Donald Trump Impeachment: ವಿಶ್ವದ ಪ್ರಬಲ ರಾಷ್ಟ್ರಾಧ್ಯಕ್ಷಗೆ ವಾಗ್ದಂಡನೆ ಕುಣಿಕೆ

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ವಿರುದ್ಧ ವಾಗ್ದಂಡನೆ  ಪ್ರಕ್ರಿಯೆ ಶುರುವಾಗಿದೆ. ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ಟ್ರಂಪ್ ವಿರುದ್ಧ ದೋಷಾರೋಪಣಾ ಪಟ್ಟಿಯ ಕರಡನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ್ದಾರೆ.

Written by - Ranjitha R K | Last Updated : Jan 14, 2021, 10:24 AM IST
  • ಅಮೆರಿಕ ಪ್ರತಿನಿಧಿ ಸಭೆಯಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ ಪಾಸ್
  • ಹಿಂಸೆಗೆ ಪ್ರಚೋದಿಸಿದ ಆರೋಪದ ಮೇಲೆ ಟ್ರಂಪ್ ವಿರುದ್ಧ ವಾಗ್ದಂಡನೆ
  • ಸೆನೆಟ್ ಕೂಡಾ ಅನುಮೋದಿಸಿದರೆ ಟ್ರಂಪ್ ಅಧಿಕಾರದಿಂದ ಕೆಳಗಿಳಿಯಬೇಕು
Donald Trump Impeachment: ವಿಶ್ವದ ಪ್ರಬಲ ರಾಷ್ಟ್ರಾಧ್ಯಕ್ಷಗೆ ವಾಗ್ದಂಡನೆ ಕುಣಿಕೆ title=
ಅಮೆರಿಕ ಪ್ರತಿನಿಧಿ ಸಭೆಯಲ್ಲಿ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯ (filephoto)

ವಾಷಿಂಗ್ಟನ್ : ಅಮೆರಿಕದ ಕ್ಯಾಪಿಟಲ್ ಕಟ್ಟಡದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸಿದ ಹಿನ್ನೆಲೆಯಲ್ಲಿ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ವಿರುದ್ಧ ವಾಗ್ದಂಡನೆ (Impeachment) ಪ್ರಕ್ರಿಯೆ ಶುರುವಾಗಿದೆ. ಡೆಮಾಕ್ರಟಿಕ್ ಪಕ್ಷದ ಮೂವರು ಸಂಸದರು ಟ್ರಂಪ್ ವಿರುದ್ಧ ದೋಷಾರೋಪಣಾ ಪಟ್ಟಿಯ ಕರಡನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಹಿಂಸೆಗೆ ಪ್ರಚೋದಿಸಿದ ಅಪಾದನೆಯನ್ನು ಟ್ರಂಪ್ ಮೇಲೆ ಮಾಡಲಾಗಿದೆ. 

ಡೆಮಾಕ್ರಟಿಕ್ (Democratic) ಸಂಸದರಾದ ಜೇಮೀ ರಾಸ್ಕಿನ್, ಡೆವಿಡ್ ಸಿಸಿಲಿನ್ ಮತ್ತು ಟೆಡ್ ಲಿಯು ವಾಗ್ದಂಡನೆಯ ಕರಡು ರಚಿಸಿದ್ದು, ಅಮೇರಿಕದ ಹೌಸ್ ಅಫ್ ರೆಪ್ರೆಸೆಂಟೆಟಿವ್ಸ್ ನ (House of Representatives)   211 ಸದಸ್ಯರು ಕರಡು ನಿರ್ಣಯಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ರಿಪಬ್ಲಿಕನ್ ಪಾರ್ಟಿಯ ಕೆಲವು ಸಂಸದರೂ ಟ್ರಂಪ್ (Donald Trump)ವಿರುದ್ಧ ಮತಚಲಾಯಿಸಿದ್ದಾರೆ.  ಅಮೆರಿಕದ (America) ಪ್ರತಿನಿಧಿ ಸಭೆಯಲ್ಲಿ ಡೆಮಾಕ್ರಟನ್ನರ ಸಂಖ್ಯೆ ಹೆಚ್ಚಿದೆ. 

