ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಷರೀಫ್ಗೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದಲ್ಲದೆ, ಅವರ ಮಗಳು ಮೇರಿಯಮ್ ಗೆ 7 ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದೆ. ಇದಲ್ಲದೆ, ನ್ಯಾಯಾಲಯವು ನವಾಜ್ ಷರೀಫ್ಗೆ 73 ಕೋಟಿ ರೂ. ದಂಡ ವಿಧಿಸಿದೆ. ಅದೇ ಸಮಯದಲ್ಲಿ, ನವಾಜ್ ಮಗಳಿಗೆ ದಂಡವನ್ನು 18 ಕೋಟಿ ದಂಡ ವಿಧಿಸಲಾಗಿದೆ. ನವಾಜ್ ಅವರ ಪುತ್ರಿ ಮೇರಿ ಪಾಕಿಸ್ತಾನದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಜುಲೈ 25 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಕೆಲವು ದಿನಗಳು ಬಾಕಿ ಇರುವಾಗಲೇ ಪಾಕಿಸ್ತಾನದಲ್ಲಿ ಈ ತೀರ್ಪನ್ನು ಪ್ರಕಟಿಸಲಾಗಿದೆ.
Former Pakistan PM Nawaz Sharif sentenced to 10 years and his daughter Maryam sentenced to 7 years imprisonment in #AvenfieldReference: Pakistan media pic.twitter.com/32AOuawZrq
— ANI (@ANI) July 6, 2018
ನ್ಯಾಯಾಲಯದ ಈ ನಿರ್ಧಾರವು ಪಾಕಿಸ್ತಾನದ ರಾಜಕೀಯ ಹೋರಾಟದ ಮೇಲೆ ಪರಿಣಾಮ ಬೀರುವುದು ಸ್ಪಷ್ಟವಾಗಿದೆ. ಅಕೌಂಟೆಬಿಲಿಟಿ ಕೋರ್ಟ್ನಲ್ಲಿ ಷರೀಫ್ ಮತ್ತು ಅವರ ಮೂವರು ಮಕ್ಕಳ ವಿರುದ್ಧದ ನಾಲ್ಕು ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿವೆ.
ಕಳೆದ ವರ್ಷ ಜುಲೈನಲ್ಲಿ ಭ್ರಷ್ಟಾಚಾರ ಬಯಲುಗೊಂಡು ಷರೀಫ್ ಅವರನ್ನು ಪ್ರಧಾನಿ ಹುದ್ದೆಯಿಂದ ಅನರ್ಹಗೊಳಿಸಿದ ನಂತರ, 68 ವರ್ಷದ ಷರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ಪ್ರಕರಣಗಳು ಆರಂಭಗೊಂಡವು. ಕಳೆದ ವರ್ಷ ನವಾಜ್ ಶರೀಫ್ ಪ್ರಧಾನಮಂತ್ರಿ ಹುದ್ದೆಯಲ್ಲಿರುವಾಗ ನವಾಜ್ ಷರೀಫ್ ಅವರು ಅಕ್ರಮ ಸಂಪಾದನೆ ಮತ್ತು ತೆರಿಗೆ ವಂಚನೆಯಿಂದ ಗಳಿಸಿದ ಕಪ್ಪು ಹಣವನ್ನು ಅಂತರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಹಾಗೂ ವಿದೇಶಗಳಲ್ಲಿ ಹೂಡಿಕೆ ಮಾಡಿದವರ ಪಟ್ಟಿಯನ್ನು ಪನಾಮ ಪೇಪರ್ಸ್ ಲೀಕ್ ಮಾಡಿತ್ತು. ಲಂಡನ್ ನಲ್ಲಿ ನಾಲ್ಕು ಐಷಾರಾಮಿ ಫ್ಲಾಟ್ ಗಳನ್ನು ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಹಾಗೂ ಪುತ್ರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
#WATCH: Shehbaz Sharif address the media after former PM and his daughter were sentenced to jail in Avenfield Refer… https://t.co/CinnzWhyin
— ANI (@ANI) July 6, 2018