ನವದೆಹಲಿ: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷವು ಕಳೆದ ಕೆಲವು ತಿಂಗಳುಗಳಿಂದ ಗೆಲುವಿಗಾಗಿ ಸಾಕಷ್ಟು ಕಸರತ್ತು ಮಾಡಿದೆ. ಈಗ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ನುಡಿದಿರುವ ಭವಿಷ್ಯದ ಪ್ರಕಾರ ಇಡೀ ಜಗತ್ತು ಡೊನಾಲ್ಡ್ ಟ್ರಂಪ್ ಗೆ ಮತ ಚಲಾಯಿಸಲಿದೆ ಎಂದು ಸೂಚಿಸುವ ನಕ್ಷೆಯೊಂದನ್ನು ಶೇರ್ ಮಾಡಿದ್ದಾರೆ.
ಅಮೆರಿಕಾದಲ್ಲಿ ಶೇ 48 ರಷ್ಟು ಭಾರತೀಯರು ಮೋದಿಗೆ ಬೆಂಬಲ, ಆದರೆ ಟ್ರಂಪ್ ಗೆ ಬೆಂಬಲಿಸುವರು ಶೇ 22 ..!
ಅಚ್ಚರಿ ಎಂದರೆ ಈ ಜಗತ್ತಿನ ನಕ್ಷೆಯಲ್ಲಿ ಬಹುಪಾಲು ಪ್ರದೇಶಗಳು ಕೆಂಪು ಬಣ್ಣದಿಂದ ಆವೃತವಾಗಿರುವುದು ರಿಪಬ್ಲಿಕ್ ಪಕ್ಷವನ್ನು ಸೂಚಿಸುತ್ತದೆ. ಇನ್ನೂ ನೀಲಿ ಬಣ್ಣದಿಂದ ಗುರುತಿಸಿರುವ ಚೀನಾ, ಭಾರತ, ಹಾಗೂ ಮೆಕ್ಸಿಕೋ ದೇಶಗಳು ಟ್ರಂಪ್ ಗೆ ವಿರುದ್ಧವಾಗಿ ಮತ ಚಲಾಯಿಸಲಿವೆ ಎನ್ನುವುದನ್ನು ನಕ್ಷೆ ಸೂಚ್ಯವಾಗಿ ಹೇಳುತ್ತದೆ.
Okay, finally got around to making my electoral map prediction. #2020Election #VOTE pic.twitter.com/STmDSuQTMb
— Donald Trump Jr. (@DonaldJTrumpJr) November 3, 2020
ಅಂತಿಮವಾಗಿ ನನ್ನ ಚುನಾವಣಾ ಫಲಿತಾಂಶದ ಭವಿಷ್ಯ ಹೀಗಿದೆ ಎಂದು ಡೊನಾಲ್ಡ್ ಟ್ರಂಪ್ ಜೂನಿಯರ್ ಟ್ವೀಟ್ ಮಾಡಿದ್ದಾರೆ.ಈ ಟ್ವೀಟ್ ಈಗ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ.
ಇನ್ನೊಂದೆಡೆಗೆ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭವಾಗುತ್ತಿದ್ದಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪ್ರತಿಸ್ಪರ್ಧಿ ಜೋ ಬಿಡನ್ ಇಬ್ಬರೂ ಟ್ವಿಟ್ಟರ್ನಲ್ಲಿ ತಮ್ಮ ಬೆಂಬಲಿಗರಿಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್-ಜೋ ಬಿಡನ್ ಭವಿಷ್ಯ ನಿರ್ಧರಿಸಲಿರುವ ಅಮೆರಿಕ ಜನತೆ
ಪೂರ್ವ ರಾಜ್ಯಗಳಾದ ನ್ಯೂಯಾರ್ಕ್, ನ್ಯೂಜೆರ್ಸಿ, ವರ್ಜೀನಿಯಾ, ಕನೆಕ್ಟಿಕಟ್ ಮತ್ತು ಮೈನೆಗಳಲ್ಲಿ ಬೆಳಿಗ್ಗೆ 6:00 ಗಂಟೆಗೆ ಮತದಾನ ಪ್ರಾರಂಭವಾಯಿತು. ಆದಾಗ್ಯೂ,ನ್ಯೂ ಹ್ಯಾಂಪ್‌ಶೈರ್ ಗ್ರಾಮಗಳಾದ ಡಿಕ್ಸ್‌ವಿಲ್ಲೆ ನಾಚ್ ಮತ್ತು ಮಿಲ್ಸ್‌ಫೀಲ್ಡ್ ನಲ್ಲಿ ಮಧ್ಯರಾತ್ರಿಯಿಂದಲೇ ಮತದಾನ ಪ್ರಾರಂಭವಾಗಿತ್ತು.
ಏತನ್ಮಧ್ಯೆ, ಮಂಗಳವಾರ ಅಧಿಕೃತವಾಗಿ ಚುನಾವಣಾ ದಿನ ಎಂದು ಗೊತ್ತುಪಡಿಸಿದರೂ, ಮತದಾನ ಪ್ರಕ್ರಿಯೆಯು ಕಳೆದ ಹಲವು ವಾರಗಳಿಂದ ನಡೆಯುತ್ತಿದೆ. ಮೇಲ್-ಇನ್ ಮತದಾನವನ್ನು ಬಳಸಿಕೊಂಡು ಸುಮಾರು 100 ಮಿಲಿಯನ್ ಜನರು ಈಗಾಗಲೇ ಮತ ಚಲಾಯಿಸಿದ್ದಾರೆ.ಯುಎಸ್ ಚುನಾವಣೆಯು ಈ ಬಾರಿ ದಾಖಲೆಯ ಮತದಾನವನ್ನು ಎದುರು ನೋಡುತ್ತಿದೆ. 2016 ರಲ್ಲಿ ಮೇಲ್ ಮೂಲಕ ಪಡೆದ ಮತಗಳು ಒಟ್ಟು ಮತದಾನದ 70 ರಷ್ಟಿತ್ತು ಎನ್ನಲಾಗಿದೆ.