ಇದನ್ನೂ ಓದಿ : ರ್ವಾಧಿಕಾರಿ Kim Jong Un ಅವರಿಂದ ಮತ್ತೆ ಎಚ್ಚರಿಕೆಯ ಘಂಟೆ

ವಾಗ್ದಂಡನೆಯ ಪರ 232 ಮತ ಚಲಾವಣೆ :
ವಾಗ್ದಂಡನೆ ಪ್ರಸ್ತಾವದ ಪರ 232 ಸಂಸದರು ಮತ ಚಲಾಯಿಸಿದ್ದಾರೆ. ಪ್ರಸ್ತಾವದ ವಿರುದ್ಧ 197 ಸಂಸದರು ವೋಟ್ ಮಾಡಿದ್ದಾರೆ. ರಿಪಬ್ಲಿಕನ್ ಪಕ್ಷದ (Republican Party) 10 ಸಂಸದರು ಟ್ರಂಪ್ ವಿರುದ್ಧ ಮತಚಲಾಯಿಸಿದ್ದಾರೆ. 

ಅಮೆರಿಕದ ಸೆನೆಟ್ ನಿರ್ಧಾರ ನಿರ್ಣಾಯಕ :
ಜನವರಿ 19 ರಂದು ಈ ಪ್ರಸ್ತಾವ ಸೆನೆಟ್ ಮುಂದೆ ಮಂಡಿಸಲಾಗುತ್ತದೆ. ಒಂದು ವೇಳೆ ವಾಗ್ದಂಡನೆ ನಿರ್ಣಯ ಅಂಗೀಕೃತವಾದರೆ, ಟ್ರಂಪ್ ಅವರನ್ನು ಅಧ್ಯಕ್ಷ (President) ಪದವಿಯಿಂದ ಕಿತ್ತೊಗೆಯಲಾಗುತ್ತದೆ. ವಿಶೇಷವೆಂದರೆ, ಜನವರಿ 20 ರಂದು ಟ್ರಂಪ್ ಅಧಿಕಾರವಧಿ ಕೊನೆಗೊಳ್ಳಲಿದೆ.  ಆದರೆ, ಸೆನೆಟ್ ನಲ್ಲಿ( Senate)  ರಿಪಬ್ಲಿಕನ್ ಪಕ್ಷ ಬಹುಮತ ಹೊಂದಿದೆ. ಮೂರನೇ ಎರಡು ಸಂಸದರ ಒಪ್ಪಿಗೆ ಸಿಕ್ಕಿದರೆ, ವಾಗ್ದಂಡನೆ ನಿರ್ಣಯ ಅನುಮೋದಿತವಾಗುತ್ತದೆ. ಸೆನೆಟ್ ನಲ್ಲಿ ಟ್ರಂಪ್ ಗೆ ಅನುಕೂಲಕರ ಸ್ಥಿತಿ ಇದೆ. 

ಇದನ್ನೂ ಓದಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಚೀನಾ ಅಡ್ಡಗಾಲು...

ಅಮೆರಿಕಾ ಇತಿಹಾಸದಲ್ಲೇ 2 ನೇ ಸಲ ವಾಗ್ದಂಡನೆಗೆ ಗುರಿಯಾಗುತ್ತಿರುವ ಟ್ರಂಪ್:
ಅಮೆರಿಕ ಇತಿಹಾಸದಲ್ಲೇ 2 ಬಾರಿ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಗುರಿಯಾಗಿದ್ದಾರೆ.  ಟ್ರಂಪ್ ದೋಷಾರೋಪಣೆಗೆ ಗುರಿಯಾದ ಮೊದಲ ಅಧ್ಯಕ್ಷರೇನೂ ಅಲ್ಲ. ಡೊನಾಲ್ಡ್ ಟ್ರಂಪ್ ಗೂ ಮೊದಲು ಅಮೆರಿಕದ ಇಬ್ಬರು ಖ್ಯಾತ ಅಧ್ಯಕ್ಷರು ದೋಷಾರೋಪಣೆಗೆ ಗುರಿಯಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News