿಳೆಗೆ ಸತತ ಮನೆಯಲ್ಲಿರುವುದು ಕಿರಿಕಿರಿ ಅನುಭವ ನೀಡಿದೆ. ಆದ್ದರಿಂದ ಅವಳು ತನ್ನ ಮನೆಯಿಂದ ಹೊರಬಿದ್ದು, ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾಳೆ. ಆದರೆ, ರಸ್ತೆಗಿಳಿದ ಈ ಮಹಿಳೆ ಯಾವುದೇ ತಪ್ಪು ಕೆಲಸ ಮಾಡಿರಲಿಲ್ಲ. ಕೇವಲ ಆಕೆ ಟೋರೆಮೊಲಿನೋಸ್ ಪ್ರಾಂತ್ಯದಲ್ಲಿ ಕಾರ್ಯನಿರತ ವೈದ್ಯಕೀಯ ಸಿಬ್ಬಂದಿಗಳಿಗೆ ಉತ್ಸಾಹ ನೀಡಲು ರಸ್ತೆಯ ಮೇಲೆ ನಿಂತು ಚಪ್ಪಾಳೆ ಬಾರಿಸಿದ್ದಾಳೆ.

ಇದೇ ವೇಳೆ ಅಲ್ಲಿಗೆ ಧಾವಿಸಿರುವ ಪೊಲೀಸರು ಆಕೆಯನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಲಯ ಆಕೆಗೆ ಎಚ್ಚರಿಕೆಯನ್ನು ನೀಡಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಆದರೆ, ಕೋರ್ಟ್ ನಿಂದ ಹೊರಬರುತ್ತಿದ್ದಂತೆ ಮಹಿಳೆ ತನ್ನೆಲ್ಲಾ ಬಟ್ಟೆಗಳನ್ನು ಬಿಚ್ಚಿ ಕೋಲಾಹಲವನ್ನೇ ಸೃಷ್ಟಿಸಿದ್ದಾಳೆ. ಅಷ್ಟೇ ಅಲ್ಲ ಪೊಲೀಸರ ವ್ಯಾನ್ ಮೇಲೂ ಕೂಡ ಏರಿದ್ದಾಳೆ. ಇದನ್ನು ಗಮನಿಸಿದ ಪೊಲೀಸರು ಮತ್ತೆ ಆಕೆಯನ್ನು ಸುತ್ತುವರೆದಿದ್ದಾರೆ. ಆದರೆ, ಈ ಬಾರಿ ಮಹಿಳೆ ಬಟ್ಟೆ ಧರಿಸಲು ನಿರಾಕರಿಸಿದ್ದಾಳೆ. ಮಹಿಳೆಯ ಈ ವರ್ತನೆಯಿಂದ ಬೇಸತ್ತು ಹೋದ ಪೊಲೀಸರು ಆಕೆಯನ್ನು ಬಟ್ಟೆಯೊಂದರಲ್ಲಿ ಸುತ್ತಿ ಅಂಬುಲೆನ್ಸ್ ಮೂಲಕ ಆಕೆಯನ್ನು ಮನೆ ಸೇರಿಸಿದ್ದಾರೆ.

ಸದ್ಯ ಸ್ಪೇನ್ ನಲ್ಲಿ ಕೊರೊನಾ ವೈರಸ್ ಹಿನ್ನೆಲೆ ಸುಮಾರು 1.77 ಲಕ್ಷ ಜನರು ಸೊಂಕಿತರಾಗಿದ್ದು, 18,579 ಜನರು ಈಗಾಗಲೇ ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. ಸಾವು ಹಾಗೂ ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ಸ್ಪೇನ್ ಎರಡನೆಯ ಸ್ಥಾನದಲ್ಲಿದೆ. 

Trending News