ವಾಷಿಂಗ್ಟನ್ (ಅಮೆರಿಕ): ಓಕ್ಲಹೋಮಾದ ಟಲ್ಸಾದಲ್ಲಿನ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಬಂದೂಕುಧಾರಿಯೊಬ್ಬ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ನಾಲ್ಕು ಜನರನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಟೆಕ್ಸಾಸ್ ಶಾಲೆಯ ಹತ್ಯಾಕಾಂಡ ನಡೆದು ಒಂದು ವಾರ ಕಳೆಯುವುದರೊಳಗೆ ಈ ಘಟನೆ ಜರುಗಿದೆ.
ಸೇಂಟ್ ಫ್ರಾನ್ಸಿಸ್ ಹೆಲ್ತ್ ಸಿಸ್ಟಮ್ ಆಸ್ಪತ್ರೆಯ ಆವರಣದಲ್ಲಿ ನಡೆದ ಈ ದಾಳಿಯಲ್ಲಿ ರೈಫಲ್ ಮತ್ತು ಕೈ ಬಂದೂಕನ್ನು ಹೊಂದಿದ್ದ ಶಂಕಿತ ವ್ಯಕ್ತಿಯೂ ಸಹ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಸುಂದರಿ ಸೋನಾಕ್ಷಿ ಸಿನ್ಹಾ ಬರ್ತ್ಡೇ: ರಾಮಾಯಣದಿಂದ ವಿವಾದಕ್ಕೀಡಾದ ದಬಾಂಗ್ ಬೆಡಗಿ
ಈ ಘಟನೆಯಲ್ಲಿ ನಾಲ್ವರು ಸಾರ್ವಜನಿಕರು ಮತ್ತು ಓರ್ವ ಶೂಟರ್ ಸಾವನ್ನಪ್ಪಿದ್ದಾರೆ ಎಂದು ಟಲ್ಸಾ ಪೊಲೀಸ್ ಇಲಾಖೆಯ ಉಪ ಮುಖ್ಯಸ್ಥ ಎರಿಕ್ ಡಾಲ್ಗ್ಲೀಶ್ ಹೇಳಿದ್ದಾರೆ.
ಟಲ್ಸಾದಲ್ಲಿರುವ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ಈ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ದಾಳಿಕೋರ ಸಹ ಮೃತಪಟ್ಟಿರುವುದಾಗಿ ವರದಿಯಾಗಿದೆ. ಹಂತಕನ ಬಳಿ ದೊಡ್ಡ ರೈಫಲ್ ಮತ್ತು ಪಿಸ್ತೂಲ್ ಇತ್ತು ಎಂದು ತಿಳಿದುಬಂದಿದೆ.
ಟಲ್ಸಾ ಗುಂಡಿನ ದಾಳಿಯ ಕುರಿತು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ. ಆಡಳಿತವು ಸ್ಥಳೀಯ ಅಧಿಕಾರಿಗಳಿಗೆ ಬೆಂಬಲವನ್ನು ನೀಡಿದೆ ಎಂದು ಹೇಳಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಬೆಚ್ಚಿಬೀಳಿಸಿರುವ ಬಂದೂಕುಧಾರಿಗಳ ಮಾರಣಾಂತಿಕ ದಾಳಿಗಳ ಸರಣಿ ಜನರನ್ನು ಬೆಚ್ಚಿಬೀಳಿಸುತ್ತಿದೆ. ಮೇ ತಿಂಗಳು ಅಮೆರಿಕದಲ್ಲಿ ನಡೆದ ಎರಡು ದೊಡ್ಡ ಸಾಮೂಹಿಕ ಗುಂಡಿನ ದಾಳಿಗಳ ಬೆನ್ನಲ್ಲೇ ಈ ದಾಳಿ ನಡೆದಿದೆ.
ಇದನ್ನೂ ಓದಿ: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ್ದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗೆ ಭಯವೇಕೆ?
ಕಳೆದ ವಾರ ಬಂದೂಕುದಾರಿಯೊಬ್ಬ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಗುಂಡಿಕ್ಕಿ ಕೊಂದ ಘಟನೆ ಟೆಕ್ಸಾಸ್ನಲ್ಲಿ ನಡೆದಿತ್ತು. ಮೇ 14 ರಂದು, ನ್ಯೂಯಾರ್ಕ್ನ ಸೂಪರ್ಮಾರ್ಕೆಟ್ನಲ್ಲಿ ಆಫ್ರಿಕನ್ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡ, ಬಂದೂಕು ಹಿಡಿದ ವ್ಯಕ್ತಿಯು 10 ಜನರನ್ನು ಬಲಿ ಪಡೆದಿದ್ದ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.