ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಪ್ರಯಾಣಿಸಲಿರುವ ನವಾಜ್ ಷರೀಫ್

ಪಾಕಿಸ್ತಾನದ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಪ್ರಯಾಣಿಸಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

Last Updated : Nov 8, 2019, 03:33 PM IST
ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಪ್ರಯಾಣಿಸಲಿರುವ ನವಾಜ್ ಷರೀಫ್   title=

ನವದೆಹಲಿ: ಪಾಕಿಸ್ತಾನದ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ಪ್ರಯಾಣಿಸಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

69 ವರ್ಷದ ಷರೀಫ್ ಅವರನ್ನು ಅಕ್ಟೋಬರ್ 22 ರಂದು ಲಾಹೋರ್‌ನ ಸರ್ವೀಸಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ರೋಗಗಳ ಚಿಕಿತ್ಸೆಗಾಗಿ ಪಾಕಿಸ್ತಾನದ ಆಸ್ಪತ್ರೆಯಲ್ಲಿ ಎರಡು ವಾರಗಳ ಕಾಲ ತಂಗಿದ್ದ ನಂತರ ಷರೀಫ್ ಅವರನ್ನು ಬುಧವಾರ ಲಾಹೋರ್‌ನ ಜಾತಿ ಉಮ್ರಾ ರೈವಿಂಡ್ ನಿವಾಸಕ್ಕೆ ಸ್ಥಳಾಂತರಿಸಲಾಯಿತು.

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನ ಅಧ್ಯಕ್ಷ ಶೆಹಬಾಜ್ ಅವರು ಲಂಡನ್‌ನಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿಕೊಳ್ಳಲು ಷರೀಫ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ, ಅಲ್ಲಿ ಅವರು ಈಗಾಗಲೇ ಯುಕೆ ಯ ಹಾರ್ಲೆ ಸ್ಟ್ರೀಟ್ ಚಿಕಿತ್ಸಾಲಯವೊಂದರಲ್ಲಿ ಸಲಹೆಗಾರರೊಂದಿಗೆ ಮಾತನಾಡಿದ್ದಾರೆ, ಅಲ್ಲಿ ರೋಗಿಗಳು ಪ್ಲೇಟ್‌ಲೆಟ್‌ಗಳಲ್ಲಿ ನ ಕುಸಿತಕ್ಕೆ ಖಾಸಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ನವಾಜ್ ಷರೀಫ್ ಅವರು ಲಾಹೋರ್ ನಲ್ಲಿಯೇ ಚಿಕಿತ್ಸೆಯನ್ನು ಪಡೆಯಲು ಬಯಸಿದ್ದರು ಎನ್ನಲಾಗಿದೆ. ಈಗ ಅವರು ಚಿಕಿತ್ಸೆಗಾಗಿ ಕನಿಷ್ಠ ಐದು ತಿಂಗಳಾದರೂ ಲಂಡನ್‌ನಲ್ಲಿ ಉಳಿಯಬೇಕಾಗಿದೆ ಎಂದು ಅವರ ಕಿರಿಯ ಸಹೋದರ ಶೆಹಬಾಜ್ ಶರೀಫ್ ತಿಳಿಸಿದ್ದಾರೆ.

Trending News