Arrest Warrent Against Masood Azhar: ಇಸ್ಲಾಮಾಬಾದ್ - ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕನೆಂದು ಘೋಷಿಸಲ್ಪಟ್ಟ ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಟೆರರ್ ಫಂಡಿಂಗ್ ಪ್ರಕರಣದಲ್ಲಿ ಜನವರಿ 18 ರೊಳಗೆ ಬಂಧಿಸಬೇಕು ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಪಂಜಾಬ್ ಪೊಲೀಸರಿಗೆ ಆದೇಶಿಸಿದೆ. ಅಜರ್ ವಿರುದ್ಧ ಈ ಬಂಧನದ ವಾರಂಟ್ ಅನ್ನು ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಗುಜ್ರಾನ್ವಾಲಾ ಹೊರಡಿಸಿದೆ.
ಈ ಕುರಿತು ಶನಿವಾರ ಪಿಟಿಐ-ಭಾಷಾ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, "ಎಟಿಸಿ ಗುಜರಾನ್ಮ್ವಾಲಾ ನ್ಯಾಯಾಧೀಷೆಯಾಗಿರುವ ನತಾಷಾ ನಸೀಮ್ ಸುಪ್ರಾ, ಶುಕ್ರವಾರ ನಡೆದ ವಿಚಾರಣೆಯ ವೇಳೆ ಸಿಟಿಡಿಗೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಅಜರ್ ನನ್ನು ಜನವರಿ 18ರವರೆಗೆ ಬಂಧಿಸಿ, ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ನಿರ್ದೇಶನಗಳನ್ನು ನೀಡಿದ್ದಾರೆ. ಉಗ್ರರಿಗೆ ಆರ್ಥಿಕ ನೆರವು ಹಾಗೂ ಉಗ್ರ ಸಾಮಗ್ರಿಗಳ ಪೂರೈಕೆಯ ಆರೋಪ ಅಜರ್ ಎದುರಿಸುತ್ತಿದ್ದಾನೆ" ಎಂದು ಹೇಳಿದ್ದಾರೆ.
ಇದನ್ನು ಓದಿ- ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ JeM ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನ ಜೈಲಿನಲ್ಲಿಲ್ಲ
ಇದಕ್ಕೂ ಮೊದಲು ಗುರುವಾರ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಉಗ್ರರಿಗೆ ಆರ್ಥಿಕ ನೆರವು ಒದಗಿಸಿದ ಆರೋಪದ ಮೇಲೆ ಪ್ರತಿಬಂಧಿತ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನನ್ನು ಬಂಧಿಸುವಂತೆ ವಾರಂಟ್ ಜಾರಿಗೊಳಿಸಿತ್ತು. ಪಂಜಾಬ್ ಪೊಲೀಸರ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಪ್ರಾರಂಭಿಸಿದ ಭಯೋತ್ಪಾದಕ ಹಣಕಾಸು ಪ್ರಕರಣದ ತನಿಖೆಯ ಸಂದರ್ಭದಲ್ಲಿ ಗುಜ್ರಾನ್ವಾಲಾ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಜೆಇಎಂನ ಕೆಲವು ಸದಸ್ಯರ ವಿರುದ್ಧ ವಾರಂಟ್ ಹೊರಡಿಸಿತ್ತು.
ಇದನ್ನು ಓದಿ- ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಘೋಷಣೆ
ಎಟಿಸಿ ಗುಜ್ರಾನ್ವಾಲಾ ನ್ಯಾಯಾಧೀಶೆ ನತಾಶಾ ನಾಸಿಮ್ ಸುಪ್ರಾ, ಮಸೂದ್ ಅಜರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಟಿಡಿಗೆ ನಿರ್ದೇಶನ ನೀಡಿದ್ದಾರೆ. ಜೆಇಎಂ ಮುಖ್ಯಸ್ಥ ಭಯೋತ್ಪಾದನೆಗೆ ಆರ್ಥಿಕ ಸಹಾಯ ಒದಗಿಸುವಲ್ಲಿ ಭಾಗಿಯಾಗಿದ್ದಾರೆ ಮತ್ತು ಅವರು ಜಿಹಾದಿ ಸಾಹಿತ್ಯವನ್ನು ಮಾರಾಟ ಮಾಡುತ್ತಾರೆ ಎಂದು ಸಿಟಿಡಿ ನ್ಯಾಯಾಧೀಶೆಗೆ ತಿಳಿಸಿದ್ದಾರೆ. ಸಿಟಿಡಿ ಇನ್ಸ್ಪೆಕ್ಟರ್ ವೋರ್ವರ ಆಗ್ರಹದ ಮೇರೆಗೆ ಎಟಿಸಿ ನ್ಯಾಯಾಧೀಶರು ಅಜರ್ ನ ಬಂಧನಕ್ಕೆ ವಾರಂಟ್ ಹೊರಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅಜರ್ ತನ್ನ ಸ್ಥಳೀಯ ನಗರವಾದ ಬಹವಾಲ್ಪುರದಲ್ಲಿ ಗೌಪ್ಯ ಸ್ಥಳವೊಂದರಲ್ಲಿ ಸುರಕ್ಷಿತವಾಗಿ ಅವಿತುಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ- ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಮತ್ತೆ ಚೀನಾ ಅಡ್ಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.