ಕೇನ್ಸ್ (ಫ್ರಾನ್ಸ್): ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದಾಗಿರುವ ಕೇನ್ಸ್ ಚಲನಚಿತ್ರೋತ್ಸವಕ್ಕೆ 75 ವರ್ಷ ತುಂಬಿದೆ. ಇನ್ನು ಈ ವರ್ಷದ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರ ಸದಸ್ಯರಲ್ಲಿ ಒಬ್ಬರಾಗಿ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನು ಓದಿ: Sundar Pichai: ಗೂಗಲ್ ದೈತ್ಯ ಸಿಇಒ ಸುಂದರ್ ಪಿಚೈ ಆಸ್ತಿ ಮೌಲ್ಯ ಎಷ್ಟು ಗೊತ್ತಾ?
ಈ ವರ್ಷದ ಪಾಮ್ ಡಿ ಓರ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುವ ಜ್ಯೂರಿ ಅಧ್ಯಕ್ಷ ಮತ್ತು ಸ್ಪರ್ಧೆಗಳ ವಿಜೇತರನ್ನು ಆಯ್ಕೆ ಮಾಡುವ ತೀರ್ಪುಗಾರರ ಪಟ್ಟಿಯನ್ನು ಏಪ್ರಿಲ್ 26ರ ರಾತ್ರಿ ʼಫೆಸ್ಟವಲ್ ದೆ ಕೇನ್ಸ್ʼ ಎಂಬ ಚಲನಚಿತ್ರೋತ್ಸವದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಹಿರಂಗಪಡಿಸಲಾಗಿದೆ.
C’est l'acteur français Vincent Lindon qui présidera le Jury du 75e Festival de Cannes ! Entouré de ses huit jurés, il remettra la Palme d’or à l’un des 21 films de la Compétition le samedi 28 mai, lors de la Cérémonie de clôture. #Cannes2022
► https://t.co/f1KHJGhheX pic.twitter.com/gsG9WjGA0O— Festival de Cannes (@Festival_Cannes) April 26, 2022
2017ರಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ಗೆ ದೀಪಿಕಾ ಪಡುಕೋಣೆ ಪಾದಾರ್ಪಣೆ ಮಾಡಿದ್ದರು. ಇನ್ನು ಈ ಬಾರಿ ತೀರ್ಪುಗಾರರಾಗಿ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಅಸ್ಗರ್ ಫರ್ಹಾದಿ, ಜೆಫ್ ನಿಕೋಲ್ಸ್, ರೆಬೆಕಾ ಹಾಲ್, ನೂಮಿ, ಇಟಾಲಿಯನ್ ನಟಿ - ನಿರ್ದೇಶಕಿ ಜಾಸ್ಮಿನ್ ಟ್ರಿಂಕಾ, ಲಾಡ್ಜ್ ಲೈ, ಜೋಕಿಮ್ ಟ್ರೈಯರ್ ಇದ್ದಾರೆ. ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರು 75ನೇ ಕೇನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರ(ಜ್ಯೂರಿ) ಅಧ್ಯಕ್ಷರಾಗಿರುತ್ತಾರೆ. ಕೇನ್ಸ್ ಚಲನಚಿತ್ರೋತ್ಸವವು ಮೇ 17 ರಂದು ಪ್ರಾರಂಭವಾಗಲಿದೆ. ವಿಜೇತರನ್ನು ಮೇ 28 ರಂದು ಕೇನ್ಸ್ನಲ್ಲಿ ನಡೆಯುವ ಸಮಾರಂಭದಲ್ಲಿ ಘೋಷಿಸುತ್ತಾರೆ.
ಇದನ್ನು ಓದಿ: NRIಗಳಿಗಾಗಿ ಕರ್ನಾಟಕದಲ್ಲಿ ಜಾರಿಯಾಗಿದೆ ನೀತಿಗಳು: ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಏನಿದು ಕೇನ್ಸ್ ಚಲನಚಿತ್ರೋತ್ಸವ:
ಕೇನ್ಸ್ ಚಲನಚಿತ್ರೋತ್ಸವ ಈ ಬಾರಿ 75ನೇ ವರ್ಷವನ್ನು ಆಚರಿಸಿಕೊಳ್ಳಲಿದೆ. ಇದು ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದು. ಇದನ್ನು ಸಾಂಪ್ರದಾಯಿಕವಾಗಿ ಕ್ರೊಯಿಸೆಟ್ನಲ್ಲಿನ ಪಲೈಸ್ ಡೆಸ್ ಫೆಸ್ಟಿವಲ್ಗಳಲ್ಲಿ ನಡೆಸಲಾಗುತ್ತದೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಡೆಯುವ ರೆಡ್ ಕಾರ್ಪೆಟ್ಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಗೌರವವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.