Operation Kaveri: ಸುಡಾನ್ ನಲ್ಲಿ ಸಿಲುಕಿಕೊಂಡ ಭಾರತೀಯರ ಮೊದಲ ಗುಂಪು ಭಾರತಕ್ಕೆ ರವಾನೆ

Operation Kaveri: ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಗುಂಪುಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಹೋರಾಟ ಮುಂದುವರಿದಿದೆ. ಈ ಯುದ್ಧದಲ್ಲಿ ಇದುವರೆಗೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Written by - Nitin Tabib | Last Updated : Apr 25, 2023, 07:24 PM IST
  • ಜೆಡ್ಡಾ ತಲುಪಿದ ನಂತರ ಭಾರತೀಯರನ್ನು ಮನೆಗೆ ಕರೆತರಲಾಗುವುದು.
  • ಇಡೀ ಸುಡಾನ್‌ನಲ್ಲಿ ಸುಮಾರು 3,000 ಭಾರತೀಯರಿದ್ದಾರೆ.
  • ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿ ಹಲವಾರು ಸ್ಥಳಗಳಿಂದ ಭಾರೀ ಹೋರಾಟದ ವರದಿಗಳು ಹೊರಬಂದಿವೆ
Operation Kaveri: ಸುಡಾನ್ ನಲ್ಲಿ ಸಿಲುಕಿಕೊಂಡ ಭಾರತೀಯರ   ಮೊದಲ ಗುಂಪು ಭಾರತಕ್ಕೆ ರವಾನೆ  title=

Sudan Crisis: ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಮೊದಲ ಬ್ಯಾಚ್ ಕರೆದುಕೊಂಡು ಭಾರತೀಯ ನೌಕಾಪಡೆಯ ಹಡಗು ಸೌದಿ ಅರೇಬಿಯಾದ ಜೆಡ್ಡಾಕ್ಕೆ ರವಾನಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ (ಏಪ್ರಿಲ್ 25) ಈ ಮಾಹಿತಿಯನ್ನು ನೀಡಿದೆ. ಹಿಂಸಾಚಾರ ಪೀಡಿತ ಸುಡಾನ್‌ನಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತ ಸೋಮವಾರ ಆಪರೇಷನ್ ಕಾವೇರಿಯನ್ನು ಆರಂಭಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್‌ಎಸ್ ಸುಮೇಧಾ ಹಡಗಿನಲ್ಲಿರುವ ಭಾರತೀಯರ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಜನರು ತಮ್ಮನ್ನು ಸುಡಾನ್‌ನಿಂದ ಹೊರಗೆ ಕರೆದುಕೊಂಡು ಬಂದಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿರುವುದನ್ನು ನೀವು ಚಿತ್ರಗಳಲ್ಲಿ ನೋಡಬಹುದು. 

ಈ ಕುರಿತು ಟ್ವೀಟ್ ಮಾಡಿರುವ ಅರಿಂದಮ್ ಬಾಗ್ಚಿ, "ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಮೊದಲ ಬ್ಯಾಚ್ ಆಪರೇಷನ್ ಕಾವೇರಿ ಅಡಿಯಲ್ಲಿ ಹೊರಟಿದೆ. 278 ಜನರೊಂದಿಗೆ ಐಎನ್‌ಎಸ್ ಸುಮೇಧಾ ಮೂಲಕ ಪೋರ್ಟ್ ಸುಡಾನ್‌ನಿಂದ ಜೆಡ್ಡಾಕ್ಕೆ ಹೋಗುತ್ತಿದ್ದಾರೆ" ಎಂದು ಹೇಳಿದ್ದಾರೆ. ಸುಡಾನ್‌ನಿಂದ ಬರುವ ಈ ಜನರಲ್ಲಿ ಅನೇಕ ಮಕ್ಕಳೂ ಶಾಮಿಲಾಗಿದ್ದಾರೆ. ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಯೋಜನೆಯ ಭಾಗವಾಗಿ ಭಾರತವು ಎರಡು C-130J ಮಿಲಿಟರಿ ಸಾರಿಗೆ ವಿಮಾನಗಳನ್ನು ಜೆಡ್ಡಾದಲ್ಲಿ ಮತ್ತು ಪೋರ್ಟ್ ಸುಡಾನ್‌ನಲ್ಲಿ INS ಸುಮೇಧಾವನ್ನು ನಿಯೋಜಿಸಿದೆ.

ಇದನ್ನೂ ಓದಿ-Indian Population: ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಯುಎನ್ ವರದಿ

ಸುಡಾನ್‌ನಲ್ಲಿ ಭೀಕರ ಯುದ್ಧ ಮುಂದುವರೆದಿದೆ
ಜೆಡ್ಡಾ ತಲುಪಿದ ನಂತರ ಭಾರತೀಯರನ್ನು ಮನೆಗೆ ಕರೆತರಲಾಗುವುದು. ಇಡೀ ಸುಡಾನ್‌ನಲ್ಲಿ ಸುಮಾರು 3,000 ಭಾರತೀಯರಿದ್ದಾರೆ. ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿ ಹಲವಾರು ಸ್ಥಳಗಳಿಂದ ಭಾರೀ ಹೋರಾಟದ ವರದಿಗಳು ಹೊರಬಂದಿದ್ದು,  ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯು ಅಸ್ಥಿರವಾಗಿದೆ. ಕಳೆದ 10 ದಿನಗಳಿಂದ ಸುಡಾನ್ ನಲ್ಲಿ ಸೇನೆ ಮತ್ತು ಅರೆಸೇನಾ ಪಡೆ ನಡುವೆ ನಡೆದ ಭೀಕರ ಕಾಳಗದಲ್ಲಿ 400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ-OMG ! ಕಾರ್ ಇಂಜಿನ್ ನಲ್ಲಿ 48 ಕಿ.ಮೀಗಳವರೆಗೆ ಸಿಲುಕಿಕೊಂಡ ಪುಟ್ಟ ಪ್ರಾಣ, ನಂತರ ನಡೆದಿದ್ದು ಮಾತ್ರ ಆ ದೇವರ ಇಚ್ಚೆ

ಜನರನ್ನು ಸ್ಥಳಾಂತರಿಸುವಂತೆ ಪ್ರಧಾನಿ ಮೋದಿ ಸೂಚನೆ 
ಕಳೆದ ಶುಕ್ರವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸುಡಾನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಯೋಜನೆಗಳನ್ನು ಸಿದ್ಧಪಡಿಸಲು ಸೂಚನೆಗಳನ್ನು ನೀಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಇತ್ತೀಚೆಗೆ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿದೇಶಾಂಗ ಮಂತ್ರಿಗಳೊಂದಿಗೆ ಸುಡಾನ್ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದರು. ಅಮೆರಿಕ, ಈಜಿಪ್ಟ್, ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳೊಂದಿಗೆ ಭಾರತ ಸಂಪರ್ಕದಲ್ಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News