Coronavirus: ಕೇವಲ ಲಸಿಕೆ ಮಾತ್ರ ಈ ವಿಶ್ವವನ್ನು ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯ ಎಂದ ವಿಶ್ವಸಂಸ್ಥೆ

ಕೊವಿಡ್-19 ಲಸಿಕೆಯಿಂದ ಮಾತ್ರ ಜಗತ್ತಿನಲ್ಲಿನಲ್ಲಿ ಉದ್ಭವಿಸಿರುವ ಆತಂಕದ ಸ್ಥಿತಿ ಸಾಮಾನ್ಯಕ್ಕೆ ಮರಳಲು ಸಾಧ್ಯ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ  ಆಂಟೋನಿಯೊ ಗುಟಾರೆಸ್ ಬುಧವಾರ ಹೇಳಿದ್ದಾರೆ.

Last Updated : Apr 16, 2020, 12:27 PM IST
Coronavirus: ಕೇವಲ ಲಸಿಕೆ ಮಾತ್ರ ಈ ವಿಶ್ವವನ್ನು ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯ ಎಂದ ವಿಶ್ವಸಂಸ್ಥೆ title=

ಕೊವಿಡ್-19 ಲಸಿಕೆಯಿಂದ ಮಾತ್ರ ಜಗತ್ತಿನಲ್ಲಿನಲ್ಲಿ ಉದ್ಭವಿಸಿರುವ ಆತಂಕದ ಸ್ಥಿತಿ ಸಾಮಾನ್ಯಕ್ಕೆ ಮರಳಲು ಸಾಧ್ಯ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ  ಆಂಟೋನಿಯೊ ಗುಟಾರೆಸ್ ಬುಧವಾರ ಹೇಳಿದ್ದಾರೆ. ಇದೆ ವೇಳೆ ಈ ವರ್ಷದ ಅಂತ್ಯದ ವರೆಗೆ ಲಸಿಕೆ ಸಿದ್ಧವಾಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, "ಸುರಕ್ಷಿತವಾಗಿರುವ ಮತ್ತು ಪರಿಣಾಮಕಾರಿಯಾಗಿರುವ ಲಸ್ಕಿಕೆ ಮಾತ್ರ ಈ ಜಗತ್ತನ್ನು ಸಹಜ ಸ್ಥಿತಿಗೆ ತರಲು ಸಾಧ್ಯ. ಲಕ್ಷಾಂತರ ಜೀವ ಉಳಿಸಲು ಮತ್ತು ಟ್ರಿಲಿಯನ್ ಡಾಲರ್ ಉಳಿಸುವ ಏಕೈಕ ಸಾಧನ ಎಂದರೆ ಅದು ಪರಿಣಾಮಕಾರಿ ಲಸಿಕೆ" ಎಂದು ಆಫ್ರಿಕನ್ ದೇಶಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಸಮ್ಮೇಳನದಲ್ಲಿ ಅವರು ಹೇಳಿದ್ದಾರೆ. ಲಸಿಕೆಯ ಶೀಘ್ರ ಉತ್ಪಾದನೆ ಹಾಗೂ ಎಲ್ಲ ದೇಶಗಳಿಗೆ ಅದರ ಪೂರೈಕೆಯನ್ನು ಸುನಿಶ್ಚಿತಗೊಳಿಸಬೇಕು. ಇದರಿಂದ ಮಾತ್ರ ನಾವು ಈ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಬಹುದು ಮತ್ತು ಜಾಗತಿಕ ಲಾಭವನ್ನು ನಿರೀಕ್ಷಿಸಬಹುದು ಎಂದು ಅವರು ಹೇಳಿದ್ದಾರೆ.

ಸದ್ಯ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1238೦ ಕ್ಕೆ ತಲುಪಿದ್ದು, ಒಟ್ಟು 414 ಜನ ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ಕೊರೊನಾ ಸೋಂಕಿಗೆ ಅತಿ ಹೆಚ್ಚು ಗುರಿಯಾದ ರಾಜ್ಯವಾಗಿದ್ದು, ಇಲ್ಲಿ ಕೋರೋಣ ವೈರಸ್ ರೋಗಕ್ಕೆ ಸುಮಾರು 187 ಜನ ಬಲಿಯಾಗಿದ್ದಾರೆ. ಈಗಾದಲೇ ದೇಶಾದ್ಯಂತ ಸುಮಾರು 17೦ ಹಾಟ್ ಸ್ಪಾಟ್ ಜಿಲ್ಲೆಗಳನ್ನು ಗುರುತಿಸಲಾಗಿದ್ದು, ಹಾಟ್ ಸ್ಪಾಟ್ ಗಳಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುವ ಸುಮಾರು 207 ಜಿಲ್ಲೆಗಳ ಮೇಲೆಯೂ ಕೂಡ ನಿಗಾ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ಇನ್ನು ವಿಶ್ವಾದ್ಯಂತ ಕೊರೊನಾ ವೈರಸ್ ನ ಸ್ಥಿತಿಗತಿ ಕುರಿತು ಹೇಳುವದಾದರೆ. ಜಾಗತಿಕವಾಗಿ ಸಾವುಗಳ ಸಂಖ್ಯೆಯ ಜೊತೆಗೆ ಸೋಂಕಿತರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹೊಸ ಪ್ರಕರಣಗಳ ಕುರಿತು ಹೇಳುವುದಾದರೆ, ವಿಶ್ವಾದ್ಯಂತ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ನ ಸುಮಾರು 83 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವರಲ್ಲಿ 7 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ವಿಶ್ವಾದ್ಯಂತ ಒಟ್ಟು ಕೊರೊನಾ ವೈರಸ್ ಸೋಂಕಿಗೆ ಗುರಿಯಾದವರ ಸಂಖ್ಯೆ 2,082,372 ಕ್ಕೆ ತಲುಪಿದ್ದು, 134,560 ಜನರು ಈ ಮಾರಕ ಕಾಯಿಲೆಗೆ ಪ್ರಾಣ ಕಳೆದುಕೊಂಡಿದ್ದಾರೆ.

ಅಮೆರಿಕಾದ ಮೇಲೆ ಕೊರೊನಾ ವೈರಸ್ ಅತಿ ಹೆಚ್ಚು ಪ್ರಭಾವ ಬೀರಿದೆ. ಈ ವೈರಸ್ ನ ಸೋಂಕಿನ ಕಾರಣ ಅಮೇರಿಕಾದಲ್ಲಿ 6 ಲಕ್ಷಕ್ಕೂ ಅಧಿಕ ಜನರು ಬಳಲುತ್ತಿದ್ದಾರೆ. ಇನ್ನೊಂದೆಡೆ ಸುಮಾರು 28 ಸಾವಿರ ಜನರು ಇದುವರೆಗೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ಪಟ್ಟಣ ಕೊರೊನಾ ವೈರಸ್ ನ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಇದೆ ಕಾರಣದಿಂದ ನ್ಯೂಯಾರ್ಕ್ ಮೇಯರ್ ಅಲ್ಲಿನ ಜನರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ.

Trending News