ಅಂಟಾರ್ಟಿಕಾದಲ್ಲಿ 7.5 ತೀವ್ರತೆಯ ಭೂಕಂಪ

ಯುನೈಟೆಡ್ ಸ್ಟೇಟ್ಸ್ ಜೂವಾಲಾಜಿಕಲ್ ಸಮೀಕ್ಷೆಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.5ರಷ್ಟು ದಾಖಲಾಗಿದೆ. 

Last Updated : Dec 11, 2018, 09:37 AM IST
ಅಂಟಾರ್ಟಿಕಾದಲ್ಲಿ 7.5 ತೀವ್ರತೆಯ ಭೂಕಂಪ title=

ಅಂಟಾರ್ಕ್ಟಿಕ್ ಖಂಡದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಮಂಗಳವಾರ ಬೆಳಿಗ್ಗೆ ಸುಮಾರು 3 ಗಂಟೆಯ ವೇಳೆಗೆ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜೂವಾಲಾಜಿಕಲ್ ಸಮೀಕ್ಷೆಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.5ರಷ್ಟು ದಾಖಲಾಗಿದೆ.

ಅಂಟಾರ್ಟಿಕಾವು ವಿಶ್ವದ ಅತ್ಯಂತ ಶೀತವಾದ, ಶುಷ್ಕ ಮತ್ತು ಬಲವಾದ ಗಾಳಿಯ ಖಂಡವಾಗಿದೆ. ಇದು ವರ್ಷಪೂರ್ತಿ ಮಂಜಿನಿಂದ ಆವೃತವಾಗಿರುತ್ತದೆ, ಆದ್ದರಿಂದ ಅಂಟಾರ್ಟಿಕಾವನ್ನು 'ಶೀತ ಮರುಭೂಮಿ' ಎಂದೂ ಕರೆಯಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ಝೂವಲಾಜಿಕಲ್ ಸರ್ವೆ (ಯುಎಸ್ಜಿಎಸ್) ಭೂಕಂಪನದ ನಂತರ, ಬರ್ಫ್ ನ ಕೆಲವು ಸ್ಥಳಗಳು ಬಿರುಕಿನಿಂದ ಕಾಣಿಸಿಕೊಂಡಿವೆ ಎಂದು ತಿಳಿಸಿದೆ. 

ಸಮಯ ವಲಯಗಳನ್ನು ವ್ಯಾಖ್ಯಾನಿಸುವ ಎಲ್ಲಾ ರೇಖಾಂಶ ಸಾಲುಗಳು ಈ ಖಂಡದ ಎರಡೂ ಧ್ರುವಗಳ ಮೇಲೆ ಸಂಧಿಸುತ್ತವೆ. ಅಂಟಾರ್ಟಿಕಾದ 99 ಪ್ರತಿಶತವು ಹಿಮದಿಂದ ಆವೃತವಾಗಿದೆ. ಇಲ್ಲಿ ಜೀವಿಸುವುದು ತುಂಬಾ ಕಷ್ಟ. ಹಾಗಾಗಿ ಈ ಪ್ರದೇಶದಲ್ಲಿ ಶಾಶ್ವತ ಜನಸಂಖ್ಯೆ ಇಲ್ಲ.
 

Trending News