FB ಮೆಸೆಂಜರ್ ಮತ್ತಷ್ಟು ಸುರಕ್ಷಿತ; ಫೇಸ್ಬುಕ್ ನಿಂದಲೂ ನಿಮ್ಮ ಮೆಸೇಜ್ ಓದಲು ಸಾಧ್ಯವಿಲ್ಲ!

  

Last Updated : Mar 7, 2019, 04:13 PM IST
FB ಮೆಸೆಂಜರ್ ಮತ್ತಷ್ಟು ಸುರಕ್ಷಿತ; ಫೇಸ್ಬುಕ್ ನಿಂದಲೂ ನಿಮ್ಮ ಮೆಸೇಜ್ ಓದಲು ಸಾಧ್ಯವಿಲ್ಲ! title=

ಸ್ಯಾನ್ ಫ್ರಾನ್ಸಿಸ್ಕೋ:  ಸಾಮಾಜಿಕ ಜಾಲತಾಣ ಫೇಸ್ಬುಕ್ ತನ್ನ ಬಳಕೆದಾರರ ಮಾಹಿತಿಯ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಅದಕ್ಕಾಗಿ ಫೇಸ್ಬುಕ್ ಮೆಸೆಂಜರ್ ಮೇಲೆ ಹೆಚ್ಚು ನಿಗಾ ವಹಿಸಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿಯ ಸಿಇಓ ಮಾರ್ಕ್ ಜುಕರ್ಬರ್ಗ್, ಫೇಸ್ಬುಕ್ ಮೆಸೆಂಜರ್ ಸೇವೆ ಸಂಪೂರ್ಣ ಗೌಪ್ಯತೆ ಕಾಪಾಡುವ ಬಗ್ಗೆ ಗಮನಹರಿಸಿದ್ದು, ಇದರಿಂದಾಗಿ ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಫೇಸ್ಬುಕ್ ಸಹ ಓದುವುದು ಅಸಾಧ್ಯ ಎಂದಿದ್ದಾರೆ.

ಆದರೆ, ಫೇಸ್ಬುಕ್'ನ ನ್ಯೂಸ್ ಫೀಡ್ ಮತ್ತು ಗ್ರೂಪ್ ಸೇವೆಗಳ ಬಗ್ಗೆ ಅಥವಾ ಇನ್ಸ್ಟಾಗ್ರಾಂ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ ಯಾವುದೇ ಸಾರ್ವಜನಿಕ ಸೇವೆಗಳು ಸ್ಥಗಿತವಾಗುವುದಿಲ್ಲ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Trending News